ಸಚಿವ ರಮಾನಾಥ ರೈ ಪ್ರವಾಸ
ಮಂಗಳೂರು, ಎ.7: ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಎ.8ರಿಂದ 10ರವರೆಗೆ ಜಿಲ್ಲೆಯಲ್ಲಿ ಕೈಗೊ ಳ್ಳುವ ಪ್ರವಾಸ ವಿವರ ಇಂತಿವೆ;
ಎ.8ರಂದು ಬೆಳಗ್ಗೆ 11 ಗಂಟೆಗೆ ಪುತ್ತೂರು ಯುವ ಬಂಟರ ಸಂಘದಿಂದ ಬಂಟರ ದಿನಾಚರಣೆ, ಸಂಜೆ 4:30ಕ್ಕೆ ಮುಖ್ಯಮಂತ್ರಿ ಜಿಲ್ಲಾ ಭೇಟಿ ಬಗ್ಗೆ ಮೂಡಾ ಕಚೇರಿಯಲ್ಲಿ ಪೂರ್ವಭಾವಿ ಸಭೆ, 6 ಗಂಟೆಗೆ ಮೊಗರನಾಡು ಸಾವಿರ ಸೀಮೆಯ ನಿಟಿಲಾಕ್ಷ ದೇವಸ್ಥಾನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, 6:30 ಮಂಚಿ ನಾಟಕೋತ್ಸವ ಉದ್ಘಾಟನೆಯಲ್ಲಿ ಭಾಗವಹಿಸುವರು.
ಎ.9ರಂದು ಗೋಳ್ತಮಜಲಿನಲ್ಲಿ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಉದ್ಘಾಟನೆ, 9:30ಕ್ಕೆ ಕನ್ಯಾನ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮ, ಸಂಜೆ 4ಕ್ಕೆ ಮೂಡುಬಿದಿರೆ ಸೇವಾ ಸಹಕಾರಿ ಬ್ಯಾಂಕ್ ಶತಮಾನೋತ್ಸವ, 5 ಗಂಟೆಗೆ ಮಂಗಳೂರು ಕರಾವಳಿ ಉತ್ಸವ ಮೈದಾನದಲ್ಲಿ ರೆಡ್ ಎಫ್‌ಎಂ ವತಿಯಿಂದ ‘ತುಳು ಫಿಲ್ಮ್ ಅವಾರ್ಡ್’ ಕಾರ್ಯಕ್ರಮ, 7:30ಕ್ಕೆ ಬೊಳ್ಳಾಯಿ ಕಂಚಿಲ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ ವಾರ್ಷಿಕೋತ್ಸವ ಅಂಗವಾಗಿ ಬುರ್ದಾ ಮಜ್ಲಿಸ್ ಕಾರ್ಯಕ್ರಮ.
ಎ.10ರಂದು ಬೆಳಗ್ಗೆ 10ಕ್ಕೆ ಮಂಚಿ ಕಂಚಿಲದ ಮಹಾದೇವ ಮಿತ್ರ ಮಂಡಳಿಯ ಕಬಡ್ಡಿ ಪಂದ್ಯಾಟ ಉದ್ಘಾಟನೆ, 11ಕ್ಕೆ ಮಂಗಳೂರು ಪುರಭವನದಲ್ಲಿ ಜಿಲ್ಲಾ ಆದಿದ್ರಾವಿಡ ಸಮಾಜ ಸೇವಾ ಸಂಘದ ಸಮಾವೇಶ, ಸಂಜೆ 5:30ಕ್ಕೆ ದ.ಕ. ಜಿಲ್ಲಾ ಲೇವಾದೇವಿ ಹಾಗೂ ಗಿರವಿದಾರರ ಒಕ್ಕೂಟ ಉದ್ಘಾಟನೆ, ಕದ್ರಿ ಮಲ್ಲಿಕಟ್ಟೆ ಲಯನ್ಸ್ ಸೇವಾ ಮಂದಿರ, ಸಂಜೆ 6ಕ್ಕೆ ಏಕತಡ್ಕ ಒಳಮೊಗರು ಹಿ.ಪ್ರಾ.ಶಾಲೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.





