ಮುಲ್ಕಿ: ಲಯನ್ಸ್ ಕ್ಲಬ್ ಕಟ್ಟಡದ ಪಾರ್ಶ್ವ ಕುಸಿತ
ಮೂಲ್ಕಿ, ಎ.7: ಇಲ್ಲಿನ ಬಸ್ ನಿಲ್ದಾಣದ ಬಳಿ ಇರುವ ಲಯನ್ಸ್ ಕ್ಲಬ್ ಕಟ್ಟಡದ ಪಾರ್ಶ್ವ ಕುಸಿದು ಮೂವರು ಅಲ್ಪಸ್ವಲ್ಪ ಗಾಯಗೊಂಡ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ಗುರುವಾರ ಮಧ್ಯಾಹ್ನ ವೇಳೆ ಬೀಸಿದ ಭಾರೀ ಗಾಳಿಗೆ ಲಯನ್ಸ್ ಕ್ಲಬ್ ಕಟ್ಟಡದ ಎದುರು ಬದಿಯ ಶೀಟಿನ ಛಾವಣಿಯು ಕಬ್ಬಿಣದ ಸರಳುಗಳೊಂದಿಗೆ ಕೆಳಗೆ ಬಿದ್ದಿದೆ. ಈ ಸಂದರ್ಭ ಕೆಳಗಡೆ ಬೈಕ್ ಸರ್ವೀಸ್ಗೆಂದು ಬಂದಿದ್ದ ಸ್ಥಳೀಯ ನಿವಾಸಿಗಳಾದ ವರುಣ್, ನಿತಿನ್, ಸಂತೋಶ್ ಎಂಬವರ ಮೇಲೆ ಶೀಟು ಬಿದ್ದಿದ್ದು ಮೂವರೂ ಅಲ್ಪಸ್ವಲ್ಪಗಾಯಗಳೊಂದಿಗೆ ಅಪಾ ಯದಿಂದ ಪಾರಾಗಿದ್ದಾರೆ.
ಹಲವಾರು ವರ್ಷಗಳಿಂದ ಮುಲ್ಕಿ ಲಯನ್ಸ್ ಕಟ್ಟಡವು ಶಿಥಿಲಾವಸ್ಥೆಯಲ್ಲಿದ್ದು ಕುಸಿತದ ಭೀತಿ ಎದುರಿಸುತ್ತಿದೆ. ಈ ಕಟ್ಟಡದ ಕೆಳಭಾಗದಲ್ಲಿ ಕೆಲವು ಅಂಗಡಿಗಳಿದ್ದು ಜೀವಭಯದಲ್ಲೇ ಕಾಲ ಕಳೆಯಬೇಕಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
Next Story