85 ವಿಮಾನಗಳ 25,000 ಪ್ರಯಾಣಿಕರ ಜೀವ ಗಂಡಾಂತರಕ್ಕೆ ಬಿದ್ದ ಆ ಹತ್ತು ನಿಮಿಷಗಳು

ಕೊಲ್ಕತ್ತಾ, ಎ. 8: ಕೊಲ್ಕತ್ತಾ ವಾಯು ಸಾರಿಗೆ ನಿಯಂತ್ರಣ ವಿಭಾಗ ಹಾಗೂ ಹಾರಾಟದಲ್ಲಿದ್ದ 85 ವಿಮಾನಗಳ ನಡುವಿನ ಸಂಪರ್ಕ ಕಡಿದು ಹೋದ ಹಿನ್ನೆಲೆಯಲ್ಲಿ 25 ಸಾವಿರ ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾದ ಭೀತಿ ಹತ್ತು ನಿಮಿಷಗಳ ಕಾಲ ಉದ್ವಿಗ್ನತೆಗೆ ಕಾರಣವಾಯಿತು.
ಸುಮಾರು 1 ಗಂಟೆ 40 ನಿಮಿಷ ಕಾಲ ನಿಯಂತ್ರಣ ಕೇಂದ್ರದ ರಾಡಾರ್‌ಗಳು ಹಾಗೂ ಪ್ರಮುಖ ವಿಎಚ್‌ಎಫ್ ರೇಡಿಯೊ ಲಿಂಕ್ ವೈಫಲ್ಯದಿಂದಾಗಿ 35 ಮಂದಿ ನಿಯಂತ್ರಕರು ಪಕ್ಕದ ಎಟಿಸಿ ಮೊಬೈಗಳಿಗೆ ಎಚ್ಚರಿಕೆ ಸಂದೇಶ ರವಾನಿಸಲು ಫೋನ್ ಸಂಪರ್ಕಕ್ಕಾಗಿ ತಡಕಾಡಿದರು. "ಆದರೆ ಸ್ಥಿರ ದೂರವಾಣಿಗಳು ಕೂಡಾ ನಿಷ್ಕ್ರಿಯವಾದವು. ಇದರಿಂದ ನಿಜಕ್ಕೂ ಆತಂಕ ಉಂಟಾಯಿತು. ತಕ್ಷಣ ನಾಗ್ಪುರ ಹಾಗೂ ವಾರಣಾಸಿ ಎಟಿಸಿಗಳ ಮೂಲ ಸಂದೇಶ ರವಾನಿಸುವಂತೆ ಪೈಲಟ್‌ಗಳಿಗೆ ಸೂಚಿಸಿದೆವು" ಎಂದು ಕಂಟ್ರೋಲರ್ ಹೇಳಿದರು.
ಗುರುವಾರ ಮುಂಜಾನೆ 7.35ರ ಸುಮಾರಿಗೆ ಈ ಘಟನೆ ನಡೆದಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು ನಾಗರಿಕ ವಿಮಾನಯಾನ ವಿಭಾಗದ ಮಹಾನಿರ್ದೇಶಕರು ಹೇಳಿದ್ದಾರೆ.
ತುರ್ತು ಕ್ರಮವಾಗಿ ಪೈಲಟ್‌ಗಳ ಸಂಪರ್ಕಕ್ಕಾಗಿ ನಿಯಂತ್ರಕರು ಅತ್ಯಧಿಕ ಫ್ರೀಕ್ವೆನ್ಸಿ ಸಂವಹನಕ್ಕಾಗಿ, ವಿಮಾನಗಳ ನಡುವಿನ ಅಂತರ ಹೆಚ್ಚಿಸುವಂತೆ ಕೋರಿದರು.
9.15ರ ಸುಮಾರಿಗೆ ಬಿಎಸ್‌ಎನ್‌ಎಲ್ ಸಮಸ್ಯೆ ನಿರ್ವಹಿಸಿ, ಲಿಂಕ್ ಸರಿ ಮಾಡಿಕೊಟ್ಟಿತು. ಕಂಟ್ರೋಲರ್‌ಗಳು ಬಹಳ ಹಿಂದಿನಿಂದಲೂ ಖಾಸಗಿ ಟೆಲಿಕಾಂ ಸೇವಾ ಕಂಪನಿಗಳ ಸೇವೆಗಾಗಿ ಆಗ್ರಹ ಮಂಡಿಸುತ್ತಲೇ ಬಂದಿದ್ದಾರೆ. ಆದರೆ ಕೆಂಪುಪಟ್ಟಿಯ ಕಾರಣದಿಂದ ಬಿಎಸ್‌ಎನ್‌ಎಲ್ ಅವಲಂಬಿಸಬೇಕಾಗಿದೆ.







