ತಿರುವನಂತಪುರದಲ್ಲಿ ಶ್ರೀಶಾಂತ್ ಸ್ಪಧೆರ್ಯಿಂದಕಾಂಗ್ರೆಸ್ ಗೆಲುವು ಸುಲಭ: ಶಶಿ ತರೂರ್

ಕೊಚ್ಚಿ, ಎ.8: ಮುಂಬರುವ ಅಸೆಂಬ್ಲಿ ಚುನಾವಣೆಯಲ್ಲಿ ತಿರುವನಂತಪುರ ಕ್ಷೇತ್ರದಲ್ಲಿ ಕ್ರಿಕೆಟಿಗ ಶ್ರೀಶಾಂತ್‌ರನ್ನು ಕಣಕ್ಕಿಳಿಸಲು ನಿರ್ಧರಿಸಿರುವ ಬಿಜೆಪಿಯು ಕಾಂಗ್ರೆಸ್ ಅಭ್ಯರ್ಥಿಯ ಗೆಲುವನ್ನು ಖಚಿತ ಎಂಬ ಸಂದೇಶವನ್ನು ರವಾನಿಸಿದೆ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
‘‘ಶ್ರೀಶಾಂತ್‌ರನ್ನು ಓರ್ವ ಕ್ರಿಕೆಟಿಗನಾಗಿ ನಾನು ತುಂಬಾ ಇಷ್ಟಪಡುತ್ತೇನೆ. ಆದರೆ, ಕೇರಳದ ಚುನಾವಣೆಯ ಕಣದಲ್ಲಿ ಚಿತ್ರನಟರು ಹಾಗೂ ಕ್ರೀಡಾಪಟುಗಳು ಯಶಸ್ಸು ಕಂಡಿಲ್ಲ. ತಿರುವನಂತಪುರದ ಮಧ್ಯಮ ವರ್ಗದ ಜನರು ಹಾಗೂ ವೃತ್ತಿಪರರು ಕ್ರೀಡಾಪಟುಗಳಿಗೆ ಮತ ಹಾಕುವ ಸಾಧ್ಯತೆಯೇ ಇಲ್ಲ’’ ಎಂದು ತರೂರ್ ಬೆಟ್ಟು ಮಾಡಿದರು.
ಐಪಿಎಲ್‌ನ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದಲ್ಲಿ ತಿಹಾರ್ ಜೈಲಿನಲ್ಲಿ ಕೆಲವು ಕಾಲ ಶಿಕ್ಷೆ ಅನುಭವಿಸಿದ್ದ ಶ್ರೀಶಾಂತ್ ಬಿಸಿಸಿಐಯಿಂದ ಎಲ್ಲ ಕ್ರಿಕೆಟ್ ಚಟುವಟಿಕೆಯಿಂದ ನಿಷೇಧ ಎದುರಿಸುತ್ತಿದ್ದಾರೆ. ಕೇರಳ ಎಕ್ಸ್‌ಪ್ರೆಸ್ ಖ್ಯಾತಿಯ ಶ್ರೀಶಾಂತ್ ಇತ್ತೀಚೆಗೆ ಹೊಸದಿಲ್ಲಿಯಲ್ಲಿ ಬಿಜೆಪಿಯನ್ನು ಸೇರ್ಪಡೆಯಾಗಿದ್ದು, ಪಕ್ಷ ಸೇರಿದ ತಕ್ಷಣವೇ ಅವರಿಗೆ ತಿರುವನಂತಪುರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.





