NIA ಅಧಿಕಾರಿ ತಂಝೀಲ್ ಅಹ್ಮದ್ ಕಗ್ಗೊಲೆ : IGP ಹಸಿ ಸುಳ್ಳು ಹೇಳಿದರೆ ?
ತದ್ವಿರುದ್ಧ ಹೇಳಿಕೆ ನೀಡಿದ ಪ್ರತ್ಯಕ್ಷದರ್ಶಿ

ಬಿಜ್ನೋರ್, ಎಪ್ರಿಲ್.8: ಎನ್‌ಐಎ ಅಧಿಕಾರಿ ಮುಹಮ್ಮದ್ ತಂಝೀಲ್‌ರ ಹತ್ಯಾ ಪ್ರಕರಣದಲ್ಲಿ ಬರೇಲಿ ಝೋನ್‌ನ ಐಜಿಯವರ ಶುದ್ಧ ಸುಳ್ಳು ಬಹಿರಂಗಗೊಂಡಿದೆ ಎಂದು ಕೊಹ್‌ರಾಮ್.ಕಾಮ್ ವೆಬ್ ಪೋರ್ಟಲ್ ವರದಿ ಮಾಡಿದೆ. ಐಜಿಯವರು ಪೊಲೀಸರು ಕೇವಲ ಐದು ನಿಮಿಷದಲ್ಲಿ ಘಟನೆಯ ಸ್ಥಳಕ್ಕೆ ತಲುಪಿದ್ದರು ಎಂದು ಹೇಳಿದ್ದರು. ಆದರೆ ಪ್ರತ್ಯಕ್ಷದರ್ಶಿ ಸಾಕ್ಷಿಯು ಎಲ್ಲರಿಗಿಂತ ಮೊದಲು ರಾತ್ರೆಯ ವೇಳೆ 100 ನಂಬರ್‌ಗೆ ಫೋನ್ ಮಾಡಿ ಹತ್ಯೆಯಾಗಿರುವ ಸುದ್ದಿಯನ್ನು ಪೊಲೀಸರಿಗೆ ತಾನೇ ನೀಡಿದ್ದೆ ಮತ್ತು ಪೊಲೀಸರು ಅರ್ಧಗಂಟೆ ಕಳೆದರೂ ಘಟನಾ ಸ್ಥಳಕ್ಕೆ ಬಂದಿರಲಿಲ್ಲ ಎಂದು ಪ್ರತ್ಯಕ್ಷ ದರ್ಶಿ ಸಾಕ್ಷಿಯು ತಿಳಿಸಿದ್ದಾರೆ ಎಂದು ಕೊಹ್ರಾಮ್ ಡಾಟ್ ಕಾಮ್ ವೆಬ್‌ಪೋರ್ಟಲ್ ವರದಿಮಾಡಿದೆ.
ಘಟನೆ ನಡೆದ ಸ್ಥಳಕ್ಕೂ ಪೊಲೀಸ್ ಚೌಕಿಗೂ ಕೇವಲ 200 ಮೀಟರ್ ದೂರವಿತ್ತು. ಇಷ್ಟು ದೂರವನ್ನು ತಲುಪಲು ಕೇವಲ 1 ಅಥವಾ 2 ನಿಮಿಷಗಳು ಸಾಕು. ಆದರೆ ಐಜಿ ಸಾಹೇಬರು ತಮ್ಮ ನಿಷ್ಕ್ರಿಯ ಪೊಲೀಸರ ರಕ್ಷಣೆಗಿಳಿದಿದ್ದಾರೆ. ಪ್ರತ್ಯಕ್ಷ ಸಾಕ್ಷಿ ಹೇಳಿರುವ ಪ್ರಕಾರ ಘಟನೆ ನಡೆದ ಸ್ಥಳಕ್ಕೆ ಬರುವ ಬದಲು ಮಾಹಿತಿ ನೀಡಿದ ವ್ಯಕ್ತಿಯನ್ನೆ ಠಾಣೆಗೆ ಬರಲು ಹೇಳಿದ್ದರು. ಆತ ಮಾನವೀಯ ಕರ್ತವ್ಯ ನಿಭಾಯಿಸಲಿಕ್ಕಾಗಿ ಅರ್ಧಗಂಟೆವರೆಗೂ ಪೊಲೀಸರ ಕಾದುಕುಳಿತಿದ್ದು ನಂತರ ಸ್ವಯಂ ತಾನೇ ಗಾಯಾಳು ಡೆಪ್ಯುಟಿ ಎಸ್ಪಿ ಮತ್ತು ಅವರ ಪತ್ನಿಯನ್ನು ಸ್ಯೋಹರಾದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದರು. ಬಿಜ್ನೋರ್‌ನಲ್ಲಿ ನಾಲ್ಕು ದಿವಸ ಮೊದಲು ತಡರಾತ್ರೆ ಸುಮಾರು ಒಂದು ಗಂಟೆಯ ಸಮಯದಲ್ಲಿ ಡೆಪ್ಯುಟಿ ಎಸ್ಪಿ ತಂಝೀಲ್‌ರನ್ನು ಅಜ್ಞಾತ ವ್ಯಕ್ತಿಗಳು ಗುಂಡು ಹಾರಿಸಿ ಕೊಲೆಗೈದಿದ್ದರು. ದುಷ್ಕರ್ಮಿಗಳು ಡೆಪ್ಯುಟಿ ಎಸ್ಪಿ ತಂಝೀಲ್‌ರ ಮೇಲೆ ಎರಡು ಡಝನ್‌ಗಿಂತಲೂ ಹೆಚ್ಚು ಗುಂಡುಗಳ ಸುರಿಮಳೆಗೈದಿದ್ದರು. ಅವರ ಪತ್ನಿಗೆ ಮೂರು ಗುಂಡುಗಳು ತಾಗಿದ್ದವು. ಅದೇ ವೇಳೆ ತಡರಾತ್ರೆ ಸ್ವಲ್ಪ ಸಮಯದ ನಂತರ ತಂಝಿಲ್‌ರ ಸಹೋದರ ರಾಗಿಬ್ ಘಟನೆ ಸ್ಥಳಕ್ಕೆ ತಲುಪಿದ್ದರು. ಆನಂತರ ಸಹಸಾಪುರ ಉಪ್ಪು ಪ್ಲಾಂಟ್‌ನಲ್ಲಿ ಕೆಲಸ ಮಾಡುವ ಬಿಹಾರದ ವ್ಯಕ್ತಿಯಾದ ಆಲಮ್ ಎಂಬವರು ತನ್ನ ವಾಹನದಲ್ಲಿ ಸಹಸಾ ಪುರಕ್ಕೆ ತೆರಳುತ್ತಿದ್ದರು. ಆಗ ಡೆಪ್ಯುಟಿ ಎಸ್ಪಿ ತಂಝೀಲ್‌ರ ಪುತ್ರಿ ಆಲಮ್‌ರ ವಾಹನವನ್ನು ತಡೆದು ನಿಲ್ಲಿಸಿ ಸಹಾಯವನ್ನು ಯಾಚಿಸಿದ್ದಳು ಎಂದು ವೆಬ್ ಸೈಟ್ ವರದಿ ವಿವರಿಸಿದೆ.
ಆಲಮ್‌ರು ಪ್ರಪ್ರಥಮವಾಗಿ ಈ ಹತ್ಯಾಕಾಂಡದ ಸುದ್ದಿಯನ್ನು ಠಾಣೆಯ 100 ನಂಬರ್‌ಗೆ ಫೋನ್ ಮಾಡಿ ತಿಳಿಸಿದರು. ಆನಂತರ ಅರ್ಧಗಂಟೆಕಾಲ ಪೊಲೀಸರನ್ನು ಕಾದರೂ ಪ್ರಯೋಜನವಾಗಿರಲಿಲ್ಲ. ಆದ್ದರಿಂದ ತಂಝೀಲ್ ಮತ್ತು ಅವರ ಪತ್ನಿ ಫರ್ಝಾನರನ್ನು ಸ್ಯೋಹರಾ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅವರು ತನ್ನ ವಾಹನದಲ್ಲಿ ಕರೆತಂದಿದ್ದರು.
ಅಲ್ಲಿನ ವೈದ್ಯರು ಅವರನ್ನು ಮೊರದಾಬಾದ್‌ನ ಕಾಸ್ಮೋಸ್ ಆಸ್ಪತ್ರೆಗೆ ಕರೆದೊಯ್ಯಲು ತಿಳಿಸಿದರು. ತಂಝೀಲ್‌ರ ಸಹೋದರ ಅವರನ್ನು ಮೊರದಾಬಾದ್‌ಗೆ ಕರೆದೊಯ್ದರು. ಅಷ್ಟಾಗಿ ಆಲಮ್ ತನ್ನ ರೂಮ್‌ಗೆ ತಲುಪಿದಾಗ ಪೊಲೀಸರ ಫೋನ್ ಬಂತು. ನೀನು ಪೊಲೀಸ್ ಸ್ಟೇಶನ್‌ಗೆ ಬಂದು ವಿಷಯವೇನೆಂದು ವಿವರಿಸು ಎಂದದಲ್ಲದೆ ಫೋನ್ ಮಾಡಿದ ಪೊಲೀಸ್ ಆಲಮ್‌ರೊಡನೆ ಕೆಟ್ಟದಾಗಿ ಮಾತಾಡಿದ್ದ. ಪ್ರತ್ಯಕ್ಷದರ್ಶಿ ಸಾಕ್ಷಿ ಪೊಲೀಸರು ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದುಆರೋಪಿಸಿದ್ದಾರೆ. ಆನಂತರ ಅವರು ಫೋನ್ ಬಂದ್ ಮಾಡಿದ್ದರು. ಇತ್ತ ತಂಝೀಲ್‌ರನ್ನು ವೈದ್ಯರು ಮೃತರಾಗಿದ್ದಾರೆಂದು ಘೋಷಿಸಿದ್ದರು. ಅವರ ಪತ್ನಿಗೆ ಈಗಲೂ ನೋಯ್ಡಿದ ಪೊರ್ಟಿಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ.
ಈ ಘಟನೆ ನಂತರ ಮೊತ್ತಮೊದಲು ಡಿಐಜಿ ಮತ್ತು ಆನಂತರ ಬರೇಲಿ ಐಜಿ ವಿಜಯ್ ಮೀನಾ ಘಟನಾ ಸ್ಥಳಕ್ಕೆ ತಲುಪಿದಾಗ ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸುತ್ತಾ ಘಟನೆ ಸ್ಥಳಕ್ಕೆ ಪೊಲೀಸರು ಐದು ನಿಮಿಷದಲ್ಲಿ ತಲುಪಿದ್ದರು ಎಂದು ಹೇಳಿದ್ದರು. ಬರೇಲಿಯ ಐಜಿ ಶುದ್ಧ ಸುಳ್ಳು ಹೇಳುವ ಮೂಲಕ ತಮ್ಮ ಪೊಲೀಸರನ್ನು ರಕ್ಷಿಸಲು ಹೆಣಗಿದ್ದಾರೆ. ಪೊಲೀಸರು ಘೋರ ನಿರ್ಲಕ್ಷ್ಯ ತೋರಿಸಿದ್ದಾರೆಂದು ಸಹಸಾಪುರದ ಜನರು ದೂರಿದ್ದಾರೆ. ಇಂತಹ ದೊಡ್ಡ ನಿರ್ಲಕ್ಷ್ಯಕ್ಕೆ ಐಜಿ ಸಾಹೇಬರು ತಪ್ಪಿಸ್ಥರ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವುದರ ಬದಲಾಗಿ ಪೊಲೀಸರನ್ನು ರಕ್ಷಿಸಲು ಇಳಿದಿರುವುದು ಕಂಡುಬರುತ್ತಿದೆ.
ಈ ಘಟನೆ ಐದು ದಿವಸ ಮೊದಲು ನಡೆದಿದೆ. ಮತ್ತು ಎನ್‌ಐಎ ಮತ್ತು ಎಸ್ಟಿಎಫ್‌ನ ದೊಡ್ಡ ಅಧಿಕಾರಿಗಳು ಬಿಜ್ನೋರ್‌ನಲ್ಲಿ ಕ್ಯಾಂಪ್ ಮಾಡಿದ್ದಾರೆ. ಆನಂತರವೂ ಎಡಿಜಿ ಲಾ ದಲ್‌ಜೀತ್ ಚೌಧರಿಯವರು ಕೂಡಾ ಅಲ್ಲಿಗೆ ಭೇಟಿ ನೀಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ಪೊಲೀಸರ ವಿರುದ್ಧಕ್ರಮ ಜರಗಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಈವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಕೊಹ್ರಾಮ್ ವೆಬ್‌ಪೋರ್ಟಲ್ ತಿಳಿಸಿದೆ.







