ಬಿಸಿಲ ಬೇಗೆ ತಣಿಸುವ Cool Cool ಐಟಂಗಳು ಇಲ್ಲಿವೆ
ನಗರಗಳ ಜನ ಬಿಸಿಲ ಬೇಗೆಗೆ ಬಳಲಿ ಬೆಂಡಾಗಿದ್ದಾರೆ. ಉಷ್ಣಾಂಶ 40 ಡಿಗ್ರಿ ಸೆಲ್ಷಿಯಸ್ ತಲುಪಿದೆ. ಪ್ರತಿಯೊಬ್ಬರ ಯೋಚನೆ ಒಂದೇ. ಕೂಲ್ ಕೂಲ್ ಆಗಿರುವುದು ಹೇಗೆ? ಇಲ್ಲಿವೆ ನೋಡಿ ಬೇಸಿಗೆಗೆ ನಿಮ್ಮ ಉತ್ತಮ ಖಾದ್ಯ ಹಾಗೂ ಪೇಯಗಳ ಆಯ್ಕೆ. ಇದು ನಿಮ್ಮನ್ನು ತಂಪಾಗಿರುವುದಷ್ಟೇ ಅಲ್ಲ; ಆರೋಗ್ಯವನ್ನೂ ಕಾಪಾಡುತ್ತದೆ.
ಮಾವಿನಹಣ್ಣಿನ ಲಸ್ಸಿ
ಹೆಸರಿಗೆ ತಕ್ಕಂತೆ ಹಣ್ಣುಗಳ ರಾಜ ಕ್ಯಾಲೋರಿಗಳ ಕಣಜ. ಆದರೆ ಜೀರ್ಣಕಾರಿ ಅಂಶಗಳ ಜತೆ ಇದನ್ನು ಧಾರಾಳವಾಗಿ ಸೇವಿಸಬಹುದು. ಮಾವು ಆಮ್ಲೀಯತೆ ಕಡಿಮೆ ಮಾಡುತ್ತದೆ; ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ. ಮಧುಮೇಹ ನಿಯಂತ್ರಣ, ಜೀರ್ಣಕ್ಕೂ ಇದು ಸಹಕಾರಿ, ನಿಮ್ಮ ತ್ವಚೆಯನ್ನು ಕಾಂತಿಯುತಗೊಳಿಸುತ್ತದೆ.
ನಿಂಬೆ ಶರಬತ್ತು
ಬಹುಶಃ ಇದು ಎಲ್ಲ ಕಾಲದ, ಎಲ್ಲ ವರ್ಗದ ಜನಪ್ರಿಯ ಪೇಯ. ಗ್ಲೂಕೋಸ್, ಖನಿಜ ಹಾಗೂ ಲವಣಾಂಶದಿಂದ ಕೂಡಿದ ನಿಂಬೆ ಶರಬತ್ತು ಆರೋಗ್ಯಕ್ಕೂ ಒಳ್ಳೆಯದು. ಬೇಸಿಗೆಯಲ್ಲಿ ಬಿಸಿಲ ಧಗೆಯಿಂದ ದೇಹದ ಖನಿಜ ಹಾಗೂ ಲವಣಾಂಶಗಳು ನಷ್ಟವಾಗುತ್ತವೆ. ಇದನ್ನು ಭರ್ತಿ ಮಾಡಲು ಸಿದ್ಧ ಪೇಯ ಇದು.
ಉಪಾಹಾರ
ಬದಾಮಿ, ಒಣದ್ರಾಕ್ಷಿ, ವೋಟ್ಸ್, ಬಾಳೆಹಣ್ಣು ಜತೆಗೆ ಒಂದಿಷ್ಟು ಜೇನು. ಇದು ಲೋಟದಲ್ಲಿ ತೆಗೆದುಕೊಳ್ಳಬಹುದಾದ ಉಪಾಹಾರ. ದಿಢೀರ್ ಆಹಾರ ದೇಹಕ್ಕೂ ಪೋಷಕಾಂಶಗಳನ್ನು ತಕ್ಷಣ ಬಿಡುಗಡೆ ಮಾಡುತ್ತದೆ. ಇದು ನಿಮ್ಮ ದೇಹವನ್ನು ಸ್ಥಿರಗೊಳಿಸುತ್ತದೆ.
ಹಣ್ಣುಗಳು
ನೀರಿನ ಅಂಶ ಅಧಿಕ ಇರುವ ಎಲ್ಲ ಹಣ್ಣುಗಳು ಉತ್ತಮ. ದ್ರಾಕ್ಷಿ ನಿಮ್ಮ ದೇಹದ ನೀರಿನ ಅಂಶವನ್ನು ಸಮತೋಲನಗೊಳಿಸಯತ್ತದೆ. ಸೋಡಿಯಂ, ಪೊಟ್ಯಾಷಿಯಂ ಹಾಗೂ ಆಂಟಿ ಓಕ್ಸಿಡೆಂಟ್‌ಗಳು ಹಣ್ಣುಗಳಲ್ಲಿ ಯಥೇಚ್ಛವಾಗಿರುತ್ತವೆ. ಕಲ್ಲಂಗಡಿ, ಕರಬೂಜ, ದ್ರಾಕ್ಷಿಯನ್ನು ನಿಯತವಾಗಿ ಸೇವಿಸಿ. ಇದರ ಜತೆಗೆ ಎಳೆ ಸೌತೆಕಾಯಿ ಕೂಡಾ ಆರೋಗ್ಯಕಾರಿ.
ಸೌತೆ, ಟೊಮ್ಯಾಟೊ, ಸಿಹಿಗುಂಬಳ, ಹಸಿರು ತರಕಾರಿಗಳು ಬಿಸಿಲಿನ ಬೇಗೆ ತಡೆಗೆ ಒಳ್ಳೆಯ ಅಸ್ತ್ರ. ಆಯಾ ಋತುವಿನಲ್ಲಿ ಸಿಗುವ ತರಕಾರಿಗಳನ್ನು ಯಥೇಚ್ಛವಾಗಿ ಬಳಸಿ. ನಿಮ್ಮ ಪಾನೀಯದ ಜತೆ ಒಂದಿಷ್ಟು ತುಳಸಿಬೀಜ ಇದ್ದರೆ, ಅದು ಎಲ್ಲ ದೃಷ್ಟಿಯಿಂದಲೂ ಪ್ರಯೋಜನಕಾರಿ.