ಶನಿ ಶಿಂಗ್ಣಾಪುರ ದೇಗುಲದಲ್ಲಿ ಮಹಿಳೆಯರಿಗೆ ಪೂಜೆಗೆ ಅವಕಾಶ
ದೇವಾಲಯದ ಟ್ರಸ್ಟ್‌ನ ಐತಿಹಾಸಿಕ ಹೆಜ್ಜೆ
ಮುಂಬೈ, ಎ.8: ಶನಿ ಶಿಂಗ್ಣಾಪುರ ದೇಗುಲದಲ್ಲಿ ಮಹಿಳೆಯರಿಗೆ ಮೂರ್ತಿ ಪೂಜೆ ಮಾಡಲು ದೇಗುಲದ ಟ್ರಸ್ಟ್ ಶುಕ್ರವಾರ ಕೊನೆಗೂ ಅವಕಾಶ ಕಲ್ಪಿಸುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ.
ಕಳೆದ 400 ವರ್ಷಗಳಿಂದ ಈ ದೇಗುಲದಲ್ಲಿ ಮಹಿಳೆಯರಿಗೆ ಪೂಜೆ ಮಾಡಲು ನಿರಾಕರಿಸಲಾಗುತ್ತಿತ್ತು. ಇತ್ತೀಚೆಗೆ ಮಹಿಳಾ ಪರ ಹೋರಾಟಗಾರ್ತಿ ತೃಪ್ತಿ ದೇಸಾಯಿ ನೇತೃತ್ವದಲ್ಲಿ ದೇಗುಲದಲ್ಲಿ ಮಹಿಳೆಯರಿಗೆ ಪೂಜೆ ಮಾಡಲು ಅವಕಾಶ ನೀಡುವಂತೆ ಹೋರಾಟಗಳು ನಡೆದಿದ್ದವು.
ಹೈಕೋರ್ಟ್‌ನ ಆದೇಶವನ್ನು ಅನುಸರಿಸಿ ದೇಗುಲದಲ್ಲಿ ಮಹಿಳೆಯರಿಗೆ ಪೂಜೆಯ ಅವಕಾಶ ಕಲ್ಪಿಸಲಾಗಿದೆ ಎಂದು ದೇಗುಲದ ಟ್ರಸ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
‘‘ಇದು ಮಹಿಳೆಯರಿಗೆ ಸಂದ ಜಯ. ಈ ನಿರ್ಧಾರಕ್ಕೆ ಕಾರಣವಾಗಿರುವ ಹೈಕೋರ್ಟ್, ಮಹಾರಾಷ್ಟ್ರ ಸರಕಾರ ಹಾಗೂ ದೇವಾಲಯದ ಟ್ರಸ್ಟ್‌ಗೆ ಕೃತಜ್ಞತೆೆ ಸಲ್ಲಿಸುವೆ’’ಎಂದು ತೃಪ್ತಿ ದೇಸಾಯಿ ಪ್ರತಿಕ್ರಿಯಿಸಿದ್ದಾರೆ.
Next Story





