ಪ್ರತ್ಯುಷಾ ಆತ್ಮಹತ್ಯೆ ಸುದ್ದಿ ಪ್ರಸಾರವನ್ನು ನೋಡಿ ತಾನೂ ನೇಣು ಹಾಕಿಕೊಂಡ ಗೃಹಿಣಿ!

ರಾಯ್‌ಪುರ, ಎಪ್ರಿಲ್. 8: ಟಿವಿ ನಟಿ ಪ್ರತ್ಯುಷಾ ಬ್ಯಾನರ್ಜಿಯ ಆತ್ಮಹತ್ಯೆಯ ಸುದ್ದಿಯನ್ನು ಟಿವಿಯಲ್ಲಿ ನೋಡಿದ್ದ ರಾಯ್‌ಪುರದ ಮಹಿಳೆಯೊಬ್ಬಳು ಹೆದರಿ ತಾನೇ ನೇಣು ಹಾಕಿಕೊಂಡು ಮೃತಳಾದ ಆಘಾತಕಾರಿ ಘಟನೆವರದಿಯಾಗಿದೆ. ಮಹಿಳೆ ನೇಣು ಬಿಗಿದುಕೊಳ್ಳುವ ವೇಳೆಯಲ್ಲಿ ಅವಳ ಪತಿ ಕೆಲಸದ ಪ್ರಯುಕ್ತ ಹೊರಗಿದ್ದರು. ಎರಡು ವರ್ಷದ ಮಗು ಮಾತ್ರ ಮನೆಯಲ್ಲಿತ್ತು. ವರದಿಯಾಗಿರುವ ಪ್ರಕಾರ ಮೃತಳ ಮಹಿಳೆಯ ಹೆಸರು ಮಧು ಮಹಾನಂದ್(22) ಎನ್ನಲಾಗಿದೆ.
ಪತಿ ಮನೆಯಿಂದ ಹೊರಹೋದ ಬಳಿಕ ಮಹಿಳೆ ಟಿವಿನೋಡುತ್ತಿದ್ದಳು. ಟಿವಿಯಲ್ಲಿ ಪ್ರತ್ಯುಷಾಳ ಆತ್ಮಹತ್ಯೆಯ ವರದಿ ಪ್ರಸಾರವಾಗುತ್ತಿತ್ತು. ಇದನ್ನು ನೋಡಿ ಮಹಿಳೆ ಹೆದರಿರಬೇಕು. ಛಾವಣಿಯ ಕೊಕ್ಕೆಗೆ ತನ್ನ ಸೀರೆ ಕಟ್ಟಿ ನೇಣು ಹಾಕಿಕೊಂಡಿದ್ದಾಳೆ ಎಂದು ಮೂಲಗಳು ವಿವರಿಸಿವೆ. ಸುಮಾರು ಎಂಟು ಗಂಟೆವರೆಗೂ ಛಾವಣಿಯಲ್ಲಿ ಅವಳ ಮೃತದೇಹ ನೇತಾಡುತ್ತಿತ್ತು ಎಂದು ವರದಿಗಳು ತಿಳಿಸಿವೆ. ಸಂಜೆವೇಳೆ ಮಗು ಹಸಿವಾಗಿ ಅತ್ತಾಗ ನೆರೆಯ ಮಹಿಳೆಯರು ಕಿಟಕಿಯಿಂದ ಇಣುಕಿ ನೋಡಿದ್ದರು. ಮಹಿಳೆ ಛಾವಣಿಯಲ್ಲಿ ನೇತಾಡುತ್ತಿದ್ದಳು. ಮಗು ಕೆಳಗೆ ಕೂತು ಅಳುತ್ತಿತ್ತು. ಮಹಿಳೆಯರು ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆನಂತರ ಮಗುವನ್ನು ಹೊರಗೆ ತೆಗೆದರು ಎಂದು ವರದಿಗಳು ತಿಳಿಸಿವೆ.
ಮಹಿಳೆಯ ಪತಿ ನಕುಲ್ ವಹಾನಂದ್‌ರು ಮಹಿಳೆ ಸಾವಧಾನ್ ಇಂಡಿಯಾ ಮತ್ತು ಕ್ರೈಂಆಧಾರಿತ ಇತರ ಟಿವಿ ಶೋಗಳನ್ನು ನೋಡುತ್ತಿದ್ದಳು. ಕೆಲವೊಮ್ಮೆ ನೇಣು ಹಾಕಿಕೊಂಡರೆ ಹೇಗೆ ಅನುಭವವಾಗುತ್ತದೆ ಎಂದು ಪತಿಯನ್ನು ಕೇಳುತ್ತಿದ್ದಳೆಂದು ನಕುಲ್ ಪೊಲೀಸರಿಗೆ ತಿಳಿಸಿದ್ದಾರೆ. ಅವಳು ಸಾವಿಗೆ ಹೆದರುತ್ತಿದ್ದರೂ ಒಂದೆರಡು ಸಲ ಆತ್ಮಹತ್ಯೆ ಮಾಡಿಕೊಳ್ಳುವ ಮಾತಾಡಿದ್ದಳೆಂದು ಮಹಿಳೆಯ ಮನೋರೋಗಕ್ಕೆ ಚಿಕಿತ್ಸೆ ನಡೆಯುತ್ತಿತ್ತೆಂದೂ ಪತಿ ತಿಳಿಸಿರುವುದಾಗಿ ವರದಿಯಾಗಿದೆ.





