ಶಿಯಾ, ಸುನ್ನಿ ಇಸ್ಲಾಮ್‌ನ ಎರಡು ಕೈಗಳು: ಅಲ್‌ಅಝ್ಹರ್ ಮುಫ್ತಿ

ಮಲೇಶ್ಯ, ಎಪ್ರಿಲ್.8: ಈಜಿಪ್ಟ್‌ನ ಅಲ್‌ಅಝ್ಹರ್ ಯುನಿವರ್ಸಿಟಿಯ ಪ್ರಮುಖ ಶೇಕ್ ಅಹ್ಮದ್ ತಯ್ಯಬ್‌ರು ಇಂಡೊನೇಷಿಯಾ ರಾಜಧಾನಿ ಜಕಾರ್ತದಲ್ಲಿ ಮುಸ್ಲಿಮ್ ಬುದ್ಧಿಜೀವಿಗಳ ಮತ್ತು ಧರ್ಮಗುರುಗಳ ಜೊತೆ ಒಂದು ಸಾಮೂಹಿಕ ಹೇಳಿಕೆಯಲ್ಲಿ ಶಿಯಾ ಮತ್ತು ಸುನ್ನಿ ಇಸ್ಲಾಮ್ ಎರಡು ಕೈಗಳಾಗಿವೆ. ಆದ್ದರಿಂದ ಅವರಿಬ್ಬರನ್ನೂ ಹತ್ತಿರ ಬರಬೇಕಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
ಅಹ್ಮದ್ ತಯ್ಯಬ್‌ರು ಈಗ ಅಲ್‌ಅಝ್ಹರ್ ಯುನಿವರ್ಸಿಟಿಯ ವಿದ್ವಾಂಸರ ಜೊತೆ ಇಂಡೋನೇಷಿಯದಲ್ಲಿದ್ದು ಅವರು ಇಂಡೊನೇಷಿಯಾದ ಉಲೇಮಾರ ಬೈಠಕ್‌ನಲ್ಲಿ ಇಸ್ಲಾಮೀ ಜಗತ್ತಿಗೆ ಮುಸ್ಲಿಮರಲ್ಲಿ ಕಾಣಿಸುತ್ತಿರುವ ಭಿನ್ನಮತದ ವಿಷಯದಲ್ಲಿ ಎಚ್ಚರಿಕೆ ನೀಡಿದ್ದಾರೆಂದು ವರದಿಯಾಗಿದೆ.
ಇಸ್ಲಾಮ್ ದೈರ್ಯ ಹಾಗೂ ಸಹಿಷ್ಣು ಧರ್ಮವಾಗಿದೆ. ತನ್ನ ಮಡಿಲಲ್ಲಿ ಎಲ್ಲ ಧರ್ಮಗಳಿಗೆ ಸ್ಥಳಾವಕಾಶನೀಡುತ್ತಿದೆ. ಏಕತೆ ಮತ್ತು ಅಖಂಡತೆಗೆ ಒತ್ತು ನೀಡಿದ ಅವರು ಏಕತೆಯೆಂದರೆ ಇನ್ನೊಬ್ಬರ ಸಿದ್ಧಾಂತವನ್ನು ಸ್ವೀಕರಿಸುವುದೆಂದು ಅರ್ಥವಲ್ಲ ವೈಚಾರಿಕ ಭಿನ್ನಾಭಿಪ್ರಾಯ ಸಹಜ ಸಮಸ್ಯೆಯಾಗಿದೆ. ಪರಸ್ಪರ ಧರ್ಮಭ್ರಷ್ಟರನ್ನಾಗಿಸದಿರುವುದು ಏಕತೆಯ ಅರ್ಥವಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.





