ಎ. 28: ರಿಯಾದ್ ನ ತೋನ್ಸೆ ವೆಲ್ಫೇರ್ ಅಸೋಸಿಯೇಶನ್ ವಾರ್ಷಿಕ ಸಮ್ಮಿಲನ

ರಿಯಾದ್, ಎ. 8: ತೋನ್ಸೆ ವೆಲ್ಫೇರ್ ಅಸೋಸಿಯೇಶನ್ ರಿಯಾದ್ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುವ ವಾರ್ಷಿಕ ಸಮ್ಮಿಲನವು ಎ.28 ರಂದು ರಾತ್ರಿ 8 ಗಂಟೆಗೆ ಇಸ್ತ್ರಾಹ ಜಿನಾನ್ ಲಿಲ್ ಮುನಸಬಾತ್ (ನಿರ್ಗಮನ ಪ್ರದೇಶ 16, ಈಸ್ಟರ್ನ್ ರಿಂಗ್ ರೋಡ್, ರಿಯಾದ್) ನಲ್ಲಿ ಜರಗಲಿರುವುದು.
ಈ ಸಮ್ಮಿಲನದಲ್ಲಿ ಮುಖ್ಯ ಅತಿಥಿಗಳಾಗಿ ವಾರ್ತಾಭಾರತಿ ಕನ್ನಡ ದೈನಿಕದ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆ, ಅಲ್ ಮದೀನಾ ಅಲ್ ಮುನವ್ವರ ಇಸ್ಲಾಮಿಕ್ ವಿಶ್ವವಿದ್ಯಾನಿಲಯದ ಪಿ ಎಚ್ ಡಿ ವಿದ್ಯಾರ್ಥಿ ಹಾಗೂ ದಾರುಲ್ ಹುದಾ ಉಡುಪಿ ನಿರ್ದೇಶಕ ಶೇಖ್ ಪರ್ವೇಝ್ ಅಹ್ಮದ್ ನಕ್ವಾ ಮದನಿ ಭಾಗವಹಿಸಲಿರುವರು.
ಈ ಸಂದರ್ಭದಲ್ಲಿ ವಿಶೇಷ ಅತಿಥಿ ಉಪನ್ಯಾಸ, ಇಸ್ಲಾಮಿಕ್ ಕ್ವಿಝ್ ಹಾಗೂ ಕುತೂಹಲಕಾರಿ ಗೇಮ್ಸ್ ಗಳು ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
ಹೆಚ್ಚಿನ ವಿವರಗಳಿಗಾಗಿ 055 345 7372, 053 089 5807 ಸಂಪರ್ಕಿಸುವಂತೆ ಕೋರಿದೆ.
Next Story





