ತೆರೆದ ಚರಂಡಿಯಿಂದ ಸಮಸ್ಯೆ: ಶಾಸಕ ಜೆ.ಆರ್.ಲೋಬೊ ಸ್ಥಳಕ್ಕೆ ಭೇಟಿ
ಮಂಗಳೂರು,ಎ .8: ಉರ್ವ ಮಾರಿಗುಡಿ ಸಮೀಪದಲ್ಲಿ ತೆರೆದ ಚರಂಡಿಯಿಂದ ಸಮಸ್ಯೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಶಾಸಕ ಜೆ.ಆರ್.ಲೋಬೋ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಸ್ಥಳೀಯರು ತೆರೆದ ಚರಂಡಿಯನ್ನು ಮುಚ್ಚುವಂತೆ ಶಾಸಕರನ್ನು ಆಗ್ರಹಿಸಿದರು. ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸಿದ ಶಾಸಕ ಜೆ.ಆರ್.ಲೋಬೊ ಈ ಭಾಗದಲ್ಲಿ ಒಳಚರಂಡಿ ನಿರ್ಮಾಣ ಮಾಡಿ ಸಮಸ್ಯೆ ಬಗೆಹರಿಸಲಾಗುವುದು.
ಅಮೃತ್ ಯೋಜನೆಯಡಿ ಒಳಚರಂಡಿ ನಿರ್ಮಾಣಕ್ಕೆ ಸೂಚನೆ ನೀಡಲಾಗುವುದು ಎಂದು ಅವರು ತಿಳಿಸಿದರು. ಪರೀಶಿಲನೆಯ ಸಂದರ್ಭದಲ್ಲಿ ಮನಪಾ ಸದಸ್ಯ ರಾಧಕೃಷ್ಣ, ಇಂಜಿನಿಯರ್ ಗಳಾದ ಗುರುರಾಜ್ ಮರಳಹಳ್ಳಿ, ವಿಶಾಲ್ ನಾಥ, ರಘುಪಾಲ್, ವಿನೋದ್ ಕುಮಾರ್, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಟಿ.ಕೆ ಜೊತೆಗಿದ್ದರು.
Next Story





