ಯೆನೆಪೋಯ ಆಸ್ಪತ್ರೆಯಲ್ಲಿ 2ನೇ ಬಾರಿ ಯಶಸ್ವೀ ಕೆಡವರಿಕ್ ಕಿಡ್ನಿ ಕಸಿ

ಮಂಗಳೂರು, ಎ.8: ಆಕಸ್ಮಿಕ ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡು ನಿಧನ ಹೊಂದಿದ ಕೇರಳದ ವ್ಯಕ್ತಿಯೊಬ್ಬರ ಕಿಡ್ನಿಯನ್ನು ಕರ್ನಾಟಕದಲ್ಲ್ಲಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ಕೆಡವರಿಕ್ ಕಿಡ್ನಿ ಕಸಿ ಮಾಡಿ ಅಂತರಾಜ್ಯ ಬಾಂದವ್ಯ ಬೆಸಯಲಾಯಿತು.
ಕೇರಳದ ಪಯ್ಯನ್ನೂರಿನ ಬಾಬು ಎಂಬ ವ್ಯಕ್ತಿಯು ಆಕಸ್ಮಿಕ ಘಟನೆಯೊಂದರಲ್ಲಿ ಮರಣಗೊಂಡು ಮೆದುಳು ನಿಷ್ಕ್ರೀಯ ಗೊಂಡಾಗ ಆ ವ್ಯಕ್ತಿಯ ಕಿಡ್ನಿಯನ್ನು ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಆಸ್ಪತ್ರೆ ಯಲ್ಲಿ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯಬ್ಬರಿಗೆ ಕಸಿ ಮಾಡಲಾಯಿತು ಹಾಗೂ ಇದೊಂದು ಕೇರಳ ಮತ್ತು ಕರ್ನಾಟಕ ರಾಜ್ಯದ ವ್ಯಕ್ತಿಯೊಬ್ಬರಿಗೆ ಕಿಡ್ನಿ ವರ್ಗಾವಣೆ ಮಾಡಿದ ಪ್ರಥಮ ಯಶಸ್ವೀ ಕೆಡವರಿಕ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಾಗಿರುತ್ತದೆ.
ಕಿಡ್ನಿ ಪಡೆದುಕೊಂಡ ವ್ಯಕ್ತಿಯು ಕೆಡವರಿಕ್ ಕಿಡ್ನಿ ಕಸಿ ಮಾಡಿಸಿಕೊಳ್ಳಲು ಜೋನಲ್ ಕೊರ್ಡಿನೇಶನ್ ಕಮಿಟಿ ಕರ್ನಾಟಕ ಇದರಲ್ಲಿ ನೋಂದಾಯಿಸಿದ್ದರು. ಕಳೆದ 2 ವಾರಗಳಲ್ಲಿ ಈ ಆಸ್ಪತ್ರೆಯಲ್ಲಿ ಮಾಡಿದ 2ನೇ ಕೆಡವರಿಕ್ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಯಾಗಿದ್ದು ಎ.6ರಂದು ಮಧ್ಯರಾತ್ರಿಯಲ್ಲಿ ಮಾಡಿದ ಶಸ್ತ್ರಕ್ರಿಯೆಯಲ್ಲಿ, ಕಿಡ್ನಿ ಟ್ರಾಂನ್ಸ್‌ಪ್ಲೇಂಟ್ ತಂಡದಲ್ಲಿ ನೆಫ್ರೋ ವಿಭಾಗದ ಡಾ. ಸಂತೋಷ್ ಪೈ, ಯೂರೋಲಜಿ ವಿಭಾಗದ ಡಾ. ಮುಜೀಬುರೆಹ್ಮಾನ್, ಡಾ.ಅಲ್ತಾಫ್ ಖಾನ್, ಡಾ. ನಿಸ್ಚಿತ್ ಡಿಸೋಜ, ಅರಿವಳಿಕೆ ಭಾಗದ ಮುಖ್ಯಸ್ಥರಾದ ಡಾ. ಪದ್ಮನಾಭ ಸಂಪತ್ತಿಲ ಮತ್ತು ಡಾ. ರಾಮಮೂರ್ತಿ ಉಪಸ್ಥಿತರಿದ್ದರು.
ಯೆನೆಪೋಯ ಹಣಕಾಸು ವಿಭಾಗದ ಹಣಕಾಸು ನಿರ್ದೇಶಕ ಪರ್ಹಾದ್ರವರು ಯೆನೆಪೋಯ ಆಸ್ಪತ್ರೆಯು ಕಿಡ್ನಿ ಕಸಿಗೆ ಸಂಬಂಧಿಸಿದಂತೆ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ಮೂತ್ರಪಿಂಡ ವೈಫಲ್ಯ ಹೊಂದಿರುವ ರೋಗಿಗಳಿಗೆ ಕಿಡ್ನಿ ಕಸಿಯನ್ನು ಯೆನೆಪೋಯ ಆಸ್ಪತ್ರೆಯಲ್ಲಿ ಮಾಡಲಾಗುವುದಲ್ಲದೆ, ಕೆಡವರಿಕ್ ಕಿಡ್ನಿ ದಾನಿಗಳನ್ನು ಪಡೆಯಲು ನೋದಾವಣಾ ವ್ಯವಸ್ಥೆಯೂ ಇರುವುದಾಗಿ ತಿಳಿಸಿರುತ್ತಾರೆ.







