ನಕಲಿ ಎನ್‌ಕೌಂಟರಿನ ರೂವಾರಿ - ನರೇಂದ್ರ ಮೋದಿಯ ಅತಿ ನಿಕಟವರ್ತಿ
ಡಿಜಿವಂಜಾರಗೆ ಒಂಬತ್ತು ವರ್ಷದ ಬಳಿಕ ಘರ್‌ವಾಪಸಿ!

ಹೊಸದಿಲ್ಲಿ, ಮಾರ್ಚ್.8: ನಕಲಿ ಎನ್‌ಕೌಂಟರ್ ಪ್ರಕರಣದ ಆರೋಪಿಯಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ಡಿಜಿ ವಂಜಾರ ಅಹ್ಮದಾಬಾದ್‌ಗೆ ತಲುಪಿದ್ದಾರೆ. ಕೋರ್ಟ್ ಅವರಿಗೆ ಕಳೆದ ವಾರ ಗುಜರಾತ್‌ಗೆ ಮರಳುವ ಅನುಮತಿ ನೀಡಿತ್ತು. ಅವರು ಒಂಬತ್ತು ವರ್ಷಗಳ ಬಳಿಕ ಅಹ್ಮದಾಬಾದ್‌ಗೆ ಮರಳಿದ್ದಾರೆಂದು ವರದಿಯಾಗಿದೆ. ಅಹ್ಮದಾಬಾದ್‌ನಸ್ಥಳೀಯ ಪತ್ರಕರ್ತರೊಬ್ಬರ ಪ್ರಕಾರ ಏರ್‌ಪೋರ್ಟ್‌ನಲ್ಲಿ ವಂಜಾರ ಮಾತಾಡಿ"ನನ್ನ ಸ್ವಾಗತ ಗುಜರಾತ್‌ನ ಜನತೆಯ ಸ್ವಾಗತವಾಗಿದೆ. ದೇಶದ ಪೊಲೀಸ್‌ನ ಸ್ವಾಗತವಾಗಿದೆ. ಭಯೋತ್ಪಾದನೆಯ ವಿರುದ್ಧ ಹೋರಾಡಿದವರ ಸ್ವಾಗತವಾಗಿದೆ" ಎಂದು ಹೇಳಿದ್ದಾರೆ. ಡಿಜಿವಂಜಾರ ಟೌನ್‌ಹಾಲ್ ನಂತರ ಗಾಂಧಿನಗರಕ್ಕೆ ತೆರಳಲಿದ್ದಾರೆನ್ನಲಾಗಿದೆ.
2002ರಿಂದ 2005ರವರೆಗೆ ಅಹ್ಮದಾಬಾದ್ ಕ್ರೈಂ ಬ್ರಾಂಚ್ ಡೆಪ್ಯುಟಿ ಕಮಿಶನರ್ ಆಫ್ ಪೊಲೀಸ್ ಆಗಿದ್ದ ವಂಜಾರ ಈ ಅವಧಿಯಲ್ಲಿ ಸುಮಾರು ಇಪ್ಪತ್ತು ಮಂದಿಯ ಎನ್‌ಕೌಂಟರ್ ನಡೆದಿತ್ತು. ಆನಂತರ ಸಿಬಿಐ ತನಿಖೆ ನಡೆಸಿ ಇವೆಲ್ಲ ನಕಲಿ ಎನ್‌ಕೌಂಟರ್‌ಗಳೆಂದು ಪತ್ತೆ ಮಾಡಿತ್ತು. ಈವರೆಗೂ ಗುಜರಾತ್‌ನ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿಯ ನಿಕಟ ಪೊಲೀಸಧಿಕಾರಿ ಎಂದು ನಂಬಲಾಗುತ್ತಿದೆ. ಡಿಜಿ ವಂಜಾರ 1987ರ ಬ್ಯಾಚ್‌ನ ಗುಜರಾತ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದು ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದು ಅವರು ಪ್ರಸಿದ್ಧರಾಗಿದ್ದರು. ಮೊದಲು ಅವರು ಕ್ರೈಂಬ್ರಾಂಚ್‌ನಲ್ಲಿದ್ದರು. ನಂತರ ಗುಜರಾತ್ ಎಟಿಎಸ್‌ನ ಮುಖ್ಯಸ್ಥರಾದರು. ನಂತರ ಪಾಕಿಸ್ತಾನದ ಗಡಿಭಾಗದ ರೇಂಜ್ ಐಜಿ ಆಗಿದ್ದರು.
ಅವರು 2002ರಿಂದ 2005ರವರೆಗೆ ಅಹ್ಮದಾಬಾದ್‌ನ ಕ್ರೈಂಬ್ರಾಂಚ್‌ನ ಡೆಪ್ಯುಟಿ ಕಮಿಷನರ್‌ಆಫ್ ಪೊಲೀಸ್ ಆಗಿದ್ದರು. ಈ ಪೋಸ್ಟಿಂಗ್ ಸಮಯದಲ್ಲಿ ಸುಮಾರು 20ಮಂದಿಯ ಎನ್‌ಕೌಂಟರ್ ಆಗಿತ್ತು. ಸಿಬಿಐ ತನಿಖೆಯಲ್ಲಿ ಇವೆಲ್ಲ ನಕಲಿ ಎನ್‌ಕೌಂಟರ್‌ಆಗಿತ್ತೆಂದು ಪತ್ತೆಯಾಗಿತ್ತು. ಅಂದಿನಗುಜರಾತ್ ಮುಖ್ಯಮಂತ್ರಿ ಮತ್ತು ಈಗಿನ ಪ್ರದಾನಿ ನರೇಂದ್ರ ಮೋದಿಯ ಅತಿನಿಕಟ ಪೊಲೀಸ್ ಅಧಿಕಾರಿ ಎಂದು ಅವರನ್ನು ಹೇಳಲಾಗುತ್ತಿದೆ.
ವಂಜಾರರನ್ನು 2007ರಲ್ಲಿ ಗುಜರಾತ್ ಸಿಐಡಿ ಬಂಧಿಸಿತ್ತು. ನಂತರ ಜೈಲಿಗೆ ಕಳುಹಿಸಲಾಯಿತು. ಈಗ ಅವರ ಮೇಲೆ ಎಂಟು ಮಂದಿಯ ಹತ್ಯಾ ಆರೋಪ ಇದೆ. ಇವರಲ್ಲಿ ಸೊಹ್ರಾಬುದ್ದೀನ್, ಆತನ ಪತ್ನಿ ಕೌಸರ್‌ಬಿ, ತುಲಸಿರಾಮ್ ಪ್ರಜಾಪತಿ,ಸಾದಿಕ್ ಜಮಾಲ್, ಇಶ್ರತ್ ಮತ್ತು ಅವಳ ಜೊತೆ ಎನ್‌ಕೌಂಟರ್‌ಗೀಡಾದ ಇತರ ಮೂವರು ಸೇರಿದ್ದಾರೆ. ಇವರನ್ನು ಹತ್ಯೆ ಮಾಡಿದ ಮೇಲೆ ಕ್ರೈಂ ಬ್ರಾಂಚ್ ಇವರೆಲ್ಲ ಪಾಕಿಸ್ತಾನಿ ಏಜೆಂಟ್‌ಗಳೆಂದು, ಗುಜರಾತ್ ಮುಖ್ಯಮಂತ್ರಿ ಹತ್ಯೆಗೆ ಬಂದವರೆಂದು ಹೇಳಿಕೊಂಡಿತ್ತು. ನಂತರ ಕೋರ್ಟ್ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ತನಿಖೆಯಲ್ಲಿ ಇವೆಲ್ಲವೂ ನಕಲಿ ಎನ್‌ಕೌಂಟರ್‌ಗಳೆಂದು ಪತ್ತೆಯಾಗಿತ್ತು.
2014ರಲ್ಲಿ ಮುಂಬೈ ನ್ಯಾಯಾಲಯ ವಂಜಾರರಿಗೆ ಸೋಹ್ರಾಬುದ್ದೀನ್, ತುಲಸಿರಾಮ್ ಪ್ರಜಾಪತಿ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಜಾಮೀನು ನೀಡಿತ್ತು. 2012ರಲ್ಲಿ ಸುಪ್ರೀಂ ಕೋರ್ಟ್ ಸೊಹ್ರಾಬುದ್ದೀನ್ ಪ್ರಕರಣ ವಿಚಾರಣೆಯನ್ನು ಮಹಾರಾಷ್ಟ್ರಕ್ಕೆ ಸ್ಥಾನಾಂತರಗೊಳಿಸಿತ್ತು.ಆವತ್ತಿಂದ ವಂಜಾರ ಮುಂಬೈ ಜೈಲಲ್ಲಿದ್ದರು. ಮುಂಬೈ ಜೈಲಲ್ಲಿರಿಸಿದ್ದಕ್ಕೆ ವಂಜಾರ ನಿರಾಶರಾಗಿದ್ದರು ಎನ್ನಲಾಗುತ್ತಿದೆ. ಆದ್ದರಿಂದ 2013ರಲ್ಲಿ ಅವರು ರಾಜಿನಾಮೆ ನೀಡಿದ್ದರು. ಆದರೆ ಸರಕಾರ ತಾಂತ್ರಿಕ ಕಾರಣಗಳನ್ನು ಮುಂದಿಟ್ಟು ವಂಜಾರರ ಮೇಲೆ ಮೊಕದ್ದಮೆ ಇರುವುದರಿಂದ ರಾಜಿನಾಮೆ ಸ್ವೀಕರಿಸಲು ನಿರಾಕರಿಸಿತ್ತು.
ಡಿಜಿ ವಂಜಾರರಿಗಿಂತ ಮೊದಲು ಗುಜರಾತ್‌ನ ಕೆಲವು ಪೊಲೀಸಧಿಕಾರಿಗಳು ರಾಜಿನಾಮೆ ನೀಡಿದ್ದರು. ಪ್ರಪ್ರಥಮವಾಗಿ ಅಂದಿನ ಮುಖ್ಯಮಂತ್ರಿ ನರೇಂದ್ರ ಮೋದಿ ಮುಸ್ಲಿಮರ ವಿರುದ್ಧ ದಂಗೆಯಲ್ಲಿ ಶಾಮೀಲಾಗಿದ್ದರೆಂದು ಹೇಳಿ ಸುಪ್ರೀಂಕೋರ್ಟ್‌ಗೆ ಅಫಿದಾವತ್ ಸಲ್ಲಿಸಿ ರಾಜಿನಾಮೆ ನೀಡಿದ್ದರು. ಇಶ್ರತ್ ಎನ್‌ಕೌಂಟರ್ ಪ್ರಕರಣದಲ್ಲಿ ಭಾಗಿಯಾದ ಜಿಎಲ್ ಸಿಂಘಾಲ್ ಪತ್ರ ಬರೆದು ರಾಜಿನಾಮೆ ನೀಡಿದ್ದರು. ತಮ್ಮ ಪತ್ರದಲ್ಲಿ ಸರಕಾರ ತಮ್ಮನ್ನು ರಕ್ಷಿಸುತ್ತಿಲ್ಲ ಯಾವುದೇ ಕೆಲಸವನ್ನು ಕ್ರೈಂ ಬ್ರಾಂಚ್‌ನೌಕರಿಯ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನದಂತೆ ಮಾಡಿದ್ದೇವೆ ಎಂದು ಸಿಂಘಾಲ್ ಬರೆದಿದ್ದರು.







