ಮಂಗಳೂರು : ಪ.ಪೂ ಉಪನ್ಯಾಸಕರ ಹೋರಾಟಕ್ಕೆ ಅಮುಕ್ತ್ ಬೆಂಬಲ
ಮಂಗಳೂರು, ಎ. 8: ಕುಮಾರ್ ನಾಯಕ್ ವರದಿಯ ಅನುಷ್ಠಾನ ಮತ್ತು
ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಿಯುಸಿ ವೌಲ್ಯಮಾಪನ ಬಹಿಷ್ಕರಿಸಿ
ಮುಷ್ಕರ ನಡೆಸುತ್ತಿರುವ ಪದವಿಪೂರ್ವ ಉಪನ್ಯಾಸಕರ ಹೋರಾಟಕ್ಕೆ ಅಮುಕ್ತ್
ತನ್ನ ನೈತಿಕ ಬೆಂಬಲವನ್ನು ವ್ಯಕ್ತಪಡಿಸಿದೆ.
ಕಳೆದ ಕೆಲವು ವರ್ಷಗಳಿಂದ ತಮ್ಮ ಬೇಡಿಕೆಗಳಿಗಾಗಿ ಹೋರಾಟ ನಡೆಸುತ್ತಿರುವ ಉಪನ್ಯಾಸಕರನ್ನು ಆಶ್ವಾಸನೆಗಳ ಮೂಲಕ ಮಾತ್ರ ತೃಪ್ತಿಪಡಿಸುತ್ತಿರುವ ಸರಕಾರ ಯಾವುದೇ ಬೇಡಿಕೆಗಳನ್ನು ಈಡೇರಿಸದಿರುವುದು ದುರದೃಷ್ಟಕರ.
ಆದ್ದರಿಂದ, ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಿ ವೌಲ್ಯಮಾಪನ
ಬಹಿಷ್ಕಾರಕ್ಕೆ ಪರಿಹಾರವನ್ನು ಕಂಡುಕೊಂಡು ವಿದ್ಯಾರ್ಥಿಗಳ ಹಿತವನ್ನು ಕಾಯಬೇಕು ಎಂದು ಅಮುಕ್ತ್ ಸರಕಾರವನ್ನು ಆಗ್ರಹಿಸಿದೆ.
Next Story





