ಮಂಗಳೂರು : ವೇಗ ಪಡೆದುಕೊಂಡ ತಲಪಾಡಿ ನಂತೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ
ಮಂಗಳೂರು, ಎ. 7: ಕಳೆದ ನಾಲ್ಕು ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ತಲಪಾಡಿ ನಂತೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಇತ್ತೀಚೆಗೆ ವೇಗ ಪಡೆದುಕೊಂಡಿದೆ.
ಮಳೆಗಾಲಕ್ಕೆ ಇನ್ನು ಎರಡೆ ತಿಂಗಳು ಬಾಕಿಯಿದ್ದು ಮಳೆಗಾಲದ ಒಳಗೆ ತಲಪಾಡಿ-ನಂತೂರು ನಡುವಣ 15.3 ಕಿ.ಮೀ. ಉದ್ದದ ಚತುಷ್ಪಥ ನಿರ್ಮಾಣ ಯೋಜನೆಯನ್ನು ಪೂರ್ಣಗೊಳಿಸಲು ಕಾಮಾಗಾರಿ ಬಿರುಸು ಪಡೆದುಕೊಂಡಿದೆ.
ಕಳೆದ ನಾಲ್ಕು ವರ್ಷಗಳಿಂದ ಕಾಮಾಗಾರಿಯ ವಿಳಂಬದಿಂದ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ಸಾಕಷ್ಟು ಪರದಾಡಬೇಕಾಯಿತು. ಎರಡು ವರ್ಷಗಳಿಂದ ಮುಗಿಯಬೇಕಾಗಿದ್ದ ಕಾಮಾಗಾರಿ ನಾಲ್ಕು ವರ್ಷವಾದರೂ ಪೂರ್ಣಗೊಳ್ಳದೆ ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ತಲಪಾಡಿಯಿಂದ ನಂತೂರು ವರೆಗಿನ ಚತುಷ್ಪತ ಕಾಮಗಾರಿ ಸಾಕಷ್ಟು ಸವಾಲುಗಳ ಮಧ್ಯೆಯ ನಡೆಯುತ್ತಿದೆ. ಪಂಪ್‌ವೆಲ್‌ನಲ್ಲಿ ಮೇಲ್ಸೇತುವೆ ನಿರ್ಮಾಣ, ಎಕ್ಕೂರು ನಲ್ಲಿ ರೈಲ್ವೆ ಮೇಲಸೇತುವೆ ನಿರ್ಮಾಣ, ತೊಕ್ಕೊಟ್ಟುವಿನಲ್ಲಿ ಮೇಲ್ಸೇತುವೆ ನಿರ್ಮಾಣದ ಕಾಮಗಾರಿಯ ಸವಾಲು ಒಂದೆಡೆಯಾದರೆ ಭೂಸ್ವಾದೀನಗೊಂಡಿದ್ದರೂ ಭೂಮಿಯನ್ನು ಸಕಾಲಕ್ಕೆ ಬಿಟ್ಟುಕೊಡದೆ ಇರುವುದರಿಂದ ಕಾಮಗಾರಿಗೆ ಸಮಸ್ಯೆಯಾದ್ದದು ಮತ್ತೊಂದೆಡೆ. ಪ್ರಸಕ್ತ ಹೆಚ್ಚಿನ ಸಮಸ್ಯೆಗಳು ಇತ್ಯರ್ಥವಾದ ಹಿನ್ನೆಲೆಯಲ್ಲಿ ಹೆದ್ದಾರಿಯಲ್ಲಿ ಇದೀಗ ಈ ಹೆದ್ದಾರಿಯಲ್ಲಿ ಕಾಮಾಗಾರಿ ಬಿರುಸು ಪಡೆದುಕೊಂಡಿದೆ.
ಹೊಸ ಸೇತುವೆ ನಿರ್ಮಾಣದ ಜತೆಗೆ ಹಳೆ ಸೇತುವೆ ದುರಸ್ತಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳಲಾಗುತ್ತಿದೆ. ನೇತ್ರಾವತಿ ಹಳೆ ಸೇತುವೆಯ ದುರಸ್ತಿ ಕಾಮಗಾರಿ ಈಗ ನಡೆಯುತ್ತಿದೆ. ತಲಪಾಡಿ ಮತ್ತು ಉಚ್ಚಿಲದ ಹಳೆ ಸೇತುವೆಗಳು ಹಾಗೂ ಎಕ್ಕೂರಿನ ಹಳೆಯರೈಲ್ವೇ ಮೇಲ್ಸೇತುವೆ ದುರಸ್ತಿ ಕಾರ್ಯವನ್ನು ಮುಂದಿನ ದಿನಗಳಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ.
ರೈಲ್ವೇ ಇಲಾಖೆಯಿಂದ ಅನುಮತಿ ಸಿಗದೆ ವಿಳಂಬವಾಗಿದ್ದ ಎಕ್ಕೂರು ಜಂಕ್ಷನ್‌ನ ನೂತನ ರೈಲ್ವೇ ಮೇಲ್ಸೇತುವೆ ಕೆಲಸ ಕೊನೆಗೂ ಪೂರ್ಣಗೊಂಡು ಬುಧವಾರ ಸೇತುವೆ ಸಂಚಾರಕ್ಕೆ ತೆರವಾಗಿದೆ. ಹೊಸ ರೈಲ್ವೇ ಮೇಲ್ಸೇತುವೆ 31 ಮೀಟರ್ ಉದ್ದ ಹಾಗೂ 11.50 ಮೀಟರ್ ಅಗಲವಿದೆ. ಇದಕ್ಕೆ 5 ಗರ್ಡರ್‌ಗಳನ್ನು ಜೋಡಿಸಲಾಗಿದೆ. 1 ಗರ್ಡರ್‌ನ ತೂಕ ಸುಮಾರು 100 ಟನ್. ಪ್ರಸ್ತುತ ಎಕ್ಕೂರಿನಲ್ಲಿರುವ ಹಳೆ ರೈಲ್ವೇ ಮೇಲ್ಸೇತುವೆ ಹಾಗೂ ನೂತನ ಸೇತುವೆ ಮಧ್ಯೆ 3.50ಮೀ. ಅಂತರವಿದೆ. ಅಲ್ಲದೆ ನೂತನ ಸೇತುವೆ ಹಳೆಯ ಸೇತುವೆಗಿಂತ 1 ಮೀ. ಎತ್ತರದಲ್ಲಿದೆ. ರೈಲ್ವೇ ಇಲಾಖೆ ನಿರ್ದೇಶನದಂತೆ ಸೇತುವೆ ನಿರ್ಮಾಣ ಮಾಡಲಾಗಿದೆ. ಎಕ್ಕೂರು ರೈಲ್ವೆ ಮೇಲ್ಸೆತುವೆ ಕೆಲಸ ವಿಳಂಬವಾಗಿದ್ದರಿಂದ ಈ ರಸ್ತೆಯಲ್ಲಿ ಬರುವ ಪ್ರಯಾಣಿಕರು ಈವರೆಗೆ ಸಾಕಷ್ಟು ಸಮಸ್ಯೆಗೀಡಾಗಿದ್ದರು. ದಿನಂಪ್ರತಿ ಇಲ್ಲಿ ಸಂಚಾರ ವ್ಯತ್ಯಾಯ ಸಾಮನ್ಯವಾಗಿತ್ತು. ಲ್ಲಿ ಹಾದುಹೋಗುವ ಪ್ರತಿಯೊಬ್ಬರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿಯೆ ಬಿಡುತ್ತಿದ್ದರು. ಇದೀಗ ಎಕ್ಕೂರು ಮೇಲ್ಸೆತುವೆ ಪೂರ್ಣಗೊಂಡು ಸಂಚಾರಕ್ಕೆ ತೆರವು ಮಾಡಲಾಗಿದೆ. ಆದರೆ ಮೇಲ್ಸೇತುವೆಯಿಂದ ಪಂಪ್‌ವೆಲ್ ಕಡೆಗೆ ಬರುತ್ತಿದ್ದಂತೆ ಹಳೆಯ ರಸ್ತೆಯನ್ನು ತೆಗೆದು ಹೊಸ ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಆಗುತ್ತಿರುವುದರಿಂದ ಸಂಚಾರ ವ್ಯತ್ಯಾಯ ಮತ್ತೆ ಆರಂಭವಾಗಿದೆ. ಪಂಪ್‌ವೆಲ್‌ವರೆಗಿನ ಚತುಷ್ಪತ ಕಾಮಗಾರಿ ಪೂರ್ಣಗೊಂಡ ನಂತರವೆ ಇಲ್ಲಿನ ಸಂಚಾರ ವ್ಯತ್ಯಾಯ ಸಮಸ್ಯೆ ಪರಿಹಾರವಾಗಲಿದೆ.







