ಮಗುವಿನ ಮೃತದೇಹ ಆಸ್ಪತ್ರೆಯಿಂದ ನಾಪತ್ತೆ ! ತನಿಖೆ ಪ್ರಾರಂಭ

ದಮ್ಮಾಮ್ :ಅಲ್ ಖೋಬರ್ ನಗರದ ಖಾಸಗಿ ಆಸ್ಪತ್ರೆಯಿಂದ ಮಗುವಿನ ಮೃತದೇಹ ನಾಪತ್ತೆ ಪ್ರಕರಣದ ಕೂಲಂಕಷ ತನಿಖೆಯನ್ನು ಪೂರ್ವ ಪ್ರಾಂತ್ಯದಆರೋಗ್ಯನಿರ್ದೇಶನಾಲಯವು ನಡೆಸುತ್ತಿದೆ. ಮಗುವಿನ ಮೃತದೇಹ ನಾಪತ್ತೆ ಪ್ರಕರಣದಲ್ಲಿ ಆಸ್ಪತ್ರೆಯ ಶಾಮೀಲಾತಿಯನ್ನೂ ಶಂಕಿಸಿ ಮಗುವಿನ ತಂದೆ ದೂರು ನೀಡಿದ ನಂತರ ತನಿಖೆ ಆರಂಭಿಸಲಾಗಿದೆ.
ಈ ಪ್ರಕರಣದ ತನಿಖೆಗೆ ವಿಶೇಷ ಸಮಿತಿಯೊಂದನ್ನೂ ನೇಮಿಸಲಾಗಿದೆ. ತನಿಖೆ ಮುಗಿಯುವ ತನಕ ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರಿಗೆ ಎಲ್ಲಿಗೂ ಪ್ರಯಾಣಿಸದಂತೆ ನಿರ್ದೇಶಿಸಲಾಗಿದೆ.
ಸಮಿತಿಯು ಹಲವಾರು ವಿಚಾರಗಳನ್ನು ಪರಿಶೀಲಿಸಿದ್ದು ಮಗು ಹಾಗೂ ಅದರ ತಾಯಿ ಆಸ್ಪತ್ರೆಗೆ ದಾಖಲಾದ ದಿನ ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸಿದೆ. ಆಸ್ಪತ್ರೆಯಲ್ಲಿ ಯಾವುದೇ ನಿಯಮ ಉಲ್ಲಂಘನೆ ನಡೆದಿದ್ದೇ ಆದಲ್ಲಿ ಈ ಪ್ರಕರಣವನ್ನು ಸಂಬಂಧಿತ ಸಮಿತಿಗೆ ಮುಂದಿನ ತನಿಖೆಗಾಗಿ ವಹಿಸಲಾಗುವುದು ಎಂದು ತಿಳಿದು ಬಂದಿದೆ.
Next Story





