ಸಲಿಂಗ ವಿವಾಹಕ್ಕೆ ಸಮಾನ ಸ್ಥಾನವಿಲ್ಲ: ಪೋಪ್

ವ್ಯಾಟಿಕನ್ ಸಿಟಿ, ಎ. 8: ಜಗತ್ತಿನ ಬಿಶಪ್‌ಗಳೊಂದಿಗೆ ಎರಡು ವರ್ಷಗಳ ಕಾಲ ಸಮಾಲೋಚನೆ ನಡೆಸಿದ ಬಳಿಕ, ಕುಟುಂಬ ಜೀವನಕ್ಕೆ ಸಂಬಂಧಿಸಿದ ಚರ್ಚ್‌ನ ನೀತಿಯನ್ನು ಪೋಪ್ ಫ್ರಾನ್ಸಿಸ್ ಶುಕ್ರವಾರ ಪ್ರಕಟಿಸಿದ್ದಾರೆ.
ಅದರ ಪ್ರಕಾರ, ಸಲಿಂಗ ವಿವಾಹಕ್ಕೆ ಸಾಮಾನ್ಯ ವಿವಾಹದ ಸ್ಥಾನಮಾನ ನೀಡಲಾಗುವುದಿಲ್ಲ. ಅದೇ ವೇಳೆ, ತನ್ನ ನೀತಿಯನ್ನು ಬದಲಾಯಿಸುವಂತೆ ಹೊರಗಿನಿಂದ ಬರುವ ಒತ್ತಡವನ್ನು ಸ್ವೀಕರಿಸಲಾಗುವುದಿಲ್ಲ ಎಂಬುದನ್ನೂ ಪೋಪ್ ಸ್ಪಷ್ಟಪಡಿಸಿದರು.
ಸಲಿಂಗಿಗಳನ್ನು ಹೊಂದಿರುವ ಕುಟುಂಬಗಳಿಗೆ ಪೋಪ್ ಅನುಕಂಪವನ್ನೂ ವ್ಯಕ್ತಪಡಿಸಿದರು. ಮದುವೆಯಾಗದೆ ಜೊತೆಗೆ ಜೀವಿಸುವ ಜೋಡಿಗಳನ್ನು ಸ್ವಾಗತಿಸಬೇಕಾದ ಅಗತ್ಯವಿದೆ ಎಂದರು. ಹಣಕಾಸು ಮತ್ತು ಸಂಪ್ರದಾಯ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇದು ಸಂಭವಿಸಬಹುದಾಗಿದೆ ಎಂದರು.
Next Story





