ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ: ಶಿವ ಕುಮಾರ ಸ್ವಾಮಿಗಾಗಿ ಕೇರಳದಲ್ಲಿ ಸಿಐಡಿ ಶೋಧ
ಬೆಂಗಳೂರು, ಎ.9: ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿರುವ ಪಿಯು ಪ್ರಶ್ನೆ ಪತ್ರಿಕೆಗಳ ಸೋರಿಕೆ ಅವ್ಯವಹಾರ ಪ್ರಕರಣದ ಸೂತ್ರಧಾರಿ ಶಿವ ಕುಮಾರ ಸ್ವಾಮಿಯ ಶೋಧಕ್ಕಾಗಿ ಸಿಐಡಿಯ ತಂಡವೊಂದು ಕೇರಳಕ್ಕೆ ತೆರಳಿದೆ.
ಸಿಐಡಿಯ ಮತ್ತೊಂದು ತಂಡ ಕುಮಾರಸ್ವಾಮಿಯ ಅಣ್ಣನ ಮಗ ಕುಮಾರ ಸ್ವಾಮಿ ಅಲಿಯಾಸ್ ಕಿರಣ್ ಪತ್ತೆಗಾಗಿ ಮಂಗಳೂರಿಗೆ ತೆರಳಿದೆ. ಪ್ರಶ್ನೆ ಪತ್ರಿಕೆಯ ಸ್ಟ್ರಾಂಗ್ ರೂಮ್ ಸಿಬ್ಬಂದಿಗಳ ಮೇಲೂ ಸಿಐಡಿ ದೃಷ್ಟಿ ಇಟ್ಟಿದೆ ಎನ್ನಲಾಗಿದೆ.
ಶುಕ್ರವಾರ ನಡೆದ ಬೆಳವಣಿಗೆಯಲ್ಲಿ ಸಿಐಡಿಯು ಇನ್ನಿಬ್ಬರು ಸರಕಾರಿ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದು, ಇನ್ನೆರಡು ದಿನಗಳಲ್ಲಿ ಈ ಇಬ್ಬರನ್ನು ಬಂಧಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
Next Story





