ರಾಜ್ಯ ಬಿಜೆಪಿ ಅಧ್ಯಕ್ಷತೆ ಯಡ್ಡಿ ಹೆಗಲಿಗೆ; ಭಟ್ಕಳದಲ್ಲಿ ಸಂಭ್ರಮ

ಭಟ್ಕಳ: ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರ ಹೆಗಲಿಗೆ ಬಂದಿದ್ದು ಇದಕ್ಕಾಗಿ ಭಟ್ಕಳದ ಬಿಜೆಪಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಂಜೆ ನಗರದ ಹೃದಯಭಾಗವಾದ ಶಮ್ಸುದ್ದೀನ್ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿಯನ್ನು ಸಿಡಿಸಿ ಸಂಭ್ರಮಿಸುವುದರ ಮೂಲಕ ಪರಸ್ಪರ ಸಿಹಿಯನ್ನು ಹಂಚಿಕೊಂಡಿರು. ಬಿ.ಎಸ್.ಯಡಿಯೂರಪ್ಪನವರಿಗೆ ಭಟ್ಕಳದಲ್ಲಿ ಅಪಾರ ಅಭಿಮಾನಿಗಳಿದ್ದು ಇವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಬಲಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹಲವು ಏಳುಬೀಳುಗಳ ನಡುವೆ ರಾಜ್ಯ ಕಂಡ ಉತ್ತಮ ನಾಯಕ ಹಾಗು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ರಾಜ್ಯಧ್ಯಕ್ಷ ಸ್ಥಾನ ದಕ್ಕಿರುವುದು ಅವರಿಗೆ ಯುಗಾದಿ ಹಬ್ಬದ ಗಿಫ್ಟ್ ಎಂದೇ ಭಾವಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸುನೀಲ್ ನಾಯ್ಕ, ಗೋವಿಂದ ನಾಯ್ಕ, ಕೃಷ್ಣ ನಾಯ್ಕ ಆಸರಕೇರಿ, ದೀನೇಶ ನಾಯ್ಕ,ನೂತನ ತಾಲೂಕಾ ಪಂಚಾಯತ್ ಸದಸ್ಯ ಹನುಮಂತ ನಾಯ್ಕ, ಶಂಕರ ನಾಯ್ಕ, ಈಶ್ವರ ನಾಯ್ಕ, ತುಳಸಿದಾಸ ನಾಯ್ಕ, ಸುಧಾಕರ ನಾಯ್ಕ ಹಾಗು ಮುಂತಾದ ಬಿ.ಜೆ.ಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು.





