ಪೊಲೀಸ್ ಅಧಿಕಾರಿಗಳಿಬ್ಬರ ಅಮಾನತು
ತಂಝೀಲ್ ಕೊಲೆ ಪ್ರಕರಣ
ಬಿಜ್ನೋರ್, ಎ.8: ಎನ್‌ಐ ಅಧಿಕಾರಿ ತಂಝೀಲ್ ಅಹ್ಮದ್‌ರ ಹತ್ಯೆಗೆ ಸಂಬಂಧಿಸಿ, ಕರ್ತವ್ಯ ನಿರ್ಲಕ್ಷದ ಆರೋಪದಲ್ಲಿ ಇಬ್ಬರು, ಪೊಲೀಸ್ ಅಧಿಕಾರಿಗಳನ್ನು ಗುರುವಾರ ಅಮಾನತುಗೊಳಿಸಲಾಗಿದೆ.
ಸಾಹಸಪುರ ಚೌಕಿಯ ಪ್ರಭಾರಿ ಸುರೇಂದ್ರ ಸಿಂಗ್ ಹಾಗೂ ಕಾನ್‌ಸ್ಟೇಬಲ್ ಬುಧಸಿಂಗ್‌ರನ್ನು ಅಮಾನತುಗೊಳಿಸಲಾಗಿದೆಯೆಂದು ಪೊಲೀಸ್ ಅಧೀಕ್ಷಕ ಸುಭಾಶ್ ಸಿಂಗ್ ಬೇಲ್ ತಿಳಿಸಿದ್ದಾರೆ.
ಮದುವೆಯೊಂದರಿಂದ ಕುಟುಂಬ ಸಮೇತ ಕಾರಿನಲ್ಲಿ ಹಿಂದಿರುಗುತ್ತಿದ್ದ ತಂಝೀಲ್‌ರನ್ನು ಬಿಜ್ನೋರ್ ಬಳಿ ಇಬ್ಬರು ಅಜ್ಞಾತ ಬಂದೂಕುಧಾರಿಗಳು ಎ.3ರಂದು ಹತ್ಯೆ ಮಾಡಿದ್ದರು. ಅವರ ಹೆಂಡತಿಗೂ ಗುಂಡಿನ ಗಾಯಗಳಾಗಿದ್ದು, ಮಕ್ಕಳಿಬ್ಬರು ಅದೃಷ್ಟವಶಾತ್ ಪಾರಾಗಿದ್ದರು.
Next Story





