ನಗರಗಳಲ್ಲಿ ಮರಗಿಡ ನಷ್ಟ ಜನರಿಗೆ ಕಾಂಕ್ರಿಟ್ ಕಾಡಿನ ಕಷ್ಟ

ಕೊಲ್ಕತ್ತ ನಗರದಲ್ಲಿ ಮರಗಳ ಸುರಕ್ಷೆ ಶೇ.23.4ರಿಂದ ಕಳೆದ ಎರಡು ದಶಕಗಳಲ್ಲಿ ಶೇ.7.3ಕ್ಕೆ ಇಳಿದಿದೆ. ನಿರ್ಮಾಣ ಕಾರ್ಯ ಶೇ.190ರಷ್ಟು ಹೆಚ್ಚಿದೆ. 2030ರ ವೇಳೆಗೆ ಕೊಲ್ಕತ್ತಾದ ಒಟ್ಟು ವಿಸ್ತೀರ್ಣದಲ್ಲಿ ಹಸಿರು ಪ್ರಮಾಣ ಶೇ.3.37ಕ್ಕೆ ಇಳಿಯಲಿದೆ.
ಅಹ್ಮದಾಬಾದ್‌ನಲ್ಲಿ ಮರಗಳ ಸುರಕ್ಷೆ ಶೇ.46ರಿಂದ ಕಳೆದ ಎರಡು ದಶಕಗಳಲ್ಲಿ ಶೇ.24ಕ್ಕೆ ಇಳಿದಿದೆ. ನಿರ್ಮಾಣ ಕಾರ್ಯ ಶೇ.132ರಷ್ಟು ಹೆಚ್ಚಿದೆ. 2030ರ ವೇಳೆಗೆ ಅಹ್ಮದಾಬಾದ್‌ನ ಒಟ್ಟು ವಿಸ್ತೀರ್ಣದಲ್ಲಿ ಹಸಿರು ಪ್ರಮಾಣ ಶೇ.3ಕ್ಕೆ ಇಳಿಯಲಿದೆ.
ಭೋಪಾಲ್‌ನಲ್ಲಿ ಮರಗಿಡಗಳಿರುವ ಪ್ರದೇಶ ಕಳೆದ 22 ವರ್ಷಗಳಲ್ಲಿ ಶೇ.66ರಿಂದ ಶೇ.22ಕ್ಕೆ ಇಳಿದಿದೆ. 2018ರ ವೇಳೆಗೆ ಇದು ನಗರದ ಒಟ್ಟು ಪ್ರದೇಶದ ಶೇ.11ಕ್ಕೆ ಕುಸಿಯಲಿದೆ.
ಹೈದರಾಬಾದ್‌ನಲ್ಲಿ ಮರಗಳ ಪ್ರದೇಶ ಕಳೆದ 20 ವರ್ಷಗಳಲ್ಲಿ ಶೇ.2.71ರಿಂದ ಶೇ.1.66ಕ್ಕೆ ಇಳಿದಿದ್ದು, 2024ರ ವೇಳೆಗೆ ಇದು ಶೇ.1.84 ಆಗಲಿದೆ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನಡೆಸಿದ ಅಧ್ಯಯನದಿಂದ ತಿಳಿದು ಬಂದ ಅಂಕಿ ಅಂಶಗಳಿವು. ಉಪಗ್ರಹ ಮೂಲದ ಸೆನ್ಸಾರ್‌ಗಳ ಸಹಾಯದಿಂದ ಈ ಅಧ್ಯಯನ ನಡೆಸಲಾಗಿದೆ. ದಶಕದ ಹಿಂದಿನ ಚಿತ್ರಗಳ ಜತೆ ಹೋಲಿಸಿ, ಭೂತ ಹಾಗೂ ಭವಿಷ್ಯದ ಅಭಿವೃದ್ಧಿಯ ಮಾದರಿಗಳನ್ನು ರೂಪಿಸಿ, ಈ ನಾಲ್ಕು ಭಾರತೀಯ ನಗರಗಳ ನಗರೀಕರಣದ ದರವನ್ನು ಅಂದಾಜು ಮಾಡಲಾಗಿದೆ. ಪರಿಸರ ವಿಜ್ಞಾನ ಕೇಂದ್ರದ ಇಂಧನ ಹಾಗೂ ಜಲಾನಯನ ಸಂಶೋಧನಾ ತಂಡದ ಪ್ರಾಧ್ಯಾಪಕ ಟಿ.ವಿ.ರಾಮಚಂದ್ರನ್ ಮತ್ತು ತಂಡ ಈ ಅಧ್ಯಯನ ಕೈಗೊಂಡಿದೆ. ಬದಲಾವಣೆಯ ಮಧ್ಯವರ್ತಿಗಳು ಹಾಗೂ ಪ್ರಗತಿಯ ಚಾಲನಾ ಶಕ್ತಿಗಳಾದ ರಸ್ತೆ ಜಾಲ, ರೈಲು ನಿಲ್ದಾಣ, ಬಸ್ ನಿಲ್ದಾಣ, ಶಿಕ್ಷಣ ಸಂಸ್ಥೆಗಳು ಹಾಗೂ ಕೈಗಾರಿಕೆಗಳು, ರಕ್ಷಣಾ ಕಚೇರಿಗಳು, ರಕ್ಷಿತಾರಣ್ಯ, ಕಣಿವೆ ಪ್ರದೇಶ ಹಾಗೂ ಉದ್ಯಾನವನಗಳು ಸೇರಿದಂತೆ ಸುರಕ್ಷಿತ ಪ್ರದೇಶಗಳನ್ನು ಅಧ್ಯಯನ ನಡೆಸಲಾಗಿದೆ.
ಸಂಶೋಧಕರು ಭೂ ಬಳಕೆಯನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಿದ್ದಾರೆ. ನಗರ ಅಥವಾ ಕಟ್ಟಡ ಪ್ರದೇಶ, ಇದರಲ್ಲಿ ವಸತಿ ಹಾಗೂ ಕೈಗಾರಿಕಾ ಪ್ರದೇಶಗಳು ಸೇರುತ್ತವೆ; ರಸ್ತೆ, ಫುಟ್‌ಪಾತ್‌ನಂಥ ಪ್ರದೇಶ ಹಾಗೂ ಕಟ್ಟಡ ನಿರ್ಮಾಣ ಪ್ರದೇಶದ ಜತೆ ಹೊಂದಿಕೊಂಡಿರುವ ಪ್ರದೇಶಗಳು; ಕೆರೆ, ಸರೋವರ, ಚರಂಡಿಯಂಥ ನೀರಿನ ಪ್ರದೇಶಗಳು ಹಾಗೂ ಹಸಿರು ಪ್ರದೇಶ. ಅರಣ್ಯ ಮತ್ತು ಬೆಳೆಸಿದ ಗಿಡಗಳ ಪ್ರದೇಶ. ಉಳಿದಂತೆ ಕಲ್ಲು, ತ್ಯಾಜ್ಯಗುಂಡಿ, ಬಯಲು ಪ್ರದೇಶ, ಕಟ್ಟಡ ನಿವೇಶನ, ಟಾರು ಹಾಕದ ರಸ್ತೆ, ಕೃಷಿ ಪ್ರದೇಶ, ಗಿಡಗಳನ್ನು ಬೆಳೆಸುವ ನರ್ಸರಿ ಹಾಗೂ ಉಳಿಕೆ ಭೂ ಪ್ರದೇಶ ಇತರ ವರ್ಗದಲ್ಲಿ ಸೇರುತ್ತದೆ.
ಪ್ರತೀ ನಗರಗಳ ಅಧ್ಯಯನದಲ್ಲಿ ಅವರು ಏನು ಕಂಡುಕೊಂಡಿದ್ದಾರೆ ಎಂಬ ಅಂಶ ಇಲ್ಲಿದೆ.
ಕೊಲ್ಕತ್ತ: ಕೊಲ್ಕತ್ತ ಜನಸಂಖ್ಯೆ 1.41 ಕೋಟಿ. ಜನಸಂಖ್ಯೆ ಆಧಾರದಲ್ಲಿ ದೇಶದ ಮೂರನೆ ಅತಿದೊಡ್ಡ ನಗರ. 1990ರಿಂದ 2010ರವರೆಗೆ ಕಟ್ಟಡಗಳ ನಿರ್ಮಿತಿ ಪ್ರದೇಶ ಶೇ.190ರಷ್ಟು ಹೆಚ್ಚಿದೆ. 1990ರಲ್ಲಿ ಒಟ್ಟು ಭೂ ಪ್ರದೇಶದ ಶೇ.2.2ರಷ್ಟು ಕಟ್ಟಡಪ್ರದೇಶ ಇತ್ತು. 2010ರಲ್ಲಿ ಇದು ಶೇ.8.2ಕ್ಕೆ ಹೆಚ್ಚಿದೆ. 2030ರ ವೇಳೆಗೆ ಇದು ಇನ್ನೂ ಶೇ.51.27ರಷ್ಟು ಹೆಚ್ಚಳವಾಗುವ ಅಂದಾಜು ಇದೆ.
ಹೈದರಾಬಾದ್: ನಗರದ ಜನಸಂಖ್ಯೆ 2011ರಲ್ಲಿ 77.4 ಲಕ್ಷ. 2014ರಲ್ಲಿ ಇದು ಒಂದು ಕೋಟಿ ಜನಸಂಖ್ಯೆ ಹೊಂದಿದ ಮೆಗಾ ಸಿಟಿಯಾಗುವ ನಿರೀಕ್ಷೆ ಹೊಂದಿತ್ತು. 1999ರಿಂದ 2009 ರ ಅವಧಿಯಲ್ಲಿ ನಗರದಲ್ಲಿ ಕಟ್ಟಡ ಪ್ರದೇಶ ಶೇ.400ರಷ್ಟು ಏರಿಕೆ ಯಾಗಿದೆ. 1999ರಲ್ಲಿ ಒಟ್ಟು ಭೂಭಾಗದ 2.55 ಪ್ರದೇಶದಲ್ಲಿ ಕಟ್ಟಡಗಳಿದ್ದರೆ, 2009ರಲ್ಲಿ ಇದು ಶೇ.13.55ಕ್ಕೆ ಹೆಚ್ಚಿದೆ. 2030ರ ವೇಳೆಗೆ ಶೇ.51.27ರಷ್ಟು ಏರಿಕೆಯಾಗುವ ಲಕ್ಷಣ ಇದೆ.
ಅಹ್ಮದಾಬಾದ್: 2011ರ ಜನಗಣತಿಯಂತೆ ನಗರದ ಜನಸಂಖ್ಯೆ 55 ಲಕ್ಷ. ಜನಸಂಖ್ಯೆವಾರು ಇದು ದೇಶದ ಆರನೆ ಅತಿದೊಡ್ಡ ನಗರ ಹಾಗೂ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಇದಕ್ಕೆ ಮೂರನೆ ಸ್ಥಾನ. 1990 ರಿಂದ 2010ರ ಅವಧಿಯಲ್ಲಿ ನಗರ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಶೇ.132ರಷ್ಟು ಹೆಚ್ಚಿದೆ. 1990ರಲ್ಲಿ ಒಟ್ಟು ಭೂಭಾಗದ ಶೇ.7.03ರಷ್ಟು ಕಟ್ಟಡಗಳಿದ್ದರೆ, 2010ರಲ್ಲಿ ಶೇ.16.34ಕ್ಕೆ ಇದು ಹೆಚ್ಚಿದ.ಎ 2024ರಲ್ಲಿ ಇದು ಶೇ.38.3ಕ್ಕೆ ಹೆಚ್ಚುವ ಸಾಧ್ಯತೆ ಇದೆ.
ಭೋಪಾಲ್: ದೇಶದ ಹಸಿರು ನಗರಗಳಲ್ಲೊಂದು ಎನಿಸಿರುವ ಭೋಪಾಲ್‌ಗೆ ಜನಸಂಖ್ಯೆಯಲ್ಲಿ 16ನೆ ಸ್ಥಾನ. ನಗರದ ಒಟ್ಟು ಜನಸಂಖ್ಯೆ 16 ಲಕ್ಷ. ಇತರ ನಗರಗಳಿಗೆ ಹೋಲಿಸಿದರೆ ಇದು ಇಂದಿಗೂ ಉತ್ತಮವಾಗಿದೆ. ಅದರೆ ಕಾಂಕ್ರಿಟೀಕರಣದ ಪ್ರವೃತ್ತಿ ಸ್ಪಷ್ಟ. 1992ರಲ್ಲಿ ನಗರದ ಒಟ್ಟು ಪ್ರದೇಶದ ಶೇ.66 ಭಾಗದಲ್ಲಿ ಹಸಿರು ಇದ್ದರೆ, ಇದೀಗ ಶೇ.21ಕ್ಕೆ ಇಳಿದಿದೆ. 1977ರಲ್ಲಿ ಈ ಪ್ರಮಾಣ ಶೇ.92ರಷ್ಟಿತ್ತು ಎನ್ನುವುದು ಗಮನಾರ್ಹ.
ಜೌಗು ಪ್ರದೇಶ ಹಾಗೂ ಹಸಿರು ಪ್ರದೇಶ ನಷ್ಟ:
ಪ್ರವಾಹ: ಬಯಲು ಪ್ರದೇಶ, ಜಲತಾಣಗಳು, ಜೌಗು ಪ್ರದೇಶ ಹಾಗೂ ಹಸಿರು ಪ್ರದೇಶಗಳು ವಾಸದ ಬಡಾವಣೆಗಾಗಿ, ರಸ್ತೆಗಳಾಗಿ ಹಾಗೂ ವಾಹನ ನಿಲುಗಡೆ ತಾಣಗಳಾಗಿ ಮಾರ್ಪಟ್ಟಿರುವ ಹಿನ್ನೆಲೆಯಲ್ಲಿ ಬಿದ್ದ ಮಳೆಯನ್ನು ಹೀರಿಕೊಳ್ಳುವ ಸಾಮರ್ಥ್ಯ ಗಣನೀಯವಾಗಿ ಕಡಿಮೆಯಾಗಿದೆ. ನೈಸರ್ಗಿಕ ಚರಂಡಿಯ ಒತ್ತುವರಿ, ಭೂಲಕ್ಷಣಗಳ ಬದಲಾವಣೆ, ಎತ್ತರದ ಕಟ್ಟಡಗಳ ನಿರ್ಮಾಣ ಮತ್ತಿತರ ಕಾರಣಗಳಿಂದ ಪ್ರವಾಹ ಭೀತಿಯನ್ನು ಹೆಚ್ಚಿಸಿದೆ. ಸಾಮಾನ್ಯ ಮಳೆ ಬಿದ್ದರೂ ಪ್ರವಾಹ ಉಂಟಾಗುವ ಸ್ಥಿತಿ ನಿರ್ಮಾಣವಾಗಿದೆ.
ಅಂತರ್ಜಲ ಮಟ್ಟ ಕುಸಿತ
ಬಿಸಿದ್ವೀಪ: ಅಧಿಕ ಪ್ರಮಾಣದ ಶಕ್ತಿ ಬಳಕೆಯ ಕಾರಣದಿಂದ ಶಕ್ತಿ ಹೊರ ಹಾಕಲ್ಪಡುವ ಕ್ರಿಯೆಯೂ ಸಹಜವಾಗಿಯೇ ಹೆಚ್ಚುತ್ತದೆ. ಇದರಿಂದಾಗಿ ಎತ್ತರದ ಮೇಲ್ಮೈ ಹಾಗೂ ವಾತಾವರಣದ ಉಷ್ಣತೆ ಸಹಜವಾಗಿತೇ ಹೆಚ್ಚಿ, ಬಿಸಿ ದ್ವೀಪಗಳು ನಿರ್ಮಾಣವಾಗುತ್ತವೆ.
ಇಂಗಾಲದ ಹೆಜ್ಜೆಗುರುತು: ವಿದ್ಯುತ್ ಬಳಕೆ ಅಧಿಕವಾಗು ವುದು, ವಾಸ್ತುಶಿಲ್ಪಗಳ ನಿರ್ಮಾಣ, ಅಧಿಕ ವಾಹನಗಳು, ಸಂಚಾರ ಇತಿಮಿತಿಗಳು ಇಂಗಾಲ ಬಿಡುಗಡೆ ಪ್ರಮಾಣ ಅಧಿಕವಾಗಲು ಕಾರಣವಾಗಿವೆ. ತ್ಯಾಜ್ಯವಸ್ತುಗಳ ಅಸಮರ್ಪಕ ನಿರ್ವಹಣೆಯಿಂದಾಗಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.
ಕೃಪೆ:Indiaspend.com
ಭಾರತದಲ್ಲಿ ನಗರೀಕರಣ ಎಂದರೆ ಕಾಂಕ್ರಿಟಿಕರಣ
ಭಾರತದಲ್ಲಿ 2010ಕ್ಕೆ ಕೊನೆಗೊಂಡ ದಶಕದಲ್ಲಿ ಒಟ್ಟು ಜನಸಂಖ್ಯೆಯ ಪೈಕಿ ನಗರ ಜನಸಂಖ್ಯೆ ಶೇ.26ಕ್ಕೆ ಹೆಚ್ಚಿದೆ. ಒಟ್ಟು 35 ಕೋಟಿ ಮಂದಿ ನಗರವಾಸಿಗಳು ಎಂದು ವಿಶ್ವಸಂಸ್ಥೆಯ ಅಂಕಿ ಅಂಶಗಳು ಹೇಳುತ್ತವೆ. 2010-2020ರಲ್ಲಿ ಈ ಪ್ರಮಾಣ ಶೇ.62ರಷ್ಟು ಹಾಗೂ 2020-2030ರ ಅವಧಿಯಲ್ಲಿ ಶೇ.108 ರಷ್ಟು ಪ್ರಗತಿಯಾಗುವ ನಿರೀಕ್ಷೆ ಇದೆ.
ಸಾಂಪ್ರದಾಯಿಕವಾಗಿ ಭಾರತದ ಅತ್ಯಂತ ಕ್ಷಿಪ್ರ ಅಭಿವೃದ್ಧಿಯ ನಗರ ಬೆಂಗಳೂರು. ಆದರೆ ಈ ನಗರದ ಕಾಂಕ್ರಿಟಿಕರಣ ಬಗ್ಗೆ ಇತ್ತೀಚೆಗೆ ಯಾವ ಅಧ್ಯಯನವೂ ನಡೆದಿಲ್ಲ. ಆದರೆ 2012ರಲ್ಲಿ ರಾಮಚಂದ್ರನ್ ಹಾಗೂ ಅವರ ತಂಡ ಪತ್ತೆ ಮಾಡಿದಂತೆ ಕಳೆದ ನಾಲ್ಕು ದಶಕಗಳಲ್ಲಿ ಕಟ್ಟಡ ನಿರ್ಮಾಣ ಪ್ರದೇಶ ಶೇ.584ರಷ್ಟು ಹೆಚ್ಚಿದೆ. ಹಸಿರು ಪ್ರಮಾಣ ಶೇ.66ರಷ್ಟು ಕುಸಿದಿದ್ದರೆ, ಜಲಪ್ರದೇಶ ಶೇ.74ರಷ್ಟು ಕಡಿಮೆಯಾಗಿದೆ.
ಬೆಂಗಳೂರಿನ ಕಟ್ಟಡ ನಿರ್ಮಾಣ ಕಾರ್ಯ ತೀರಾ ವೇಗವಾಗಿದ್ದುದು 1973ರಿಂದ 1992ರ ಅವಧಿಯಲ್ಲಿ. ಈ ಅವಧಿಯಲ್ಲಿ ಶೇ.342.83ರಷ್ಟು ಕಟ್ಟಡಗಳು ಹೆಚ್ಚಿವೆ. 1992-2010ರ ಅವಧಿಯಲ್ಲಿ ದಶಕದ ಪ್ರಗತಿ ಶೇ.100ರಷ್ಟಿತ್ತು. 1992ರಿಂದ 1999ರ ಅವಧಿಯಲ್ಲಿ ಶೇ.129.56 ಹಾಗೂ 1999-2002ರ ಅವಧಿಯಲ್ಲಿ ಶೇ.114.51, 2002-2006ರ ಅವಧಿ ಯಲ್ಲಿ ಶೇ.114.51 ಹಾಗೂ 2006-10ರ ಅವಧಿಯಲ್ಲಿ ಶೇ.126.19ರಷ್ಟಿತ್ತು.
ಬೆಂಗಳೂರಿನ ಜನಸಂಖ್ಯೆ 2001ರಲ್ಲಿ 65 ಲಕ್ಷ ಇದ್ದುದು 2011ರಲ್ಲಿ 96 ಲಕ್ಷಕ್ಕೆ ಹೆಚ್ಚಿದ್ದು, ಒಂದು ದಶಕದಲ್ಲಿ ಶೇ.46.68ರಷ್ಟು ಹೆಚ್ಚಳ ಕಂಡಿದೆ. ಜನದಟ್ಟಣೆ 2001ರಲ್ಲಿ ಪ್ರತೀ ಚದರ ಕಿ.ಮೀ.ಗೆ 10,732ರಿಂದ 2011ರ ವೇಳೆಗೆ ಪ್ರತಿ ಚದರ ಕಿ.ಮೀ.ಗೆ 13,392ಕ್ಕೆ ಹೆಚ್ಚಿದೆ. 2013ರಲ್ಲಿ ರಾಮಚಂದ್ರ ಅವರು ನಡೆಸಿದ ಅಧ್ಯಯನವು ಈ ಯೋಜಿತ ವಲ್ಲದ ಅಭಿವೃದ್ಧಿಯ ಪರಿಣಾಮಗಳನ್ನು ಈ ಕೆಳಗಿನಂತೆ ಪಟ್ಟಿ ಮಾಡಿದ್ದಾರೆ.







