ಭರತ್‌ಗೆ ‘ನ್ಯೂಝಿಲೆಂಡ್ ದೇಶೀಯ ಕ್ರಿಕೆಟ್ ಆಟಗಾರ ಪ್ರಶಸಿ’್
ಹ್ಯಾಮಿಲ್ಟನ್, ಎ.8: ಭಾರತ ಮೂಲದ ಭರತ್ ಪೊಪ್ಲಿ ನ್ಯೂಝಿಲೆಂಡ್‌ನ ದೇಶೀಯ ಕ್ರಿಕೆಟ್‌ನ ವರ್ಷದ ಆಟಗಾರ ಪ್ರಶಸ್ತಿಗೆ ನೇಮಕಗೊಂಡಿದ್ದಾರೆ.
ಭಾರತದ ರಾಜಧಾನಿ ಹೊಸದಿಲ್ಲಿಯಲ್ಲಿ ಜನಿಸಿರುವ ಭರತ್ ನ್ಯೂಝಿಲೆಂಡ್‌ನ ದೇಶೀಯ ತಂಡ ನಾರ್ಥರ್ನ್ ಡಿಸ್ಟ್ರಿಕ್ಸ್ ಪರವಾಗಿ 65.78ರ ಸರಾಸರಿಯಲ್ಲಿ ಒಟ್ಟು 1,149 ರನ್ ಗಳಿಸಿದ್ದಾರೆ. ಈ ಸಾಧನೆಗಾಗಿ ಪ್ಲಂಕೆಟ್ ಶೀಲ್ಡ್ ಪ್ರಶಸ್ತಿಯನ್ನು ಜಯಿಸಿದ್ದಾರೆ. ಪ್ಲಂಕೆಟ್ ಶೀಲ್ಡ್ ಋತುವಿನಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ನಾಲ್ಕನೆ ಬ್ಯಾಟ್ಸ್‌ಮನ್ ಆಗಿದ್ದಾರೆ. ಒಟ್ಟು 3 ಶತಕಗಳನ್ನು ಬಾರಿಸಿರುವ ಭರತ್ ಗರಿಷ್ಠ 172 ರನ್ ಗಳಿಸಿದ್ದಾರೆ. ಮೂರು ಬಾರಿ ನರ್ವಸ್ ನೈಂಟಿಗೆ ಔಟಾಗಿದ್ದಾರೆ. ಸ
ಸಾರ್ವಕಾಲಿಕ ಶ್ರೇಷ್ಠ ದೇಶೀಯ ಆಟಗಾರರ ಪಟ್ಟಿಯಲ್ಲಿ ಭರತ್ ಮೂರನೆ ಸ್ಥಾನದಲ್ಲಿದ್ದಾರೆ. ಮಾರ್ಟಿನ್ ಕ್ರೋವ್(1348ರನ್, 1986-87) ಹಾಗೂ ಇಂಗ್ಲೆಂಡ್‌ನ ಅಂತಾರಾಷ್ಟ್ರೀಯ ಆಟಗಾರ ಗ್ರೇಮ್ ಹಿಕ್(1228 ರನ್, 1988-89) ಒಂದೇ ಋತುವಿನಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.
ಭಾರತದಲ್ಲಿ ಜನಿಸಿ, ನ್ಯೂಝಿಲೆಂಡ್‌ನಲ್ಲಿ ಬೆಳೆದು ದೊಡ್ಡವನಾಗಿರುವ ಭರತ್ ಕಿವೀಸ್‌ನ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ರೊಂದಿಗೆ ಕಾಲೇಜ್ ಮಟ್ಟದ ಕ್ರಿಕೆಟ್ ಆಡಿದ್ದಾರೆ.





