ನಕಲಿ ನೋಟು ಪ್ರಕರಣದ ಆರೋಪಿ ಸೆರೆ

ಕಾಸರಗೋಡು, ಎ.8: ನಕಲಿ ನೋಟು ಪ್ರಕರಣಕ್ಕೆ ಸಂಬಂಧ ಪಟ್ಟಂತೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಅಪರಾಧ ಪತ್ತೆ ದಳದ ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತನನ್ನು ಸುರತ್ಕಲ್ ಕೃಷ್ಣಾಪುರದ ಎಂ.ಶರೀಫ್ (48) ಎಂದು ಗುರುತಿಸಲಾಗಿದೆ.
2002ರಲ್ಲಿ ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ನಕಲಿ ನೋಟು ಪ್ರಕರಣವೊಂದರ ಪ್ರಮುಖ ಆರೋಪಿಯಾಗಿದ್ದ ಶರೀಫ್, ಪೊಲೀಸರಿ ಂದ ಬಂಧನಕ್ಕೊಳಗಾಗಿದ್ದ. 2008ರ ಬಳಿಕ ಈತ ತಲೆಮರೆಸಿಕೊಂಡಿದ್ದು, ನ್ಯಾಯಾಲಯಕ್ಕೆ ಹಾಜ ರಾಗದೆ ತಪ್ಪಿಸಿಕೊಂಡಿದ್ದ ಎನ್ನಲಾಗಿದೆ.
ಶರೀಫ್, ಆರೋನ್, ಮುನೀರ್ ಎಂಬ ಹೆಸರುಗಳಿಂದ ಕರ್ನಾ ಟಕದ ಹಲವೆಡೆಗಳಲ್ಲಿ ಈತ ತಲೆ ಮರೆಸಿಕೊಂಡಿದ್ದ.ಮೊಬೈಲ್ ಸಿಮ್ಗಳನ್ನು ಆಗಾಗ ಬದಲಾಯಿಸುತ್ತಿದ್ದ. ಈ ನಡುವೆ ಲಭಿಸಿದ ಖಚಿತ ಮಾಹಿತಿಯಂತೆ ಅಪರಾಧ ಪತ್ತೆ ದಳದ ಸಿಬ್ಬಂದಿ ವಾಮಂಜೂರಿನಲ್ಲಿ ಆರೋ ಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸರನ್ನು ಕಂಡು ಪರಾ ರಿಯಾಗಲೆತ್ನಿಸಿದ್ದು, ಪೊಲೀಸರು ಬೆನ್ನಟ್ಟಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story





