ಪ್ರತ್ಯೇಕ ಪ್ರಕರಣ: ನಾಲ್ವರ ಆತ್ಮಹತ್ಯೆ
ಹಿರಿಯಡ್ಕ, ಎ.8: ಅಂಜಾರು ಗ್ರಾಮದ ಪಡುಅಂಜಾರಿನ ನೆಮ್ಮದಿ ನಿಲಯದ ಸಂಜೀವ ಶೆಟ್ಟಿ (70) ಎಂಬವರು ಗುರುವಾರ ಸಂಜೆ 4ರಿಂದ 5 ಗಂಟೆಯ ನಡುವೆ ಮನೆಯ ಬಾವಿಯ ಹಗ್ಗದಿಂದ ನೇಣು ಬಿಗಿದುಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಶಿವಪುರ ಗ್ರಾಮದ ಗಾಳಿಗುಡ್ಡೆ ನಿವಾಸಿ ಗಿರಿಯ ನಾಯ್ಕೆ ಎಂಬವರು ಗುರುವಾರ ಸಂಜೆಯ ವೇಳೆ ತನ್ನ ಮನೆಯ ಬಚ್ಚಲು ಕೋಣೆಯ ಚಿಲಕ ಹಾಕಿಕೊಂಡು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ: ಶಿವಪುರ ಗ್ರಾಮದ ಅಲ್ಜ ಖಜಾನೆಯ ರಾಜು ಶೆಟ್ಟಿ ಎಂಬವರು ಗುರುವಾರ ಅಪರಾಹ್ನ 2ರಿಂದ 4 ಗಂಟೆಯ ಮಧ್ಯೆ ತಮ್ಮ ಮನೆಯ ಬಳಿ ಇರುವ ಬಚ್ಚಲು ಕೋಣೆಯಲ್ಲಿ ಬೈರಾಸ್‌ನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಲ್ಪೆ: ಇಲ್ಲಿ ವಾಸವಾಗಿರುವ ಮೂಲತಃ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕು ಕುಲಗೋಡ ಗ್ರಾಮದ ಕವಿತಾ ಜಾಜಾಬಾಯಿ ಎಂಬವರ ಗಂಡ ವಿಠ್ಠಲ ಕೃಷ್ಣಪ್ಪ ದಾಸರ (25) ನಿನ್ನೆ ಬೆಳಗ್ಗೆ ಮನೆಯ ಮಾಲಕಿ ವತ್ಸಲಾ ಬಾಯಿಯವರ ಮನೆಯ ಕೋಣೆಯೊಂದರ ಸರಳಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







