ಉಳ್ಳಾಲ: ಉಚಿತ ಮುಂಜಿ ಕಾರ್ಯಕ್ರಮ
ಉಳ್ಳಾಲ, ಎ.8: ಮಾರ್ಗತಲೆ ಅಲ್ ಅಮೀನ್ ಸ್ವಲಾತ್ ಕಮಿಟಿ 17ನೆ ವಾರ್ಷಿಕೋತ್ಸವದ ಪ್ರಯುಕ್ತ ಸ್ವಲಾತ್ ವಾರ್ಷಿಕ ಹಾಗೂ ಉಚಿತ ಮುಂಜಿ (ಸುನ್ನತ್) ಕಾರ್ಯಕ್ರಮ ಎ.16 ಮತ್ತು 17ರಂದು ಮಾರ್ಗತಲೆ ಜುಮಾ ಮಸೀದಿ ವಠಾರದಲ್ಲಿ ನಡೆಯಲಿದೆ.
ಎ.16ರಂದು ಮಗ್ರಿಬ್ ನಮಾಝಿನ ಬಳಿಕ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ಅಸ್ಸೈಯದ್ ಮುಹ್ಸಿನ್ ಸೈಯದ್ ಅಲವಿಕೋಯ ಅಲ್‌ಬುಖಾರಿ ಕಲ್ಲೇರಿ ಸ್ವಲಾತ್ ವಾರ್ಷಿಕದ ನೇತೃತ್ವ ವಹಿಸಲಿದ್ದಾರೆ. ಉಳ್ಳಾಲ ದರ್ಗಾ ಅಧ್ಯಕ್ಷ ಯು.ಎಸ್.ಹಂಝ ಅಧ್ಯಕ್ಷತೆ ವಹಿಸುವರು. ಅಸ್ಸೈಯದ್ ಜಲಾಲುದ್ದೀನ್ ತಂಙಳ್ ದುಆ ನೆರವೇರಿಸುವರು.
ಎ.17ರಂದು ಬೆಳಗ್ಗೆ ಉಚಿತ ಮುಂಜಿ ಕಾರ್ಯಕ್ರಮ ಮಾರ್ಗತಲೆ ಮದ್ರಸ ಹಾಲ್‌ನಲ್ಲಿ ನಡೆಯಲಿದೆ. ಉಚಿತ ಸುನ್ನತ್ ಮಾಡಲು ಇಚ್ಛಿಸುವವರು ಮೊ.ಸಂ.: 7204770775, 9986339910ನ್ನು ಸಂಪರ್ಕಿಸುವಂತೆ ಕೋರಲಾಗಿದೆ.
Next Story





