ಮೋದಿ ಯಾಕೆ ರಾತ್ರಿಯೇ ವಿಮಾನದಲ್ಲಿ ಪ್ರಯಾಣಿಸುತ್ತಾರೆ ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪ್ರಯಾಣಿಸುವ ಏರ್ ಇಂಡಿಯಾ ಒನ್‌ವಿಮಾನಗಳಲ್ಲಿ ಇತ್ತೀಚೆಗೆ ಚೆಕ್-ಇನ್ನ್ ಬ್ಯಾಗುಗಳು ವಿಮಾನದಿಂದ ಹೊರಬರುವುದೇ ಇಲ್ಲ. ಅದಕ್ಕೆ ಕಾರಣ ಪ್ರಧಾನಿ ತಮ್ಮ ಪ್ರವಾಸಗಳನ್ನು ಹೆಚ್ಚು ದೀರ್ಘವಾಗಿಸದಿರಲುರಾತ್ರಿ ಸಮಯವಿದೇಶಿ ಹೊಟೇಲುಗಳಲ್ಲಿ ತಂಗುವ ಬದಲು ವಿಮಾನದಲ್ಲೇ ಪ್ರಯಾಣಿಸ ಬಯಸುತ್ತಾರೆ.
ಮಾರ್ಚ್ 20ರಿಂದ ಎಪ್ರಿಲ್ 2ರ ತನಕ ತಮ್ಮ ಇತ್ತೀಚಿಗಿನ ಬೆಲ್ಜಿಯಂ, ಅಮೆರಿಕಾ ಹಾಗೂ ಸೌದಿ ಅರೇಬಿಯಾ ಪ್ರವಾಸದ ಸಮಯದಲ್ಲೂ ಪ್ರಧಾನಿ ಮೂರು ರಾತ್ರಿಗಳನ್ನು- ದೆಹಲಿಯಿಂದ ಬ್ರಸ್ಸೆಲ್ಸಿಗೆ, ಬ್ರಸ್ಸಲ್ಸ್ ನಿಂದವಾಷಿಂಗ್ಟನ್ ಡಿಸಿ ಹಾಗೂ ಅಲ್ಲಿಂದ ರಿಯಾಧ್‌ಗೆ ಪ್ರಯಾಣಿಸುವಾಗ ಏರ್ ಇಂಡಿಯಾ ಒನ್‌ನಲ್ಲೇ ಕಳೆದಿದ್ದಾರೆ. ತಮ್ಮ ಈ ಭೇಟಿಯ ಸಮಯ ಅವರು ಎರಡು ರಾತ್ರಿಗಳನ್ನು ಕ್ರಮವಾಗಿ ವಾಷಿಂಗ್ಟನ್ ಹಾಗೂ ರಿಯಾಧ್‌ನಲ್ಲಿ ಕಳೆದಿದ್ದಾರೆ.
''ಪ್ರಧಾನಿಯವರ ಅಮೆರಿಕಾ ಭೇಟಿಯನ್ನು ಕೇವಲ 97 ಗಂಟೆಗಳ ಅವಧಿಯಲ್ಲಿ ಮುಗಿಸುವುದು ಅಭೂತಪೂರ್ವ. ಪ್ರಧಾನಿ ವಿಮಾನದಲ್ಲೇ ರಾತ್ರಿ ಪ್ರಯಾಣಿಸಲು ಮನಸ್ಸು ಮಾಡದೇ ಇದ್ದಲ್ಲಿನಮ್ಮ ಪ್ರವಾಸ ಮುಗಿಸಲು ಇನ್ನೂ ಆರು ದಿನ ಬೇಕಾಗಬಹುದಿತ್ತು,''ಎಂದು ಹಿರಿಯ ಸರಕಾರಿ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಮ್ಮ ಎರಡು ವರ್ಷಗಳ ಅವಧಿಯಲ್ಲಿ ಮೋದಿಯವರು 95 ದಿನಗಳ ವಿದೇಶ ಪ್ರವಾಸ ಮಾಡಿದ್ದರೆ, ಹಿಂದಿನ ಪ್ರಧಾನಿ ಮನಮೋಹನ್ ಸಿಂಗ್ ಇದೇ ಅವಧಿಯಲ್ಲಿ 72 ದಿನಗಳ ವಿದೇಶ ಪಯಣ ಮಾಡಿದ್ದಾರೆ. ಆದರೆ ತಮ್ಮ 20 ವಿದೇಶ ಪ್ರವಾಸಗಳಲ್ಲಿ ಮೋದಿಯವರು 40 ದೇಶಗಳನ್ನು ಸಂದರ್ಶಿಸಿದ್ದರೆ, ಸಿಂಗ್ ಅವರು ಯುಪಿಎ-1 ಸರಕಾರದ ಅವಧಿಯಲ್ಲಿ ತಮ್ಮ 15 ವಿದೇಶ ಪ್ರವಾಸಗಳಲ್ಲಿ 18 ದೇಶಗಳನ್ನು ಸಂದರ್ಶಿಸಿದ್ದು, ಯುಪಿಎ-2 ಸರಕಾರದ ಅವಧಿಯಲ್ಲಿ17 ಪ್ರವಾಸಗಳಲ್ಲಿ 24 ದೇಶಗಳನ್ನು ಎರಡು ವರ್ಷಗಳಲ್ಲಿ ಸಂದರ್ಶಿಸಿದ್ದಾರೆ.
'ಮೋದಿಯವರು ಆದಷ್ಟು ಹೆಚ್ಚು ಕೆಲಸ ಮಾಡಲು ಬಯಸುತ್ತಾರೆ. ಅವರಲ್ಲಿ ಅಪರಿಮಿತ ಅತ್ಯುತ್ಸಾಹವಿದೆ,''ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.





