ಪನಾಮ ಪೇಪರ್ಸ್: ತಾನು ಕಾನೂನು ಪಾಲಿಸುವ ಪ್ರಜೆ ಎಂದ ಅಮಿತಾಭ್!

ಮುಂಬೈ, ಎಪ್ರಿಲ್.9: ತಾನು ದೇಶದ ಕಾನೂನನ್ನು ಪಾಲಿಸುವ ಪ್ರಜೆಯಾಗಿದ್ದು ವಾಣಿಜ್ಯ ತೆರಿಗೆ ಇಲಾಖೆಗೆ ನೆರವಾಗಲು ಸಿದ್ಧನಿರುವೆ ಎಂದು ಸಿನೆಮಾನಟ ಅಮಿತಾಭ್ ಬಚ್ಚನ್ ಹೇಳಿರುವುದಾಗಿ ವರದಿಯಾಗಿದೆ. ಕಳೆದ ಅರುವರ್ಷಗಳಿಂದ ಬಚ್ಚನ್ ವಾಣಿಜ್ಯ ತೆರಿಗೆ ಮತ್ತು ಆದಾಯ ತೆರಿಗೆ ಇಲಾಖೆಯ ತನಿಖೆಯ ಎದುರಿಸುತ್ತಿದ್ದಾರೆಂದು ಪತ್ರಿಕೆಗಳ ವರದಿಯ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟೀಕರಣವನ್ನು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ತಾನು ಕ್ಲಪ್ತವಾಗಿ ಇವರ ಪ್ರಶ್ನೆಗಳಿಗೆ ಮತ್ತು ನೋಟಿಸ್‌ಗಳಿಗೆ ಉತ್ತರ ನೀಡುವ ವ್ಯಕ್ತಿಯಾಗಿದ್ದೇನೆ ಎಂದ ಅವರು ಅದೇ ವೇಳೆ ವಿದೇಶದಲ್ಲಿ ಕಪ್ಪು ಹಣ ಇರಿಸಿದ ಕುರಿತು ತನಗೆ ಸಂಬಂಧವಿದೆ ಎಂಬ ವಿಚಾರವನ್ನು ಬಚ್ಚನ್ ನಿರಾಕರಿಸಿದ್ದಾರೆ. ಪನಾಮ ವರದಿಯಲ್ಲಿ ಸೂಚಿಸಿದಂತೆ ನಾಲ್ಕು ಕಂಪೆನಿಗಳ ನಿರ್ದೇಶಕ ತಾನಲ್ಲ. ಘಟನೆ ಕುರಿತು ಭಾರತ ಸರಕಾರದ ತನಿಖೆಯಲ್ಲಿ ತನಗೆ ತೃಪ್ತಿ ಇದೆ ಎಂದು ಬಚ್ಚನ್ ಹೇಳಿದ್ದಾರೆ.
ಕಪ್ಪು ಹಣ ಹೂಡಿಕೆಗೆ ನೆರವು ನೀಡುವ ಮೊಸಕ್ ಪೋನ್ಸೆಕ ಎಂಬ ಸಂಸ್ಥೆಯ ದಾಖಲೆಗಳು ಇತ್ತೀಚೆಗೆ ಬಯಲಾಗಿದ್ದವು. ಇಂಟರ್‌ನ್ಯಾಶನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ ಎಂ ಸಂಘಟನೆಯು ದಾಖಲೆಗಳನ್ನು ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಗೆ ಹಸ್ತಾಂತರಿಸಿತ್ತು. ಭಾರತದಿಂದ ನಟ ಅಮಿತಾಭ್ ಬಚ್ಚನ್, ಸೊಸೆ ಐಶ್ವರ್ಯರೈ, ಡಿಎಲ್‌ಎಫ್ ಕಂಪೆನಿ ಮಾಲಕ ಕೆಪಿ ಸಿಂಗ್,ಗೌತಂ ಅದಾನಿ ಸಹೋದರ ವಿನೋದ್ ಅದಾನಿ, ಅಪೋಲೊ ಟಯರ್ಸ್‌ನ ಪ್ರಮೋಟರ್ ಸಮೀರ್ ಗೆಹ್ಲೋತ್ ಎಂಬವರ ಸಹಿತ 500 ಮಂದಿಯ ಹೆಸರನ್ನು 8203ರ ಪಟ್ಟಿಯಲ್ಲಿ ಇತ್ತು ಎಂದು ವರದಿಗಳು ತಿಳಿಸಿವೆ.







