ಮರದ ಕೆಳಗೆ ಶಿಕ್ಷಣದ ನೆರಳು ನೀಡುವ ‘ಮಾಸ್ಟರ್ ಆಯೂಬ್’
ಸ್ಲಂ ಮಕ್ಕಳ ಅಜ್ಞಾನದ ಬೆಂಕಿ ನಂದಿಸುವ ಅಗ್ನಿಶಾಮಕ ಸಿಬ್ಬಂದಿ

ಇಸ್ಲಾಮಾಬಾದ್ : ಇಸ್ಲಾಮಾಬಾದಿನ ರಸ್ತೆಗಳಲ್ಲಿಸೈಕಲ್ ತುಳಿಯುತ್ತಾ ಸಾಗುವ 58 ವರ್ಷದ ಮೊಹಮ್ಮದ್ ಆಯೂಬ್ ಅವರನ್ನು ಒಮ್ಮೆ ಗಮನಿಸಿದಾಗ ಸಾಮಾನ್ಯ ನಾಗರಿಕರಂತೆ ಕಾಣುತ್ತಾರೆ. ಅಗ್ನಿ ಶಾಮಕ ದಳದಲ್ಲಿ ಸಿಬ್ಬಂದಿಯಾಗಿರುವ ಅವರು ಸಾಮಾನ್ಯ ನಾಗರಿಕರೇ ಆಗಿದ್ದರೂ ಅವರು ಮಾಡುವಂತಹ ಕಾರ್ಯ ಮಾತ್ರ ಅಸಾಮಾನ್ಯ.
ಪ್ರತಿ ದಿನ ತನ್ನ ಅಧಿಕೃತ ಕರ್ತವ್ಯ ನಿರ್ವಹಿಸಿ ಆಯೂಬ್ ನೇರವಾಗಿ ಸೈಕಲ್ ತುಳಿಯುವುದುನಗರದ ಎಫ್-6 ಸೆಕ್ಟರ್‌ನಲ್ಲಿ, ಪಾಕಿಸ್ತಾನದ ಸಂಸತ್ ಕಟ್ಟಡದಿಂದ ಆನತಿ ದೂರದಲ್ಲಿರುವ ಪಾರ್ಕೊಂದಕ್ಕೆ. ಅಲ್ಲಿಗೆ ಅವರು ಸರಿಯಾಗಿ ಅಪರಾಹ್ನ ಮೂರು ಗಂಟೆಗೆ ಆಗಮಿಸುವಾಗ ಅವರಿಗಾಗಿ ಅಲ್ಲಿ ಮರದ ನೆರಳಿನಲ್ಲಿ ಸುಮಾರು 200 ಮಕ್ಕಳು ಕಾದಿರುತ್ತಾರೆ. ಹೌದು ಈ ಮಕ್ಕಳೆಲ್ಲರೂ ತಮ್ಮ ಪ್ರೀತಿಯ ಮಾಸ್ಟರ್ ಆಯೂಬ್‌ಗಾಗಿ ಕಾಯುತ್ತಿದ್ದು ಅವರು ಕಲಿಸುವ ಪಾಠಗಳನ್ನು ಕೇಳಲು ಕಾತುರರಾಗಿರುತ್ತಾರೆ.
ಈ ಪಾರ್ಕಿನ ಮರದ ನೆರಳಿನಲ್ಲಿ ಆಯೂಬ್ ಅವರ ಶಾಲೆ ಕಳೆದ 30 ವರ್ಷಗಳಿಂದ ನಡೆಯುತ್ತಿದೆ. ‘‘ನನ್ನ ಕುಟುಂಬ ಸದಸ್ಯರೆಲ್ಲರೂ ಹಳ್ಳಿಯಲ್ಲಿದ್ದುದರಿಂದ ಇಲ್ಲಿ ನನ್ನ ಬಿಡುವಿನ ವೇಳೆಯಲ್ಲಿ ಸಮಾಜಕ್ಕೆ ಉಪಯೋಗವಾಗುವಂತಹ ಯಾವುದಾದರೂ ಕಾರ್ಯ ಮಾಡಬೇಕೆಂದಿದ್ದೆ. ಆಗ ನಾನು ಅಲ್ಲೇ ಹತ್ತಿರದಲ್ಲಿ ಕಾರು ತೊಳೆಯುತ್ತಿದ್ದ ಬಾಲಕನನ್ನು ನೋಡಿ ಆತ ಶಾಲೆಗೇಕೆ ಹೋಗುತ್ತಿಲ್ಲವೆಂದು ಪ್ರಶ್ನಿಸಿದಾಗ ಮನೆಯಲ್ಲಿನ ಬಡತನದ ಬಗ್ಗೆ ವಿವರಿಸಿದ್ದ. ನಾನು ಆತನಿಗೆ ಪುಸ್ತಕ ಪೆನ್ಸಿಲ್ ಕೊಟ್ಟು ಕಲಿಸಲು ಆರಂಭಿಸಿದೆ. ಮರುದಿನ ಆತ ತನ್ನ ಸ್ನೇಹಿತನೊಬ್ಬನನ್ನು ಕರೆದುಕೊಂಡು ಬಂದಿದ್ದ. ಹೀಗೆ ದಿನಗಳೆದಂತೆ ಹತ್ತಿರದ ಸ್ಲಂ ಪ್ರದೇಶದಲ್ಲಿ ವಾಸಿಸುವ ಹಲವಾರು ಮಕ್ಕಳು ಕಲಿಯಲು ಬರಲಾರಂಭಿಸಿದರು,’’ಎಂದು ಆಯೂಬ್ ನೆನಪಿಸಿಕೊಂಡರು.
ಇಲ್ಲಿ ಕಲಿತ ಹಲವಾರು ಮಕ್ಕಳು ಸರಕಾರದಿಂದ ಮಾನ್ಯತೆ ಪಡೆದ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಉತ್ತಮ ಕೆಲಸ ಪಡೆದಿದ್ದಾರೆ,’’ಎಂದು ಆಯೂಬ್ ಸಂತಸದಿಂದ ಹೇಳುತ್ತಾರೆ.
ಪ್ರಸಕ್ತ ಅವರ ಪಾರ್ಕ್ ಶಾಲೆಯಲ್ಲಿ ಕಲಿಯುತ್ತಿರುವ 200 ಮಂದಿಯಲ್ಲಿ ಹೆಚ್ಚಿನವರು ಬಡ ಮುಸ್ಲಿಂ ಹಾಗೂ ಕ್ರೈಸ್ತ ಕುಟುಂಬಗಳಿಂದ ಬಂದವರಾಗಿದ್ದಾರೆ.
ಆಯೂಬ್ ಅವರ ಮಾಜಿ ವಿದ್ಯಾರ್ಥಿಗಳು ಈಗ ಉತ್ತಮ ಉದ್ಯೋಗದಲ್ಲಿದ್ದರೂ ತಮ್ಮ ಮಕ್ಕಳನ್ನು ಟ್ಯೂಷನ್ನಿಗಾಗಿ ಆಯೂಬ್ ಅವರ ತರಗತಿಗಳಿಗೆ ಸಂಜೆ ಕಳುಹಿಸುತ್ತಾರೆ.
ಅಗ್ನಿಶಾಮಕ ಉದ್ಯೋಗಿಯಾಗಿ ಅವರು ಸೆಪ್ಟೆಂಬರ್ 2008ರಲ್ಲಿ ಮಾರಿಯಟ್ ಹೊಟೇಲ್ ಮೇಲೆ ನಡೆದ ಉಗ್ರ ದಾಳಿಯ ಸಂದರ್ಭ ಹಲವರನ್ನು ರಕ್ಷಿಸಿದ್ದಾರೆ. ಆಗ ಅವರ ಹಣೆ ಹಾಗೂ ಕೈಗೆ ಆದ ಸುಟ್ಟ ಗಾಯಗಳ ಕಲೆಗಳು ಈಗಲೂ ಇವೆ.
ಆಯೂಬ್ ಅವರಿಗೆ ಈಗ ತಮ್ಮ ಶಾಲೆಗೆ ಸ್ವಂತ ಕಟ್ಟಡ ಕಟ್ಟುವ ಗುರಿಯಿದೆ. ನಿವೃತ್ತಿಯ ನಂತರ ಪೂರ್ಣಕಾಲಿಕವಾಗಿ ಶಾಲೆ ನಡೆಸುವ ಇರಾದೆ ಅವರಿಗಿದೆ. ಅದಕ್ಕಾಗಿ ಪ್ರತಿ ದಿನ ತರಗತಿಗೆ ಬರುವ ಮೊದಲುಮಕ್ಕಳು ಹೊಸ ಕಟ್ಟಡಕ್ಕಾಗಿ ಕಲ್ಲು ಹಾಗೂ ಇಟ್ಟಿಗೆಗಳನ್ನು ಸಂಗ್ರಹಿಸಿ ತಮ್ಮ ಆಯೂಬ್ ಮಾಸ್ಟರ್ ಅವರ ಕೈಂಕರ್ಯದಲ್ಲಿ ಕೈಜೋಡಿಸಲು ನಿರ್ಧರಿಸಿದ್ದಾರೆ.
Teaching Pakistan's poor how to read and writePakistani firefighter Mohammed (Master) Ayub grew up poor and struggling for an education, and he swore never to let that happen to another kid. So for 30 years he's been teaching poor children under a tree in a park. Al Jazeera's Hassan Ghani went for a lesson.Read more about Master Ayub: aje.io/PakistanTeacher
Posted by Al Jazeera English on Wednesday, 6 April 2016







