ಪ್ರಧಾನಿ ಮೋದಿಯ ಜನಧನ್ ಯೋಜನೆ ಬ್ಯಾಂಕ್‌ಗಳಿಗೆ ಸಂಕಷ್ಟ

ಲಕ್ನೊ, ಎಪ್ರಿಲ್.9: ಪ್ರಧಾನಿ ನರೇಂದ್ರ ಮೋದಿಯ ಜನಧನ್ ಯೋಜನೆಯ ಆರಂಭ ಭಾರೀ ಆವೇಶದಿಂದ ನಡೆದಿತ್ತು. ಆದರೆ ಈಗ ಈ ಜನಧನ್ ಖಾತೆ ನಿಭಾಯಿಸುವುದು ಬ್ಯಾಂಕ್‌ಗಳಿಗೆ ಕಷ್ಟಕರವಾಗಿದೆ ಎಂದು ವರದಿಯಾಗಿದೆ. ಬ್ಯಾಂಕ್ ಅಧಿಕಾರಿಗಳು ರಿಸರ್ವ್‌ಬ್ಯಾಂಕ್‌ನ ಒತ್ತಡದಿಂದ ತೆರೆಯಲಾದ ಝೀರೊ ಬ್ಯಾಲೆನ್ಸ್ ಖಾತೆಗಳನ್ನು ಸಕ್ರಿಯವಾಗಿರಿಸಲು ಹಣ ವ್ಯಯಿಸಬೇಕಾಗಿ ಬಂದಿದೆ ಎನ್ನಲಾಗಿದೆ.
ಬ್ಯಾಂಕ್ ಅಧಿಕಾರಿಗಳು ಹೇಳುವ ಪ್ರಕಾರ ಜನಧನ್ ಖಾತೆ ತ್ರಾಸಕರವಾಗಿದೆ. ಝೀರೊ ಬ್ಯಾಲೆನ್ಸ್‌ನಲ್ಲಿ ತೆರೆದ ಖಾತೆಗಳಲ್ಲಿ ಒಂದೂ ಪೈಸೆಯನ್ನು ಜಮೆ ಮಾಡಲಾಗುತ್ತಿಲ್ಲ. ಖಾತೆಯನ್ನು ಸಕ್ರಿಯವಾಗಿರಿಸಲಿಕ್ಕೆ ಭಾರೀ ಒತ್ತಡವಿದೆ. ಭಾರತೀಯ ಸ್ಟೇಟ್ ಬ್ಯಾಂಕ್‌ನ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಎರಡು ಲಕ್ಷ ರೂಪಾಯಿಯ ವಿಮೆ ಮತ್ತು ಐದು ಸಾವಿರ ರೂಪಾಯಿಯ ಓವರ್‌ಡ್ರಾಫ್ಟ್ ಆಸೆಯಲ್ಲಿ ದೇಶಾದ್ಯಂತ ಹನ್ನೊಂದು ಕೋಟಿಗೂ ಅಧಿಕ ಜನಧನ್ ಖಾತೆ ತೆರೆಯಲಾಗಿದೆ. ಇದರಲ್ಲಿ ನಾಲ್ಕು ಕೋಟಿಗೂ ಅಧಿಕಖಾತೆಯಲ್ಲಿ ನಯಾಪೈಸೆ ಬ್ಯಾಲೆನ್ಸ್ ಇಲ್ಲ. ಅಧಿಕಾರಿ ಝೀರೊ ಬ್ಯಾಲೆನ್ಸ್‌ನಿಂದಾಗಿ ಆ ಖಾತೆಗೆ ವಿಮೆಯ ಲಾಭವೂ ಇಲ್ಲ ಓವರ್‌ಡ್ರಾಫ್ಟ್ ಸಿಗುವುದಿಲ್ಲ. ಹೀಗಿರುವಾಗ ಖಾತೆಯನ್ನು ಸಕ್ರಿಯವಾಗಿರಿಸಬೇಕೆಂದು ರಿಸರ್ವ್ ಬ್ಯಾಂಕ್‌ನಿಂದ ಭಾರೀ ಒತ್ತಡವೂ ಇದೆ ಎಂದು ಬ್ಯಾಂಕ್ ಅಧಿಕಾರಿ ತಿಳಿಸಿದ್ದಾರೆ. ಈ ಒತ್ತಡದಿಂದಾಗಿ ಬ್ಯಾಂಕ್‌ಗಳು ನಿರ್ಬಂಧಕ್ಕೊಳಗಾಗಿವೆ. ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು ಐಎಎನ್‌ಎಸ್ ಗೆ ಖಾತೆಯನ್ನು ತೆರೆದ ಬಳಿಕ ಖಾತೆದಾರ ಮತ್ತೆ ಬ್ಯಾಂಕ್‌ನತ್ತ ಮುಖ ಹಾಕಿಲ್ಲ ಎಂದು ತಿಳಿಸಿರುವುದಾಗಿ ವರದಿ ತಿಳಿಸಿದೆ.
"ಐದು ಸಾವಿರ ರೂಪಾಯಿಯ ಓವರ್‌ಡ್ರಾಫ್ಟ್‌ನ ಆಸೆಯಲ್ಲಿ ತೆರೆಯಲಾದ ಖಾತೆಗಳಿಗೆ ಪೈಸೆ ಬರದಿದ್ದರೆ ಅವರಿಗೆ ಭ್ರಮನಿರಸನವಾಗಲಿದೆ. ಇಂತಹ ಖಾತೆದಾರರಿಗೆ ಹಲವು ಬಾರಿ ಪತ್ರ ಬರೆಯಲಾಗಿದೆ.ಆದರೆ ಯಾವುದೇ ಪ್ರಯೋಜನವಾಗಿಲ್ಲ. ಈಗ ಈ ಖಾತೆ ಬ್ಯಾಂಕ್ ಮ್ಯಾನೇಜರ್‌ಗೆ ತಲೆನೋವಾಗಿದೆ" ಎಂದು ಆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಅಧಿಕಾರಿಯು ಈ ಕಷ್ಟದಿಂದ ಪಾರಾಗಲು ಶೂನ್ಯ ಬ್ಯಾಲೆನ್ಸ್ ಖಾತೆಯನ್ನು ನಿರ್ವಹಿಸಲು ಬ್ಯಾಂಕ್ ಮ್ಯಾನೇಜರ್ ರೂಪಾಯಿ ಹಾಕಬೇಕಾಗಿದೆ. ಈ ಕೆಲಸದಲ್ಲಿ ಎಲ್ಲ ಸಿಬ್ಬಂದಿ ನಿರತರಾಗಿದ್ದಾರೆ ಎಂದು ಅವರು ತಮ್ಮ ಅಭಿಮತವನ್ನು ವ್ಯಕ್ತಪಡಿಸಿದ್ದಾರೆ.
ಈಗ ಖಾತೆದಾರಿನ ಹೆಸರಲ್ಲಿ ಒಂದು ಒಂದು ರೂಪಾಯಿಯ ವೋಚರ್ ಮಾಡಲಾಗುತ್ತದೆ. ಇದಕ್ಕೆ ದಿನವಹಿ ಚಾಕಾಫಿ ಖರ್ಚಿನಿಂದ ತುಂಬಲಾಗುತ್ತಿದೆ. ಪ್ರದಾನ ಮಂತ್ರಿ ನರೇಂದ್ರ ಮೋದಿ ಈ ಯೋಜನೆಯನ್ನು ಹೊಗಳುತ್ತಲೇಇರುತ್ತಾರೆ. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಕಳೆದ ಎರಡು ವರ್ಷಗಳಿಂದ ಬ್ಯಾಂಕ್‌ನಲ್ಲಿ ಇಷ್ಟೊಂದು ಖಾತೆಗಳು ತೆರೆಯಲ್ಪಟ್ಟಿದೆ ಎಂದು ಹೇಳುತ್ತಾರೆ. ನೊಯ್ಡಾದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಜನಧನ್‌ಯೋಜನೆಯಿಂದಾಗಿ ದೇಶದ ಖಜಾನೆಗೆ 35ಸಾವಿರ ಕೋಟಿರೂಪಾಯಿ ಒಟ್ಟುಗೂಡಿದೆ ಎಂದೂ ಹೇಳುತ್ತಿದ್ದಾರೆ. ಆದರೆ ಇದಕ್ಕಿಂತ ವಿಪರೀತ ವಾಸ್ತವವನ್ನು ಬ್ಯಾಂಕ್ ಅಧಿಕಾರಿಗಳು ತಿಳಿಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.







