ಪುತ್ತೂರು: ಪರಿಹಾರ ಚೆಕ್ ವಿತರಣೆ

ಪುತ್ತೂರು: ಆಕಸ್ಮಿಕ ಮರಣ ಹೊಂದಿದ ರೈತರ ಕುಟುಂಬಕ್ಕೆ ಶಾಸಕಿ ಶಕುಂತಳಾ ಶೆಟ್ಟಿ ತಲಾ 1 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು. ಮೃತ ದೋಳ್ಪಾಡಿ ಮರಕಡ ಮೋನಪ್ಪ ಗೌಡ ಪತ್ನಿ ಸುಂದರಿ, ಮೃತ ರೆಂಜಿಲಾಡಿ ರಾಮಣ್ಣ ಗೌಡ ಅವರ ಪತ್ನಿ ಸುಶೀಲ, ಮೃತ ರಿತೇಶ್ ಕೆಯ್ಯೂರು ಅವರ ತಂದೆ ರಮೇಶ್ ಪರಿಹಾರ ಮೊತ್ತ ಪಡೆದುಕೊಂಡರು. ಸಹಾಯಕ ಕೃಷಿ ನಿರ್ದೇಶಕ ನಯೀಮ್ ಹುಸೇನ್, ತಾಂತ್ರಿಕ ಅಧಿಕಾರಿ ಪದ್ಮನಾಭ ಶೆಟ್ಟಿ, ಸಮಾಜ ಕಲ್ಯಾಣ ಅಧಿಕಾರಿ ರಾಮಕೃಷ್ಣ, ಕಾರ್ಯನಿರ್ವಹಣಾಧಿಕಾರಿ ಜಗದೀಶ್, ಕೃಷ್ಣಪ್ರಸಾದ್ ಆಳ್ವ, ಸುಧಾಕರ್ ರೈ ಉಪಸ್ಥಿತರಿದ್ದರು.
Next Story





