ಪುತ್ತೂರು: ಹೊಲಿಗೆ ಯಂತ್ರ ವಿತರಣೆ

ಪುತ್ತೂರು: ಮರ್ದಾಳ ತರಬೇತಿ ಕೇಂದ್ರದಲ್ಲಿ 2014-15ನೇ ಸಾಲಿನ ಹೊಲಿಗೆ ತರಬೇತಿ ಪಡೆದು ಉತ್ತೀರ್ಣರಾದ ವಿದ್ಯಾರ್ಥಿನಿಯರಿಗೆ ಶನಿವಾರ ಶಾಸಕಿ ಶಕುಂತಳಾ ಶೆಟ್ಟಿ ಪುತ್ತೂರಿನಲ್ಲಿ ಹೊಲಿಗೆ ಯಂತ್ರ ವಿತರಿಸಿದರು. ಮರುವಂತಿಲ ನಿವಾಸಿ ರಝೀನಾ, ಬಸವಪಾಲು ನಿವಾಸಿ ಜೈನಾಬಿ ಅವರಿಗೆ ಶಾಸಕಿಯವರು ಈ ಸಂದರ್ಭದಲ್ಲಿ ಹೊಲಿಗೆ ಯಂತ್ರ ನೀಡಿದರು. ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಬಾಲಚಂದ್ರ ಕೆ, ಬನ್ನೂರು ಹಿಂ.ವ. ವಸತಿ ನಿಲಯ ಮೇಲ್ವಿಚಾರಕ ಜೋಸೆಫ್, ಯಶೋಧಾ, ವಕೀಲ ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
Next Story





