ಸುಳ್ಯ: ಎಪ್ರಿಲ್ 15ರಂದು ಜಲಾಲಿಯ್ಯ ರಾತೀಬ್ ಮಜ್ಲಿಸ್
ಸುಳ್ಯ: ಜಟ್ಟಿಪಳ್ಳದ ಹಯಾತುಲ್ ಇಸ್ಲಾಂ ಕಮಿಟಿ ವತಿಯಿಂದ 5ನೇ ವಾರ್ಷಿಕ ಜಲಾಲಿಯ್ಯ ರಾತೀಬ್ ಮಜ್ಲಿಸ್ ಮತ್ತು ಜಲಾಲಿಯ ಸಭಾಂಗಣದ ಉದ್ಘಾಟನೆ ಎಪ್ರಿಲ್ 15ರಂದು ನಡೆಯಲಿದೆ.
ರಶೀದ್ ಜಟ್ಟಿಪಳ್ಳ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಜಟ್ಟಿಪಳ್ಳ ಬಿ.ಯು.ಮದ್ರಸ ವಠಾರದಲ್ಲಿ ಜಲಾಲಿಯ ವೇದಿಕೆಯಲ್ಲಿ ನಡೆಯಲಿರುವ ಕಾರ್ಯಕ್ರಮದ ನೇತೃತ್ವ ಹಾಗೂ ಸಭಾಂಗಣದ ಉದ್ಘಾಟನೆಯನ್ನು ಜಹ್‌ಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೆರವೇರಿಸುವರು. ಅಹ್ಮದ್ ಖಾಸಿಂ ತಂಙಳ್ ಸಖಾಫಿ ಉದ್ಘಾಟನೆ ನೆರವೇರಿಸುವರು. ಹಯಾತುಲ್ ಇಸ್ಲಾಂ ಕಮಿಟಿ ಅಧ್ಯಕ್ಷ ಹಾಜಿ ಮುಹಮ್ಮದ್ ಅಧ್ಯಕ್ಷತೆ ವಹಿಸುವರು. ಹಲವಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಅನ್ನದಾನದ ವ್ಯವಸ್ಥೆಯಿದೆ ಎಂದು ಅವರು ಹೇಳಿದರು. ಕಮಿಟಿ ಅಧ್ಯಕ್ಷ ಎಸ್.ಎಸ್.ಮಹಮ್ಮದ್, ಸ್ವಾಗತ ಸಮಿತಿ ಅಧ್ಯಕ್ಷ ಅಬ್ದುಲ್ಲ ಎನ್.ಎ., ಗ್ರೀನ್ ಬಾಯ್ಸಾ ಅಧ್ಯಕ್ಷ ಝುಬೇರ್ ಬಾರಿಕ್ಕಾಡ, ಎಸ್‌ಎಸ್‌ಎಫ್ ಸದಸ್ಯ ಕಬೀರ್ ಜಟ್ಟಿಪಳ್ಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Next Story





