ಸುಳ್ಯ: ಅಜ್ಜಾವರ ಮೇನಾಲ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ

ಸುಳ್ಯ: ಅಜ್ಜಾವರ ಮೇನಾಲ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ ಅಜ್ಜಾವರ ಜುಮಾ ಮಸೀದಿ ವಠಾರದಲ್ಲಿ ಆರಂಭಗೊಂಡಿದೆ.
ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಶೈಖುನಾ ಅಹಮದ್ ಪೂಕೋಯ ತಂಙಳ್ ಉರೂಸ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ದೇವರ ಸ್ಮರಣೆಯನ್ನು ಬಿಟ್ಟು ಸಂಪತ್ತು ಮಾತ್ರ ಪಡೆಯುವ ಚಿಂತನೆ ಹೆಚ್ಚಿದರೆ ನಮ್ಮ ಜೀವನದಲ್ಲಿ ಯಶಸ್ವಿ ಕಾಣಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಅಜ್ಜಾವರ ಜುಮ್ಮಾ ಮಸೀದಿಯ ಖತೀಬರಾದ ಅಶ್ರಫ್ ಮಿಸ್ಬಾಹಿ ‘ಮಹಾತ್ಮರ ಜೀವನ ಮತ್ತು ಸಂದೇಶ’ ಕುರಿತು ಮುಖ್ಯ ಭಾಷಣ ಮಾಡಿದರು. ಅಜ್ಜಾವರ-ಮೇನಾಲ ಜುಮ್ಮಾ ಮಸೀದಿ ಅಧ್ಯಕ್ಷ ಹಾಜಿ ಅಬ್ದುಲ್ಲ ಕುಂಞಿ ಪಳ್ಳಿಕೆರೆ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಮಹಮ್ಮದ್ ಹಾಜಿ ಬಯಂಬು, ಉಪಾಧ್ಯಕ್ಷ ಅಬ್ಬಾಸ್ ಹಾಜಿ ಡೆಲ್ಮಾ ಮತ್ತಿತರರು ಮೊದಲಾದವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹಾಜಿ ಅಬ್ದುಲ್ ಖಾದರ್ ಜನಪ್ರಿಯ ಸ್ವಾಗತಿಸಿ, ವಂದಿಸಿದರು. ಕಾರ್ಯದರ್ಶಿ ಶಾಫಿ ಮುಕ್ರಿ, ಗ್ರಾ.ಪಂ. ಸದಸ್ಯ ಹನೀಫ್ ಅಜ್ಜಾವರ ಹಾಗೂ ಉರೂಸ್ ಸಮಿತಿ ಸದಸ್ಯರು ಸಹಕರಿಸಿದರು.





