ಮಂಗಳೂರು : ವಿಕಾಸ ಪದವಿ ಪೂರ್ವ ಕಾಲೇಜಿಗೆ ಕೇಂದ್ರ ಸಚಿವ ಪ್ರತಾಪ್ ರೂಡಿ ಭೇಟಿ

ಮಂಗಳೂರು, ಎ.9: ನಗರದ ಮೇರಿಹಿಲ್‌ನಲ್ಲಿರುವ ವಿಕಾಸ ಪದವಿ ಪೂರ್ವ ಕಾಲೇಜಿಗೆ ಕೇಂದ್ರ ಕೌಶಲ್ಯ ಅಭಿವೃದ್ಧಿ ಸಚಿವ ರಾಜೀವ್ ಪ್ರತಾಪ್ ರೂಡಿ ಶನಿವಾರ ಭೇಟಿ ನೀಡಿದರು.
ಈ ಸಂದರ್ಭ ಅವರು ಸ್ಮರ್ಧಾತ್ಮಕ ಪರೀಕ್ಷೆಯ ‘60/60 ಸೂತ್ರ’ ಪುಸ್ತಕವನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಹಾಗೂ ಜೀವಶಾಸ್ತ್ರ ವಿಷಯಗಳನ್ನು ಒಳಗೊಂಡಿರುವ ಈ ‘60/60 ಸೂತ್ರ’ ಪುಸ್ತಕವನ್ನು ಗ್ರಾಮೀಣ ಪ್ರದೇಶದ 100 ಬಡ ವಿದ್ಯಾರ್ಥಿಗಳಿಗೆ ವಿತರಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು.
ಮಾಜಿ ಸಚಿವ ನಾಗರಾಜ ಶೆಟ್ಟಿ, ಸಂಸ್ಥೆಯ ಟ್ರಸ್ಟಿಗಳಾದ ಜೆ.ಕೊರಗಪ್ಪ, ಸೂರಜ್ ಕಲ್ಯ, ಸಲಹೆಗಾರ ಡಾ.ಅನಂತಪ್ರಭು ಜಿ., ಉಪಪ್ರಾಂಶುಪಾಲೆ ಮೋಹನಾ ಉಪಸ್ಥಿತರಿದ್ದರು.
Next Story





