ಉಪ್ಪಿನಂಗಡಿ : ನಾಪತ್ತೆಯಾದ ಯುವತಿ ಮದುವೆಯಾಗಿ ಪತ್ತೆ
ಉಪ್ಪಿನಂಗಡಿ : ಕೆಲ ದಿನಗಳ ಹಿಂದೆ ನಾಪತ್ತೆಯಾಗಿದ್ದ ಉಪ್ಪಿನಂಗಡಿ ಗ್ರಾಮದ ಪಂಜಳ ಮನೆ ನಿವಾಸಿ ಚಂದ್ರಿಕಾ (22) ಎಂಬಾಕೆಯನ್ನು ಉಪ್ಪಿನಂಗಡಿ ಪೊಲೀಸರು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಪತ್ತೆ ಹಚ್ಚಿ ಹೆತ್ತವರಿಗೊಪ್ಪಿಸಿದ್ದಾರೆ.
ನಾಪತ್ತೆಯಾದ ಚಂದ್ರಿಕಾ ಮದ್ದೂರಿನ ಚಿಕ್ಕಪುಟ್ಟ ಎಂಬಾತನನ್ನು ವಿವಾಹವಾಗಿ ಆತನ ಮನೆಯಲ್ಲೇ ವಾಸವಾಗಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಯುವತಿಯ ಗಂಡನೊಂದಿಗೆ ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದು, ಸ್ವಯಂ ಇಚ್ಚೆಯಲ್ಲಿ ತಾನು ಮನೆ ತೊರೆದು, ಪ್ರಿಯಕರನೊಂದಿಗೆ ವಿವಾಹವಾಗಿರುವುದನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ದಂಪತಿ ಸಹಿತ ಚಂದ್ರಿಕಾರವರ ಮನೆಯವರಿಗೆ ಒಪ್ಪಿಸಿದ್ದಾರೆ. ಐಪಿಎಸ್ ಅಧಿಕಾರಿ ಲಕ್ಷ್ಮಣ ನಿಂಬರ್ಗಿ ಮಾರ್ಗದರ್ಶನದೊಂದಿಗೆ ನಡೆದ ಪತ್ತೆಕಾರ್ಯದಲ್ಲಿ ಉಪ್ಪಿನಂಗಡಿ ಎಸ್‌ಐ ತಿಮ್ಮಪ್ಪ ನಾಯ್ಕಿ, ಸಿಬ್ಬಂದಿಗಳಾದ ಚೋಮ ಪಿ, ಧನಂಜಯ, ಮನೋಹರ್, ಶ್ರೀಧರ್ ಸಿ ಎಸ್, ಭಾಗವಹಿಸಿದ್ದರು.
Next Story





