ಗ್ರೀಸ್ ಕರಾವಳಿಯಲ್ಲಿ ದೋಣಿ ಮುಳುಗಿ 5 ವಲಸಿಗರ ಸಾವು

ಅಥೆನ್ಸ್, ಎ. 9: ಸಣ್ಣ ಪ್ಲಾಸ್ಟಿಕ್ ದೋಣಿಯೊಂದು ಪೂರ್ವ ಏಜಿಯನ್ ಸಮುದ್ರದಲ್ಲಿ ಮಗುಚಿ ಕನಿಷ್ಠ ಐವರು ವಲಸಿಗರು ಮುಳುಗಿ ಮೃತಪಟ್ಟಿದ್ದಾರೆ ಎಂದು ಗ್ರೀಸ್‌ನ ತಟರಕ್ಷಣಾ ಪಡೆ ಹೇಳಿದೆ.
ನಾಲ್ವರು ಮಹಿಳೆಯರು ಮತ್ತು ಒಂದು ಮಗುವಿನ ಮೃತದೇಹಗಳು ಗ್ರೀಕ್ ದ್ವೀಪ ಸಮೋಸ್‌ನ ಈಶಾನ್ಯದಲ್ಲಿ ಟರ್ಕಿ ಕರಾವಳಿಗೆ ಸಮೀಪದಲ್ಲಿ ಶನಿವಾರ ಮುಂಜಾನೆ ಪತ್ತೆಯಾಗಿವೆ.
ದುರಂತದಲ್ಲಿ ಐವರು ಬದುಕುಳಿದಿದ್ದಾರೆ ಎಂದು ತಟರಕ್ಷಣಾ ಪಡೆಯ ವಕ್ತಾರೆಯೊಬ್ಬರು ತಿಳಿಸಿದರು. 3.5 ಮೀಟರ್ ಉದ್ದದ ದೋಣಿಯಲ್ಲಿ 11 ಮಂದಿ ಪ್ರಯಾಣಿಸುತ್ತಿದ್ದರು ಎಂದು ಬದುಕುಳಿದವರು ಹೇಳಿದ್ದಾರೆ.
Next Story





