ಯಮನ್: ಅಲ್ ಖಾಯಿದ ದಾಳಿಗೆ 20 ಸೈನಿಕರು ಬಲಿ

ಮಾರಿಬ್ (ಯಮನ್), ಎ. 9: ಯಮನ್‌ನ ದಕ್ಷಿಣದ ಅಹ್ವರ್ ಪಟ್ಟಣದಲ್ಲಿ ಸೈನಿಕರು ಪ್ರಯಾಣಿಸುತ್ತಿದ್ದ ವಾಹನಗಳ ಮೇಲೆ ಅಲ್-ಖಾಯಿದ ಉಗ್ರರು ಶನಿವಾರ ನಡೆಸಿದ ದಾಳಿಯಲ್ಲಿ ಕನಿಷ್ಠ 20 ಸೈನಿಕರು ಹತರಾಗಿದ್ದಾರೆ ಎಂದು ಸೇನಾ ಮೂಲವೊಂದು ತಿಳಿಸಿದೆ.
ಶನಿವಾರ ಮುಂಜಾನೆ ವಾಹನಗಳಿಂದ ಹೊರ ಬರುವಂತೆ ಉಗ್ರರು ಸೈನಿಕರಿಗೆ ಆದೇಶ ನೀಡಿದರು ಹಾಗೂ ಅವರ ಮೇಲೆ ಗುಂಡಿನ ಮಳೆಗರೆದು ಕೊಂದರು ಎಂದು ಅದು ಹೇಳಿದೆ.
Next Story





