Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕಾಫಿ ಬೆಳೆಗಾರರು, ಕ್ಯೂರರ್ಸ್‌ಗಳ...

ಕಾಫಿ ಬೆಳೆಗಾರರು, ಕ್ಯೂರರ್ಸ್‌ಗಳ ಗಮನಕ್ಕೆ

ವಾರ್ತಾಭಾರತಿವಾರ್ತಾಭಾರತಿ9 April 2016 10:16 PM IST
share

ಚಿಕ್ಕಮಗಳೂರು, ಎ.9: ಪ್ರಸ್ತುತ ವರ್ಷದಲ್ಲಿ ಕಾಫಿ ಬೆಳೆಯುವ ಆನೇಕ ಪ್ರದೇಶಗಳಿಂದ ಕಾಫಿ ಕಾಯಿಕೊರಕದ ಹೆಚ್ಚಿನ ಹಾವಳಿಯಾಗಿದ್ದು, ಕಾಫಿ ಕ್ಯೂರಿಂಗ್ ವರ್ಕ್ಸ್‌ಗಳಿಂದಲೂ ಸಹ ಈ ಕಾಫಿ ಕಾಯಿಕೊರಕವು ಶೇಖರಿಸಿರುವ ಕಾಫಿಯಲ್ಲಿ ವೃದ್ಧಿಯಾಗುತ್ತಿದೆ.

  ಸಂಶೋಧನಾ ವರದಿಯ ಪ್ರಕಾರ ಪಾರ್ಚ್‌ಮೆಂಟ್, ಚೆರಿ ಕಾಫಿಯನ್ನು ನಿಗಧಿತ ತೇವಾಂಶಕ್ಕೆ ಒಣಗಿಸಿದಾಗ ಅಂದರೆ ಪಾರ್ಚ್‌ಮೆಂಟನ್ನು ಶೇ 10.5 ಮತ್ತು ಚೆರಿಯನ್ನು ಶೇ 11 ತೇವಾಂಶಕ್ಕೆ ಒಣಗಿಸಿದಾಗ ಅದರಲ್ಲಿರುವ ಕಾಫಿ ಕಾಯಿಕೊರಕದ ಎಲ್ಲ್ಲ ಹಂತಗಳು ನಾಶಗೊಳ್ಳುತ್ತವೆ. ಆದರೆ ಸಾಮಾನ್ಯವಾಗಿ ಹೆಚ್ಚಿನ ಬೆಳೆಗಾರರು ಕಾಫಿಯನ್ನು ಬ್ಯಾಗ್ ಮಾಡುವ ಸಂದಭರ್ದಲ್ಲಿ ತೇವಾಂಶವನ್ನು ನೋಡುವುದಿಲ್ಲ. ಕಾಫಿಯನ್ನು ಹೆಚ್ಚಿನ ತೇವಾಂಶವಿರುವಂತೆ ಒಣಗಿಸಿದಾಗ ಈ ಕಾಫಿ ಕಾಯಿಕೊರಕವು ದ್ವಿಗುಣಗೊಂಡು ಹೆಚ್ಚಾಗಿ ಶೇಖರಣಾ ಹಂತದಲ್ಲಿ ತೀವ್ರತರನಾದ ನಷ್ಟವನ್ನುಂಟು ಮಾಡುತ್ತದೆ.

ಈ ಶೇಖರಣಾ ಹಂತದಲ್ಲಿ ಕಾಫಿ ಕಾಯಿಕೊರಕದ ಸಮಸ್ಯೆ ಬಗ್ಗೆ ಎಚ್ಚರ ವಹಿಸಲು ಹಾಗೂ ಮುಂದಿನ ಪಸಲಿಗೆ ಇದರ ಹರಡುವಿಕೆಯನ್ನು ತಪ್ಪಿಸಲು ಈ ಕೆಳಕಂಡ ಕ್ರಮಗಳನ್ನು ಸೂಚಿಸಲಾಗಿದೆ.

ಕಾಫಿ ತೋಟಗಳಲ್ಲಿ ನಿರ್ವಹಣೆ:

  ಗಿಡಗಳಲ್ಲಿ ಉಳಿದಿರುವ ಅಕಾಲಿಕ ಹಣ್ಣುಗಳನ್ನು ಸಂಗ್ರಹಿಸಿ ಮಣ್ಣಿನಲ್ಲಿ ಹೂತು ಹಾಕಬೇಕು ಇಲ್ಲವೇ ಸುಟ್ಟು ಹಾಕಬೇಕು. ಉಳಿದಿರುವ ಒಣಗಿದ ಕಾಯಿಗಳಲ್ಲಿರುವ ಕಾಫಿ ಕಾಯಿಕೊರಕದ ಪ್ರೌಢ ಕೀಟಗಳನ್ನು ಹಿಡಿಯಲು ಎಪ್ರಿಲ್,ಮೇ ತಿಂಗಳ ಮಧ್ಯಭಾಗದವರೆಗೆ ಎಕರೆಗೆ 10 ರಂತೆ ಬ್ರೋಕೋ ಟ್ರ್ಯಾಪ್‌ಗಳನ್ನು ಅಳವಡಿಸಬೇಕು. ಈ ಬ್ರೋಕೋ ಟ್ರ್ಯಾಪ್‌ಗಳನ್ನು ಅಳವಡಿಸುವುದು ಹನಕಲು ಮತ್ತು ಉಳಿಕೆ ಹಣ್ಣುಗಳನ್ನು ಸಂಗ್ರಹಿಸುವುದಕ್ಕೆ ಪರ್ಯಾಯ ಕ್ರಮವಲ್ಲ. ಬೆಳೆಗಾರರು ಅಗತ್ಯವಿರುವ ಬ್ರೋಕೋ ಟ್ರ್ಯಾಪ್‌ಗಳು ಮತ್ತು ಲ್ಯೂರ್‌ಗಾಗಿ ಹತ್ತಿರದ ಸಂಶೋಧನಾ ಕೇಂದ್ರದ ಅಥವಾ ವಿಸ್ತರಣಾ ವಿಭಾಗದ ಕಚೇರಿಗಳಲ್ಲಿ ಬೇಡಿಕೆ ಸಲ್ಲಿಸಬಹುದಾಗಿದೆ.

ತೋಟಗಳು ಮತ್ತು ಕಾಫಿ ಕ್ಯೂರಿಂಗ್ ವರ್ಕ್ಸ್‌ಗಳ ಶೇಖರಣಾ ಹಂತದಲ್ಲಿ ನಿರ್ವಹಣೆ:

ತೋಟಗಳ ಮತ್ತು ಕಾಫಿ ಕ್ಯೂರಿಂಗ್ ವರ್ಕ್ಸ್‌ಗಳ ಗೋದಾಮುಗಳಲ್ಲಿ ಶೇಖರಣೆ ಬ್ಯಾಗ್ ಮಾಡಿರುವ ಚೀಲಗಳ ಪ್ರತೀ ಕ್ಯೂಬಿಕ್ ಮೀಟರ್ ಗೆ ಮತ್ತು 1 ರಿಂದ 1.5 ರಂತೆ ಅಲ್ಯೂಮಿನಿಯಮ್ ಪಾಸ್ಫೆಡ್ ಮಾತ್ರೆಗಳನ್ನಿರಿಸಿ ಪ್ಯೂಮಿಗೇಟ್ ಮಾಡಬೇಕು. ಅಲ್ಯೂಮಿನಿಯಮ್ ಪಾಸ್ಫೆಡ್ ಮಾತ್ರೆಗಳ (ಸೆಲ್ಪಾಸ್)ರೂಪದಲ್ಲಿ ದೊರೆಯುತ್ತದೆ. ಈ ಅಲ್ಯೂಮಿನಿಯಮ್ ಪಾಸ್ಫೆಡ್ ಮಾತ್ರೆಗಳನ್ನು ಕಾಫಿ ಚೀಲಗಳ ಮಧ್ಯೆ ಇರಿಸಿ ಚೀಲಗಳನ್ನು ಪಾಲಿಥೀನ್ ಹಾಳೆಗಳಿಂದ ಗಾಳಿ ಹೋಗದ ಹಾಗೆ ಸುತ್ತಬೇಕು. ಯಾವಾಗಲೂ ಈ ಪ್ಯೂಮಿಗೇಶನ್ ಕಾರ್ಯಚರಣೆ ನಿರ್ವಹಿಸುವಾಗ ರಕ್ಷಣಾತ್ಮಕ ಸಾಧನಗಳಾದ ಮುಖವಾಡ, ಎಪ್ರಾನ್, ಕೈ ಚೀಲಗಳನ್ನು ಧರಿಸಬೇಕು. ಈ ಪ್ಯೂಮಿಗೇಶನ್ ಕಾರ್ಯಕ್ಕೆ 5 ರಿಂದ 7 ದಿನಗಳು ಬೇಕಾಗುತ್ತದೆ.

http//plantquarantineindia.nic.in ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಕಾಫಿ ಮಂಡಳಿ, ಚಿಕ್ಕಮಗಳೂರು ಇವರನ್ನು ಅಥವಾ ವೆಬ್‌ಸೈಟ್‌ನಿಂದ ವೀಕ್ಷಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X