ಪಾಕಿಸ್ತಾನ-ಚೀನಾ ಜಂಟಿ ಸಮರಾಭ್ಯಾಸ ಆರಂಭ
ಬೀಜಿಂಗ್, ಎ. 9: ಚೀನಾ ಮತ್ತು ಪಾಕಿಸ್ತಾನಗಳು ಇಂದು ಪಾಕಿಸ್ತಾನದಲ್ಲಿ ಜಂಟಿ ವಾಯು ಪಡೆ ಸಮರಾಭ್ಯಾಸ ಆರಂಭಿಸಿದವು ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದರು.
ಇದು ಈ ಎರಡು ದೇಶಗಳು ಜಂಟಿಯಾಗಿ ನಡೆಸುತ್ತಿರುವ ಐದನೆ ಸಮರಾಭ್ಯಾಸವಾಗಿದೆ.
‘‘ಶಹೀನ್ (ಹದ್ದು)-5’’ ಕಾರ್ಯಕ್ರಮ ಎಪ್ರಿಲ್ 9ರಿಂದ 30ರವರೆಗೆ ನಡೆಯಲಿದೆ’’ ಎಂದು ವಾಯುಪಡೆ ವಕ್ತಾರ ಶೆನ್ ಜಿಂಕೆ ಹೇಳಿದರು.
ಕಳೆದ ವರ್ಷ ಚೀನಾದಲ್ಲಿ ನಡೆದ ‘‘ಶಹೀನ್-4’’ನಲ್ಲಿ ಯುದ್ಧ ವಿಮಾನಗಳು, ಬಾಂಬರ್ ವಿಮಾನಗಳು ಹಾಗೂ ಆಕಾಶದಲ್ಲಿ ಸಂಚರಿಸುವ ಮುನ್ನೆಚ್ಚರಿಕಾ ಹಾಗೂ ನಿಯಂತ್ರಣ ವಿಮಾನಗಳನ್ನು ಬಳಸಲಾಗಿತ್ತು. ಈ ಎರಡು ದೇಶಗಳು ಜಂಟಿಯಾಗಿ ಪಿಎಸಿ ಜೆಎಫ್-17 ತಂಡರ್ ಅಥವಾ ಸಿಎಸಿ ಎಫ್‌ಸಿ-1 ಕ್ಸಿಯಲಾಂಗ್ ಯುದ್ಧ ವಿಮಾನಗಳನ್ನೂ ಉತ್ಪಾದಿಸುತ್ತಿವೆ.
ಜಂಟಿ ಸಮರಾಭ್ಯಾಸದಿಂದಾಗಿ ಉಭಯ ಸೇನೆಗಳ ನಡುವಿನ ಬಾಂಧವ್ಯ ವೃದ್ಧಿಯಾಗಿದೆ ಎಂದು ಶೆನ್ ಹೇಳಿದರು.
Next Story





