Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಕಥನ ಪರಂಪರೆಯ ಹೊಸ ಕುಯಿಲು

ಕಥನ ಪರಂಪರೆಯ ಹೊಸ ಕುಯಿಲು

ವಾರ್ತಾಭಾರತಿವಾರ್ತಾಭಾರತಿ9 April 2016 11:10 PM IST
share
ಕಥನ ಪರಂಪರೆಯ ಹೊಸ ಕುಯಿಲು

ನಮ್ಮ ಕಾಲದ ಹೃದಯ ಮಿಡಿವ ಕಥೆಗಾರ ಕೆ. ಸತ್ಯ ನಾರಾಯಣ ಅವರಿಗೆ ಬಿ.ಎಚ್. ಶ್ರೀಧರ ಪ್ರಶಸ್ತಿ ಬಂದಿರುವ ಸುದ್ದಿಯನ್ನು ಓದಿದಾಗ, ನನಗೆ ಶ್ರೀಧರ ಪುತ್ರ ರಾಜಶೇಖರ ಹೆಬ್ಬಾರರು ಸುಮಾರು 21 ವರ್ಷಗಳಷ್ಟು ಹಿಂದೆ ಕಳುಹಿಸಿದ "ಜೀವಯಾನ" ನೆನಪಿಗೆ ಬಂತು. "ಜೀವಯಾನ" ಬಿ.ಎಚ್. ಶ್ರೀಧರ ಅವರ ಆತ್ಮಕಥೆ. ಅದೊಂದು 43 ಪುಟಗಳ ಕಿರುಹೊತ್ತಿಗೆ. ಕಿರಿದಾದರೂ ಗರಿಮೆಯಲ್ಲಿ ಹಿರಿದು. ಪ್ರತಿ ವರ್ಷ ಎಪ್ರಿಲ್ 24ರಂದು ಶ್ರೀಧರ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಬಹುಮುಖ ಪ್ರತಿಭೆಯ ಬಿ.ಎಚ್. ಶ್ರೀಧರರ ಸ್ಮರಣೆಗೆ ಇದೊಂದು ನಿಮಿತ್ತ.

ಬವಳಾಡಿ ಹೆಬ್ಬಾರ ಶ್ರೀಧರ ಜನಿಸಿದ್ದು 1918ನೆಯ ಇಸವಿಯ ಎಪ್ರಿಲ್ 24ರಂದು.ಕೊಲ್ಲೂರು ಮೂಕಾಂಬಿಕಾ ದೇವರಿಗೆ ಸೇರಿದ ಹೊಸಕೋಟೆ ಗ್ರಾಮದಲ್ಲಿ. ಬಾಲ್ಯ ಕಳೆದದ್ದು ತೆಂಗು- ಕಂಗುಗಳು ತೂಗಿಬಾಗುವ, ಬಾಳೆಮಾವುಹಲಸುಗಳು ಪರಿಮಳ ಬೀರುವ ಸಮೃದ್ಧ ನಿಸರ್ಗದ ಪರಿಸರದಲ್ಲಿ. ಬಿಜೂರಿನ ಕನ್ನಡ ಶಾಲೆಯಲ್ಲಿ ನಾಲ್ಕನೆಯ ಇಯತ್ತೆಯವರೆಗೆ ಓದುಬರಹ ಕಲಿತದ್ದು. ಮುಂದೆ ಸೊರಬ-ಸಾಗರಗಳ ಮಿಡ್ಲ್-ಹೈಸ್ಕೊಲುಗಳಲ್ಲಿ ಶಿಕ್ಷಣ. ಅಲ್ಲಿಂದ ಕಾಲೇಜು ವ್ಯಾಸಂಗಕ್ಕಾಗಿ ಮೈಸೂರಿಗೆ ಪಯಣ. ಮಹಾರಾಜರ ಕಾಲೇಜಿನಲ್ಲಿ ಟಿ.ಎಸ್.ವೆಂಕಣ್ಣಯ್ಯ, ಎ.ಆರ್.ಕೃಷ್ಣ ಶಾಸ್ತ್ರಿ, ಸಿ.ಆರ್.ನರಸಿಂಹ ಶಾಸ್ತ್ರಿ, ಎ.ಎನ್.ನರಸಿಂಹಯ್ಯ, ಜೆ.ಸಿ.ರ್ಯಾಲೋ ಮೊದಲಾದ ಘನತೆವೆತ್ತ ಅಧ್ಯಾಪಕರುಗಳ ಬೋಧನೆಯನ್ನು ಸವಿದು ಜೀರ್ಣಿಸಿಕೊಂಡು, ಪದಕ ಬಹು ಮಾನಗಳೊಡನೆ ಸಂಸ್ಕೃತದಲ್ಲಿ ಆನರ್ಸ್ ಪದವಿ ಪಡೆದರು. ಒಂದು ವಾರದ ಮಟ್ಟಿಗೆ ಬೆಂಗಳೂರಿನ ಪ್ರೆಸ್ಸೊಂದರಲ್ಲಿ ದುಡಿಮೆ ಮಾಡಿ, ನಂತರ ಸ್ನಾತಕೋತ್ತರ ಶಿಕ್ಷಣ- "ನಾನು ಎಂ.ಎ. ಪಾಸಾದದ್ದು(1942) ಸಿ.ಆರ್.ನರಸಿಂಹ ಶಾಸ್ತ್ರಿಗಳು, ಎ.ಎನ್.ನರಸಿಂಹಯ್ಯನವರು, ಎ.ಆರ್.ಕೃಷ್ಣ ಶಾಸ್ತ್ರಿಗಳೂ 1941ರಲ್ಲಿ ದುಡ್ಡುಕೊಟ್ಟು ಕಾಲೇಜಿಗೆ ಸೇರಿಸಿದ್ದರಿಂದ". ಎಂ.ಎ. ಪದವಿ ಉದ್ಯೊಗಕ್ಕೆ ಸುಲಭ ರಹದಾರಿಯಾಗಲಿಲ್ಲ. ಎಲ್ಲಿ ಹೋದರೂ "ನಿಮ್ಮ ಜನಿವಾರ ಅಡ್ಡ ಬರುತ್ತದೆ" ಎನ್ನು ವವರೇ. ಸಣ್ಣ ಗುಮಾಸ್ತೆಗಿರಿಗಾಗಿ ಪುಣೆಯವರೆಗೂ ಹಾದಿ ಸವೆಸಬೇಕಾಯಿತು. 1943ರಲ್ಲಿ ಭಟ್ಕಳದ ಪ್ರೌಢಶಾಲೆ ಯೊಂದ ರಲ್ಲಿ ಶಿಕ್ಷಕ ವೃತ್ತಿ. ಶ್ರೀಧರರ ಪ್ರತಿಭೆಯನ್ನು ಪತ್ರಿಕಾ ವ್ಯವಸಾಯ ವೂ ಕೈಬೀಸಿ ಕರೆಯಿತು. 1947ರಲ್ಲಿ ಹುಬ್ಬಳ್ಳಿಯ "ಕರ್ಮವೀರ" ವಾರ ಪತ್ರಿಕೆಯಲ್ಲಿ ಉಪ ಸಂಪಾದಕರಾದರು. ಪಾ.ವೆಂ.ಆಚಾರ್ಯರೊಂದಿಗೆ ವಾರಕ್ಕೆ "ಹನ್ನೆರಡು ಪುಟಗಳನ್ನು ತುಂಬುವ ಜವಾಬ್ದಾರಿ". ನಾಲ್ಕು ವರ್ಷಗಳ ಪತ್ರಿಕಾ ಅನುಭವದ ನಂತರ ಅದಕ್ಕೆ ವಿದಾಯ ಹೇಳಿ 1951ರಲ್ಲಿ ಕುಮುಟಾದ ಹೊಸ ಕಾಲೇಜೊಂದರಲ್ಲಿ ಸಂಸ್ಕೃತದ ಅಧ್ಯಾಪಕರಾದರು. ಸಿರಸಿ, ಸಿದ್ದಾಪುರ ಕಾಲೇಜುಗಳಲ್ಲೂ ಸಂಸ್ಕೃತ ಬೋಧಿಸಿ, ಪ್ರಾಂಶುಪಾಲರಾಗಿ ನಿವೃತ್ತಿಹೊಂದಿದರು.

ಶ್ರೀಧರ ಅವರದು ಕಲೆ-ಸಾಹಿತ್ಯ, ಪಾಂಡಿತ್ಯ- ಸೃಜನ ಶೀಲತೆಗಳು ಸಂಗಮಿಸಿದ್ದ ಕುಟುಂಬ. ತಂದೆಯ ತಾಯಿ, ಮಹಾಲಕ್ಷ್ಮೀ ಕವಯಿತ್ರಿ. ಈಕೆಯ ಐವರು ಮಕ್ಕಳೂ "ಕವಿತಾ ಶಕ್ತಿ ಸಂಪನ್ನರು". ಇವರ ದೊಡ್ಡಪ್ಪ ಬವಳಾಡಿ ಹಿರಿಯಣ್ಣ ಹೆಬ್ಬಾರರು ಸಂಸ್ಕೃತ, ಯಕ್ಷಗಾನಗಳಲ್ಲಿ ದೊಡ್ಡ ವಿದ್ವಾಂಸರೆನಿಸಿ ಹೆಸರುಗಳಿಸಿದ್ದರು. ಹೀಗೆ ಪಾಂಡಿತ್ಯ ಪ್ರತಿಭೆಗಳನ್ನು ವಂಶಪಾರಂಪರಿಕ ಬಳುವಳಿಯಾಗಿ ಪಡೆದೆ ಶ್ರೀಧರ ಎಳೆವೆಯಲ್ಲೇ ಸಾಹಿತ್ಯ ಸೃಷ್ಟಿಯಲ್ಲಿ ತೊಡಗಿದರು. "ಸುಬೋಧ" ಮಾಸ ಪತ್ರಿಕೆಯಲ್ಲಿ ಶ್ರೀಧರರ ಕೃತಿಯೊಂದು ಲೋಕದ ಬೆಳಕು ಕಂಡಾಗ ಅವರಿಗಿನ್ನೂ ಪೌಗಂಡ ವಯಸ್ಸು. ಶ್ರೀಧರರ ಸೃಜನಶೀಲ ಪ್ರತಿಭೆ ಬಹುಬಗೆಯದು. ಕಾವ್ಯ, ವಿಮರ್ಶೆ, ಶಿಶು ಸಾಹಿತ್ಯ, ಸಂಶೋಧನೆ, ಅನುವಾದ ಹಿಗೆ ಅನೇಕ ಪ್ರಕಾರಗಳಲ್ಲಿ ಅವರು ಸಾಹಿತ್ಯ ರಚನೆ ಮಾಡಿದ್ದಾರೆ. ಅವರ ಮೊದಲ ಕೃತಿ "ಮೇಘನಾದ" ಕವನ ಸಂಕಲನ. ದ.ರಾ.ಬೇಂದ್ರೆ ಅವರ ಕಾವ್ಯ ಗುರು, "ನಮೋ ಎಂಬೆ ಕವಿ ಗುರುವೆ" ಎನ್ನುವುದು ಅಂಥ ಒಂದು ಕವಿತೆ. ಬೇಂದ್ರೆಯವರ ಕಟು ಅನುಭವಗಳನ್ನು ಅರಿತಿದ್ದ ಶ್ರೀಧರ ಅವರದೇ ಆದ ಒಂದು ಪ್ರಸಿದ್ಧ ನುಡಿ: "ಬೆಂದರೆ ಬೇಂದ್ರೆಯಾದಾನು"."ಅಮೃತ ಬಿಂದು", "ಮಂಜುಗೀತ", "ರಸಯಜ್ಞ" ಇವೇ ಮೊದಲಾಗಿ ಹಲವಾರು ಕವನ ಸಂಗ್ರಹಗಳನ್ನು ಪ್ರಕಟಿಸಿದ್ದಾರೆ. ಶ್ರೀಧರ ಅವರ "ಕಾವ್ಯಸೂತ್ರ", "ಕನ್ನಡ ಕಾವ್ಯ ಶಾಸ್ತ್ರಕ್ಕೆ ಅತ್ಯಂತ ಗಮನಾರ್ಹವಾದ ಕೊಡುಗೆ" ಎನ್ನುವ ಮಾನ್ಯತೆಗೆ ಪಾತ್ರವಾಗಿರುವ ಒಂದು ಮಹತ್ವದ ಗ್ರಂಥ. ಮೈಸೂರು ವಿ.ವಿ.ಸುವರ್ಣ ಮಹೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯೂ ಸೇರಿದಂತೆ ಹಲವಾರು ಪುರಸ್ಕಾರ ಗಳಿಗೆ ಭಾಜನವಾಗಿರುವ ಈ ಗ್ರಂಥ ಬೇಂದ್ರೆಯವರು ಹೇಳಿರುವಂತೆ, "ಜೀವನ, ಕಾವ್ಯ...ವಿಮರ್ಶೆ-ಸಂಸ್ಕೃತಿ-ಅಭಿರುಚಿ ಇವುಗಳ ಪಾಂಚಜನ್ಯಧ್ವನಿಯು ಈ ಪ್ರಬಂಧವಾಗಿ ಮಹಾ ಸಾಮರ್ಥ್ಯದಿಂದ" ಪ್ರಕಟವಾಗಿದೆ. "ಜ್ಞಾನ ಸೂತ್ರ", "ರಾಷ್ಟ್ರ ಸೋತ್ರ" ಇದೇ ಮಾದರಿಯ ಗ್ರಂಥಗಳು. "ತಿಳಿದುಕೋಳ್ಳುವ ಶಕ್ತಿ ಯಾವ ಕಾಲಕ್ಕೂ ಬದಲಾಗುವುದಿಲ್ಲ. ಯುಕ್ತಿ ಮಾತ್ರ ಕಾಲಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ. ಆದರೆ ಯಾವಾಗಲೂ ಬೇರೆಯವರನ್ನು ತಿಳಿದುಕೊಳ್ಳುವುದಕ್ಕಿಂತ ನಮ್ಮನ್ನು ನಾವು ತಿಳಿದುಕೊಳ್ಳಲು ಯತ್ನಿಸಬೇಕು. ಪ್ರಸಿದ್ಧಿ ಅನಿತ್ಯ; ಕೀರ್ತಿ ನಿತ್ಯ". ಶಿರಸಿಯಲ್ಲಿ ತಮ್ಮ ಎಪ್ಪತ್ತನೆ ಹುಟ್ಟು ಹಬ್ಬದ ಸನ್ಮಾನ ಸಮಾರಂಭದಲ್ಲಿ ಶ್ರೀಧರ ಅವರು ಅಡಿರುವ ಈ ಮಾತುಗಳು ಇಂದಿಗೂ ಆದರ್ಶಪ್ರಾಯ.

ಕೆ. ಸತ್ಯನಾರಾಯಣ

ಈ ಸಾಲಿನ ಬಿ.ಎಚ್. ಶ್ರೀಧರ ಪ್ರಶಸ್ತಿಗೆ ಪಾತ್ರರಾಗಿರುವ ಕೆ. ಸತ್ಯನಾರಾಯಣ, "ಪಾತ್ರ" ಅನ್ನುವ ಪದದ ನಿಜವಾದ ಅರ್ಥದಲ್ಲಿ ಈ ಪ್ರಶಸ್ತಿಗೆ "ಪಾತ್ರ"ರು. ಸತ್ಯನಾರಾಯಣ ಬಹುಪ್ರತಿಭೆಯ ಸೃಜನಶೀಲ ಲೇಖಕರು. ಕಥೆ, ಕಾದಂಬರಿ, ಲಲಿತ ಪ್ರಬಂಧ, ಪ್ರವಾಸ- ಸಾಹಿತ್ಯ, ವಿಮರ್ಶೆ ಹೀಗೆ ಉಗಮಿಸಿವೆ ಅವರ ಬರವಣಿಗೆ ಜೀವನದಿ, ಹೊಳೆ, ತೊರೆ, ಕಿರುತೊರೆ ಇತ್ಯಾದಿ ಗಳಾಗಿ. ಇಲ್ಲೆಲ್ಲ ಓದುಗರ ಮುಳುಗೇಳುವಿಕೆಯ ಶಕ್ತಿಸಾಮರ್ಥ್ಯ ಗಳಿಗನುಗುಣವಾಗಿ ಫಲಪ್ರಾಪ್ತಿ. ಸತ್ಯನಾರಾಯಣ ಅವರ ದೃಷ್ಟಿದಿಗಂತಗಳ ಹಾಸುಬೀಸುಗಳು ವ್ಯಾಪಕವೂ ವೈವಿಧ್ಯಮ ಯವೂ ಆಗಿರುವುದು ದಿಟವಾದರೂ, ಅವರ ಸಾಧನೆಯ ಸ್ಪಷ್ಟ ಛಾಪು ಮೂಡಿರುವುದು ಸಣ್ಣ ಕಥೆಯಲ್ಲಿ.

 ಕೆ. ಸತ್ಯನಾರಾಯಣ ಅವರ ಇಲ್ಲಿಯವರೆಗಿನ ಪ್ರಕಟಿತ ಕೃತಿಗಳು ಮೂವತ್ತಕ್ಕೂ ಹೆಚ್ಚು. ಇದರಲ್ಲಿ, ಹನ್ನೆರಡು ಸಣ್ಣಕಥಾ ಸಂಕಲನಗಳು, ಮೇಲೊಂದು "ಈ ತನಕದ ಕಥೆಗಳು"; ಐದು ಕಾದಂಬರಿಗಳು ಮತ್ತು ನಾಲ್ಕು ವಿಮರ್ಶಾ ಕೃತಿಗಳು ಮೊದಲಾದವು ಸೇರಿವೆ. ನವ್ಯೋತ್ತರ ತಲೆಮಾರಿನವರು ಎನ್ನಬಹುದಾದ ರಾಘವೇಂದ್ರ ಪಾಟೀಲ, ಕುಂ.ವೀರಭದ್ರಪ್ಪ, ಮೊಗಳ್ಳಿ ಗಣೇಶ್, ಅಮರೀಶ ನುಗಡೋಣಿ, ಜಯಂತ ಕಾಯ್ಕಿಣಿ, ವಿವೇಕ ಶಾನುಬಾಗ ಮೊದಲಾದ ಲೇಖಕರ ಪೈಕಿ ಕೆ.ಸತ್ಯನಾರಾಯಣ ಸಣ್ಣ ಕತೆಗಾರರಾಗಿ ವಿಮರ್ಶಕರ ಹೆಚ್ಚಿನ ಗಮನ ಸೆಳೆದವರು. ಇವರೆಲ್ಲರೂ ಕತೆಗಾರರಾಗಿ, ಕಾದಂಬರಿಕಾರರಾಗಿ ಕನ್ನಡ ಕಥನ ಸಾಹಿತ್ಯದಲ್ಲಿ ಹೊಸಹೊಸ ಶೋಧನೆಗಳನ್ನು ಗೈಯ್ಯುತ್ತ ನವನವ ದಿಗಂತಗಳನ್ನು ಅರಸಿದವರು. ಸತ್ಯನಾರಾಯಣರ ಕಥೆಗಳು ಎಂದಾಗ ನಮಗೆ ಗತವೈಭವವನ್ನು ನೆನಪಿಸುವಂತೆ ಥಟ್ಟನೆ ನೆನಪಾಗುವುದು ಮಾಸ್ತಿಯವರ ಕಥನ ಪರಂಪರೆ. ನವ್ಯ, ಬಂಡಾಯಗಳ ನಂತರ ಕನ್ನಡದ ಸಣ್ಣ ಕಥೆಯನ್ನು ಮತ್ತೆ ಕಥನದ ಹಳಿಗೆ ತಂದವರಲ್ಲಿ ಅಗ್ರಗಣ್ಯರಾದ ಸತ್ಯನಾರಾಯಣ ಹೊಸ ಸಂವೇದನೆಯ ಮೊನಚು ಮತ್ತು ವಿನೂತನ ಸಾಮಾಜಿಕ ಆಯಾಮಗಳಿಂದ ಈ ಪರಂಪರೆಯನ್ನು ಪುನುರುಜ್ಜೀವಗೊಳಿಸಿದವರು. ಈ ಪುನುರುಜ್ಜೀವನ ಕಾರ್ಯದಲ್ಲಿ ಸತ್ಯನಾರಾಯಣ ಮಾಸ್ತಿಯವರ ತಂತ್ರವನ್ನು ಅನುಸರಿಸಿದ್ದಾರಾದರೂ, "ತಂತ್ರದಲ್ಲಿ ಹೋಲಿಕೆ ಇದ್ದರೂ ಮನೋಧರ್ಮದಲ್ಲಿ ಈ ಕತೆಗಾರನಿಗೂ ಮಾಸ್ತಿಯವರಿಗೂ ತುಂಬಾ ವ್ಯತ್ಯಾಸಗಳಿವೆ" ಎನ್ನುವ ಜಿ.ರಾಜಶೇಖರ್ ಅವರ ಗ್ರಹಿಕೆ-ಗಮನಿಕೆ ಸರಿಯಾದುದು. ಸತ್ಯನಾರಾಯಣ ಅವರ ಕಥೆಗಳ ಎರಡು ಮುಖ್ಯ ವಿನ್ಯಾಸ ಗಳೆಂದರೆ; ಕಥೆಯೊಳಗೆ ಒಂದು-ಇನ್ನೊಂದು- ಮತ್ತೊಂದು, ಹೀಗೆ ಹಲವಾರು ಕಥೆಗಳನ್ನೋ ಉಪಕಥೆಗಳನ್ನೋ ನಿರೂಪಿಸುತ್ತ, ಬದುಕಿನ ಹಲವಾರು ಮುಖಗಳನ್ನು ಬಿಂಬಿಸುತ್ತ, ವರ್ತಮಾನದ ಇತಿಹಾಸವನ್ನು ಹೆಣೆಯುವುದು, ಹೊಳೆಯಿ ಸುವುದು. ಈ ಪ್ರಕ್ರಿಯೆಯಲ್ಲಿ ಆಧುನಿಕ ವಿಚಾರ, ಆಲೋಚನೆ ಮತ್ತು ಸಂವೇದನೆಗಳನ್ನು ಕಥೆಯ ಮೂಲಭಿತ್ತಿಗೆ ಮುಖಾಮಖಿ ಯಾಗಿಸುವುದು ಇನ್ನೊಂದು ವಿನ್ಯಾಸ. ಖ್ಯಾತ ವಿಮರ್ಶಕರಾದ ಕೀರ್ತಿನಾಥ ಕುರ್ತಕೋಟಿಯವರು ಹೇಳಿರುವಂತೆ ಸಮ ಕಾಲೀನ ಇತಿಹಾಸದ ಎಳೆಗಳನ್ನು ನೇಯುವ ಹೆಣಿಗೆಯನ್ನು ಸತ್ಯ ನಾರಾಯಣ ಅವರ ಕಥೆಗಳಲ್ಲಿ ನಾವು ಕಾಣುತ್ತೇವೆ. ಮಧ್ಯಮವರ್ಗದ ಸಂಸಾರ ಅವರ ಕಥೆಗಳ ಮೂಲ ದ್ರವ್ಯ ಇದರ ಮೂಲಕ ಸಮಾಜವನ್ನು, ಅದರ ಚಿಂತನೆಗಳನ್ನು ಸೂಕ್ಷ್ಮಾತಿ ಸೂಕ್ಷ್ಮ ರೂಪಗಳಲ್ಲಿ ದರ್ಶನ ಮಾಡಿಸುವುದು ಅವರ ಕಥನ ತಂತ್ರ ಗಳಲ್ಲೊಂದು. ಅವರು ಈ ತಂತ್ರದಲ್ಲಿ ಬರ್ಟೋಲ್ಟ್ ಬ್ರೆಕ್ಟನಿಗೆ ಋಣಿಯಾಗಿದ್ದಾರೆ ಎನ್ನಿಸುತ್ತದೆ. ಕಥೆಯ ಕೇಂದ್ರದಲ್ಲಿ ಓದುಗರು ತನ್ಮಯವಾಗದಂತೆ ಅವರು ಬಹಳ ಎಚ್ಚರ ವಹಿಸುತ್ತಾರೆ. ಓದುಗರು ಕಥೆಯಲ್ಲಿ ಅಥವಾ ಅದರ ಯಾವುದೇ ಒಂದು ಪಾತ್ರ ದಲ್ಲಿ ತಾದಾತ್ಮ್ಯರಾಗುತ್ತಿದ್ದಾರೆ ಎನ್ನುವ ಮುಹೂರ್ತದಲ್ಲೇ ಸತ್ಯನಾರಾಯಣರ ಕಥೆ ಒಂದು ಉಪಕಥೆಗೋ ಅಥವಾ ವೃತ್ತಾಂತಕ್ಕೋ ಹೊರಳಿಬಿಡುತ್ತದೆ. ಆದರೆ ಇದರಿಂದ ಕಥೆಯ ಗುರುತ್ವಾಕರ್ಷಣೆಗೆ ಧಕ್ಕೆಯಾಗದಂತೆ ಕಲಾತ್ಮಕ ಎಚ್ಚರವನ್ನೂ ಅವರು ವಹಿಸುತ್ತಾರೆ.(ಈ ಗುರುತ್ವಾಕರ್ಷಣ ಕೇಂದ್ರ ಅನಂತಾನಂತವಾದ ಬದುಕೇ ಆಗಿರುತ್ತದೆ ಎಂಬುದನ್ನು ಮರೆಯಲಾಗದು-ಕಥೆ ಅದರದೊಂದು ಕಣರೂಪಿಯಾಗಿದ್ದರೂ) ಹೀಗೆ ಕಥೆಯೊಳಗೊಂದು ಉಪಕಥೆ, ಅನ್ಯ ವೃತ್ತಾಂತ, ಕಥಾ ನಾಯಕ-ನಾಯಕಿಯರಲ್ಲದೆ ಅನ್ಯ ಪಾತ್ರಗಳ ಪ್ರವೇಶ, ಇತ್ಯಾದಿಯಾಗಿ ತಾವು ಕಂಡ ಬದುಕಿನ ಸಮಸ್ತವನ್ನೂ ಅಂತರ್ಗತಗೊಳಿಸುವ ಧಾವಂತದಲಿ ಹೊಸ ದಾರಿಗಾಗಿ ಎಡತಾಕುತ್ತಾರೆ. ಈ ಅನ್ವೇಷಣೆಯಲ್ಲಿ ಸತ್ಯದ ಹಲವು ಹನ್ನೊಂದು ಮುಖಗಳನ್ನು ಹಲವು ಹನ್ನೊಂದು ಬಗೆಯ ಜನರ ದೃಷ್ಟಿಯಲ್ಲಿ ಅನಾವರಣಗೊಳಿಸುವ ಪ್ರಯತ್ನ ಮಾಡುತ್ತಾರೆ.ಇಂಥ ಸೃಜನಾತ್ಮಕ ಕಥೆಗಾರಿಕೆಯಲ್ಲಿ ಇವತ್ತಿನ ಮನಸ್ಸುಗಳ, ಹೃದಯಗಳ ಬಿಂಬ,ಪ್ರತಿಬಿಂಬಗಳನ್ನು ನಾವು ಕಾಣತ್ತೇವೆ. ಹೀಗೆ ಇವತ್ತಿನ ಚರಿತ್ರೆ ಕಥೆಯೊಂದರಲ್ಲಿ ಕೋದುಕೊಳ್ಳುತ್ತಾ ಹೋಗುತ್ತದೆ. ಇದನ್ನೇ ಕುರ್ತಕೋಟಿಯವರು, ಸಮಕಾಲೀನ ಇತಿಹಾಸವೊಂದರ ಎಳೆಗಳನ್ನು ನೇಯುವ ಕೆಲಸದಲ್ಲಿ ಸತ್ಯನಾರಾಯಣರು ನಿರತರಾಗಿದ್ದಾರೆ ಎಂದು ಹೇಳಿರುವುದು. ಈ ಸಮಕಾಲೀನ ಚಾರಿತ್ರಿಕ ಮಹತ್ವವನ್ನು ಎನ್.ವಿದ್ಯಾಶಂಕರ್ ಅವರು, "ಇತಿಹಾಸವನ್ನು ಅವರು ಎರಡು ರೀತಿಗಳಲ್ಲಿ ಗುರುತಿಸಿಕೊಳ್ಳು ತ್ತಾರೆ. ಒಂದು "ಚರಿತ್ರಾರ್ಹ"ವಾದುದು. ಮತ್ತೊಂದು ಉದ್ದೇಶ ಪೂರ್ವಕವಾಗಿ ದಾಖಲಿಸಲು "ಮರೆತ" ಚರಿತ್ರೆ..." ಎಂಬ ಮಾತುಗಳಲ್ಲಿ ಸ್ಪಷ್ಟವಾಗಿ ಗುರುತಿಸಿದ್ದಾರೆ. ಇಂಥ ನೇಯ್ಗೆಯಲ್ಲಿ, ವಾಚಕರು ಕಥೆಯಲ್ಲಿ ತಮ್ಮ ಬಿಂಬಗಳನ್ನು ಕಾಣುತ್ತಲೇ-ಒಂದು ದೂರದಿಂದ ಸತ್ಯ ಅಥವಾ ಕಟುವಾಸ್ತವಕ್ಕೆ ತಮ್ಮಷ್ಟಕ್ಕೆ ತಾವೇ ತೆರದುಕೊಳ್ಳುವಂತೆ ಮಾಡಿರುವುದು ಕತೆಗಾರನೊಳಗಿನ ವಿಮರ್ಶಕನ ಹಕೀಕತ್ತು. ಇಲ್ಲೇ ಬ್ರೆಕ್ಟನ ಏಲಿನೇಶನ್ ಸಿದ್ಧಾಂತ ಉಪಯೋಗಕ್ಕೆ ಬಂದಿರುವುದು. ತನ್ಮಯತೆ, ಮಮಕಾರಗಳ ಸಿಕ್ಕಿನಲ್ಲಿ ಬೀಳದೆ ಕಥೆಯ ಜಾಡಿನಲ್ಲಿ ಸಾಗುವ ಓದುಗ ಇಲ್ಲಿನ ಸರ್ವಾಂತರ್ಗತ (ಆಲ್ ಇನ್‌ಕ್ಲೂಸಿವ್) ಪ್ರಪಂಚದಲ್ಲಿ ತನ್ನನೂ ಕಂಡುಕೊಳ್ಳುವ ಅಥವಾ ಗುರುತಿಸಿಕೊಳ್ಳುವ ಆತಂಕದಲ್ಲಿ ಒದ್ದಾಡುವಂತೆ ಮಾಡುವುದು ಸತ್ಯನಾರಾಯಣರ ಕಥನ ತಂತ್ರದ ಇನ್ನೊಂದು ಮಗ್ಗುಲು.
 ಈ ಸರ್ವಾಂರ್ತಗತ್ವ ಮತ್ತು ಸರ್ವವ್ಯಾಪಿತ್ವ (ಆಲ್ ಇನ್‌ಕ್ಲೂಸಿವ್ ಆಯಂಡ್ ಆಲೆ ಪರ್ವ್ಯಾಸಿವ್-) ಸತ್ಯನಾರಾಯಣರ ಕಥೆಗಾರಿಕೆಯ ಮುಖ್ಯ ಲಕ್ಷಣ. ಕಲೆಗಾರಿಕೆಯ ದೃಷ್ಟಿಯಿಂದ ಸತ್ಯನಾರಾಯಣರ ಕಥೆಗಳಲ್ಲಿ ಮುಖ್ಯ ಕಥೆಯೊಂದಿಗೆ ಬರುವ ಉಪಕಥೆಗಳು, ಹತ್ತುಹನ್ನೊಂದು ಪ್ರಸಂಗಗಳು ಇವೆಲ್ಲವೂ ಬದು ಕನ್ನು ವ್ಯಾಖ್ಯಾನಿಸುವ ಹತಾರಗಳಾಗಿ ಕಥೆಗಳಿಗೆ ಸಾಂಕೇತಿಕತೆ ಮತ್ತು ರೂಪಕತೆಗಳ ಮಹತ್ವ ತಾನೇತಾನಾಗಿ ಪ್ರಾಪ್ತವಾಗಿ ಬಿಡುತ್ತದೆ.


 
  ಕಥನ ಕಲೆಯ ಪರಂಪರಾನುಗತ "ಸಂಕಥನ" ಗುಣವನ್ನು ಒಪ್ಪಿಕೊಂಡನಂತರವೂ ಭಿನ್ನವಾಗಿಕಾಣುವ ಸತ್ಯನಾರಾಯಣರ ಕಥೆಗಳನ್ನು ಸಾಂಪ್ರದಾಯಿಕ ಓದುಗರು ಹುಮ್ಮಸ್ಸಿನಿಂದ ಸ್ವೀಕರಿಸುವ ಬಗ್ಗೆ ಸಂದೇಹಗಳಿಲ್ಲ ಎನ್ನಲಾಗದು. ಮುಖ್ಯವಾಗಿ ಸಮ ಕಾಲೀನ ಚಾರಿತ್ರಿಕ ಪ್ರತಿಮೆಗಳಿಗೆ (ದಿ ಏಜ್ ಡಿಮಾಂಡೆಡ್ ಅನ ಇಮೇಜ್- ಗಮನಿಸಿ, ಸಬ್‌ಸಬಲ್ಟ್ರಾನ್ ಮೊದಲಾದ ಕತೆಗಳಲ್ಲಿ, ದೇವರಾಜ ಅರಸು, ಜಯಪ್ರಕಾಶ್ ನಾರಾಯಣ್, ನಜೀರ ಸಾಬ್ ಮೊದಲಾದ ರಾಜಕೀಯ ನೇತಾರರು ಸಾಹಿತ್ಯಕ ಸಂವೇದನೆಯಲ್ಲಿ ಪ್ರತಿಮಾ ಪುರುಷರಾಗುವ ಪರಿಯನ್ನು), ಅವುಗಳ ಹೃದಯ ಮಿಡಿತಕ್ಕೆ ತುಡಿವ ಸತ್ಯನಾರಾಯಣರ ಕತೆಗಳನ್ನು ಸಾಂಪ್ರದಾಯಿಕ ಅಭಿರುಚಿಯ ರಸಿಕರಿಗೆ ಒಪ್ಪಿಕೊಳ್ಳುವುದು ಕಷ್ಟವಾಗಬಹುದೇನೊ. ಏಕೆಂದರೆ ಕತೆಗಳಲ್ಲಿ ತೀವ್ರತೆ ಇದ್ದರೂ ಭಾವತೀವ್ರತೆ ಇಲ್ಲ. ಅಡಿಗರು ಹೇಳುವಂಥ ಭಾವೋ ದ್ದೀಪ್ತ ಫ್ಯಾಶನ್ ಇಲ್ಲ. ಇದ್ದರೂ ಅದನ್ನು ತುಂಬಾ ನಯನಾ ಜೂಕುಗಳಿಂದ ನಿರ್ವಹಿಸಲಾಗಿದೆ. ಸಾಂಪ್ರದಾಯಿಕ ಕಥೆೆಗಳಂತೆ ಈ ಕಥೆಗಳು ನಾಯಕ-ನಾಯಕಿ ಪ್ರಧಾನವಾದುವಲ್ಲ. ಪಾತ್ರಗಳ ಪೋಷಣೆ ಇಲ್ಲ. ಸಿನಿಮೀಯ ಕ್ಲೈಮ್ಯಾಕ್ಸ್ ಇಲ್ಲ. ಜೊತೆಗೆ, ಸ್ವಲ್ಪ ಎಚ್ಚರ ತಪ್ಪಿದರೆ, ಹರಟೆಯೋ ಲಲಿತ ಪ್ರಬಂಧವೋ ಎಂದು ದಿಕ್ಕು ತಪ್ಪಿಸುವಂಥ ವಿವರಗಳು. ಹೀಗಾಗಿ, ಸತ್ಯನಾರಾಯಣರ ಕಥೆಗಳ ಓದುಗರಿಗೆ, ಕಥೆಗಳೊಂದಿಗೆ ಅನುಸಂಧಾನಕ್ಕೆ ಕಥನದ ನಿರೂಪಕರಿಗಿರುವಂಥ ಸಾವಧಾನವಿರಬೇಕು, ಒಂದು ಮಟ್ಟದ ಪ್ರಬುದ್ಧತೆ ಇರಬೇಕು ಎನಿಸುತ್ತದೆ. ಇದೆಲ್ಲ ಏನೇ ಇದ್ದರೂ ಈ ವಿಶಿಷ್ಟ ಮಾದರಿಯ ಕತೆಗಳಲ್ಲಿನ ಸತ್ಯನಾರಾಯಣರ ಯಶಸ್ಸು ಗಣನೀಯವಾದುದು.
 
ಭರತ ವಾಕ್ಯ:
ಇದು ವಿನೂತನ ಕಥನ,
ಹೊಸ ಸಂವತ್ಸರಕೆ ನಮನ.
ಬಂದೆಯಾ ದುರ್ಮುಖಿ ಬಾ
ತೋರೆಮಗೆ ನಿನ್ನ ಶ್ರೀಮುಖ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X