ನೀರಿನ ಸಂರಕ್ಷಣೆ ಮತ್ತು ಭಾರತ
ವರ್ಲ್ಡ್ ವಾಟರ್ ಡೇ ಮಾರ್ಚ್ 22 ಮತ್ತು ಎರಡು ದಿನಗಳ ನಂತರ ಹೋಳಿ ಆಚರಿಸಲಾಯಿತು. ಆ ವಾರ ಒಂದು ದೊಡ್ಡ ಕ್ಲೀಷೆಯೆನಿಸಿದರೆ ತಪ್ಪೇನು ಇಲ್ಲ. ಸಂಭ್ರಮದ ಮತ್ತಿನಲ್ಲಿ ರಾಜಧಾನಿಯಲ್ಲಿ ನೀರಿನ ಪಿಸ್ತೂಲ್ ಮತ್ತು ಬಣ್ಣಗಳಿಂದ ಹೋಳಿ ವಸಂತ ತಂದಿತು. ಮತ್ತು ಒಳನಾಡು ಮಹಾರಾಷ್ಟ್ರದ ಒಣ ಪ್ರದೇಶಗಳಲ್ಲಿ, ರೈತರು ಬರಿದಾದ ಆಕಾಶ ನೋಡುತ್ತಾ, ನಾಲ್ಕು ದಶಕಗಳಲ್ಲಿ ತಮ್ಮ ಕೆಟ್ಟ ಬರಗಾಲದ ಬರೆಯನ್ನು ನೆನೆದು ನಿಟ್ಟುಸಿರು ಬಿಟ್ಟರು.
ನೀರಿನ ಕೊರತೆ ದೇಶಾದ್ಯಂತ ಜಿನುಗುವ ಸುದ್ದಿಯನ್ನು ಕೇಳಿ ರಾಷ್ಟ್ರೀಯ ಜಲ ಆಯೋಗ ನಿರ್ಲಕ್ಷ ತೋರಿಸುತ್ತಿದೆ. ಕೇಂದ್ರೀಯ ಜಲ ಆಯೋಗದ ಪ್ರಕಾರ ಈ ವಾರ ಪ್ರಮುಖ ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ತಮ್ಮ ಸಾಮರ್ಥ್ಯಕ್ಕಿಂತಲ ಕೇವಲ ಶೇ.27 ರಷ್ಟು ಹೆಚ್ಚಿತ್ತು. ಮತ್ತು 91 ಜಲಾಶಯಗಳು ಕಳೆದ ವರ್ಷದ ಮಟ್ಟಕ್ಕಿಂತಲೂ ಶೇ.30 ಕಡಿಮೆಯಾಗಿವೆ ಎಂದು ಆಯೋಗ ತಿಳಿಸಿದೆ. ಮುಂಗಾರು ಬೆಳೆಗಳು ಮತ್ತು ಜಲವಿದ್ಯುತ್ ಎರಡೂ ಕುಂಠಿತಗೊಂಡಿದ್ದು ಬೆಳೆಗಳು ನಾಶಗೊಳ್ಳುವುದು ಖಚಿತವಾಗಿದೆ. ಆದ್ದರಿಂದ ಈ ವರ್ಷದ ನೀರಿನ ವಾರದ ವಿಚಾರವನ್ನು (ಎಪ್ರಿಲ್ 4-8), ನೀರು ಎಲ್ಲರಿಗಾಗಿ-ಜೊತೆಯಾಗಿ ಶ್ರಮಿಸುವ ಎಂದಿದ್ದಾರೆ. ಸತತ ಎರಡು ಬರ ವರ್ಷಗಳು ಮತ್ತು ಮೂರು ಬೆಳೆ ವೈಫಲ್ಯಗಳು ನಂತರ, 12 ಬರ ಪೀಡಿತ ರಾಜ್ಯ ಗಳಲ್ಲಿ ಕೃಷಿ ಕುಟುಂಬಗಳು ನೀರಿನ ತೀವ್ರ ಕೊರತೆ ಎದುರಿಸುತ್ತಿವೆ. ಕೇಂದ್ರ ಮತ್ತು ರಾಜ್ಯ ಎರಡೂ ಹಂತಗಳಲ್ಲಿ ಅಂತರ್ಜಲ ಕೋಷ್ಟಕಗಳು ಮತ್ತು ವಿಭಿನ್ನ ಅಧಿಕಾರಿ ಗಳನ್ನು ಹೊಂದಿರುವ ವ್ಯವಸ್ಥೆಯ ನಡುವೆ ಅಭಿವೃದ್ಧಿ ಆಯ್ಕೆಗಳು ಕಠಿಣವಾಗಿವೆ.
ಮರಳುಗಾಡಿನ ಅಂಚಿನಲ್ಲಿ: ಮರಾಠವಾಡದ ನೀರಿನ ಬವಣೆ. ಪರಿಹಾರ ಕ್ರಮಗಳನ್ನು ಹೆಚ್ಚಾಗಿ ಕಾಗದದ ಮೇಲೆ ಉಳಿಯುತ್ತಿದ್ದು ತೊಂದರೆಗೀಡಾದ ಕುಟುಂಬಗಳನ್ನು ತಲುಪಲು ಬಹಳ ಸಮಯ ತೆಗೆದುಕೊಳ್ಳುತ್ತಿವೆ. ದೋಷಯುಕ್ತ ಬೆಳೆ ಯೋಜನೆ ಮತ್ತು ತಿರುಚಿದ ನೀರಿನ ಬಳಕೆ ನೆಲದ ಮತ್ತು ಮೇಲ್ಮೈ ನೀರಿನ ಸಂಪನ್ಮೂಲಗಳನ್ನು ಹಾಳು ಮಾಡುತ್ತಿವೆ. ಭಾರತದ ತೋಟಗಳಿಗೆ ನೀರಾವರಿ ಆಯೋಗದ ಪ್ರಕಾರ, ನೈಋತ್ಯ ಮಹಾರಾಷ್ಟ್ರ, ಮರಾಠವಾಡ ಮತ್ತು ವಿದರ್ಭ ಪ್ರದೇಶಗಳು ಸೇರಿದಂತೆ, ದೇಶದ ಭಾಗಗಳಲ್ಲಿ ವಿಶೇಷವಾಗಿ ಅಹಿತಕರ ಬರ ಪರಿಸ್ಥಿತಿ ತಲೆದೋರಿದೆ. ವಿಚಿತ್ರವೆಂದರೆ, ಮರಾಠವಾಡ ದೊಡ್ಡ ನೀರಾವರಿ ಯೋಜನೆಗಳು ಕೇವಲ ಕೆಲ ಬೆಳೆಗಳು ಮತ್ತು ಉದ್ಯಮಕ್ಕೆ ನೀರು ಪೂರೈಕೆ ಮಾಡುತ್ತಿವೆ. ಆದರೆ ಆ ಪ್ರದೇಶದಲ್ಲಿ 15,000 ಹಳ್ಳಿಗಳು ಒಣಗುತ್ತಿವೆ. ಲಾಹೋರ್ ನೀರಿನ ಗಲಭೆಗಳನ್ನು ತಪ್ಪಿಸಲು ಸರಕಾರ 144 ವಿಧಿಯನ್ನು ಲಾತೂರ್ ಮೇಲೆ ಹೇರಿದ್ದರ ಹಿಂದೆ ಯಾವುದೇ ಆಶ್ಚರ್ಯವಿಲ್ಲ. ಮಾರ್ಚ್ 18 ರಂದು ಪಂಜಾಬ್ ವಿಧಾನಸಭೆಯಲ್ಲಿ ಸಟ್ಲೆಜ್-ಯಮುನಾ ಲಿಂಕ್ ಕಾಲುವೆ ನಿರ್ಮಾಣ ವಿರುದ್ಧ ಒಂದು ನಿರ್ಣಯವನ್ನು ಜಾರಿಗೊಳಿಸಿತು. ಆ ಪ್ರಕಾರ ನೆರೆಯ ಹರ್ಯಾಣ ಜೊತೆ ರವಿ ಮತ್ತು ಬಿಯಸ್ ನದಿಗಳ ನೀರಿನ ಹಂಚಿಕೊಳ್ಳುತ್ತಿದ್ದುದನ್ನು ವಿರೋಧಿಸಿತ್ತು. ಇದನ್ನು ಅರವಿಂದ್ ಕೇಜ್ರಿವಾಲ್ ಬೆಂಬಲಿಸಿದ್ದರು ಕೂಡ. ಈ ಬೆಂಬಲದ ಹಿಂದೆ ಮುಂದಿನ ವರ್ಷದ ಪಂಜಾಬ್ ಚುನಾವಣೆ ದಿಲ್ಲಿ ಮುಖ್ಯ ಮಂತ್ರಿಯ ಉದ್ದೇಶವಾಗಿರುವುದು ಮಾತ್ರ ಸ್ಪಷ್ಟವಾಗುತ್ತದೆ. ಜೀವನೋಪಾಯದ ಒಂದು ಮೂಲಭೂತ ಸಂಪನ್ಮೂಲದ ಮೇಲೆ ಇಂತಹ ರಾಜಕೀಯ ಚಿತ್ತ ಒಂದು ಸಂಕುಚಿತ ಮನೋಭಾವವಾಗಿದೆ.
ದಿಲ್ಲಿಯ ನೀರಿನ ಪರಿಸ್ಥಿತಿಯು ಭಾರತದ ನಗರಗಳಲ್ಲಿ ನೀರಿನ ಬವಣೆಯನ್ನು ವಿವರಿಸುತ್ತದೆ. ಜನಸಂಖ್ಯೆ ಬೆಳವಣಿಗೆಯ ರಾಜಧಾನಿಯಲ್ಲಿ ತಾಜಾ ನೀರಿನ ಸಂರಕ್ಷಣೆ ಕುಂದಿದ್ದು ತಾಜಾ ನೀರಿನ ತಲಾ ಲಭ್ಯತೆ ಕಳೆದ 50 ವರ್ಷಗಳಲ್ಲಿ 3,000 ಘನ ಮೀಟರ್ ಇದ್ದು, ಈಗ 1,1213 ಘನ ಮೀಟರ್ ತಲುಪಿದೆ. ಸರಕಾರದ ನೀರು ಸರಬರಾಜು ಕೊಳವೆಗಳಿಂದ ನೀರು ಕದ್ದು ಕೊಳೆಗೇರಿಗಳಲ್ಲಿ ನೀರಿನ ಮಾಫಿಯಾ ನಡೆಸುವ ಹಲವರು ಕೊಳೆಗೇರಿ ನಿವಾಸಿಗಳನ್ನು ಶೋಷಿಸುತ್ತಿದ್ದಾರೆ. ಜಲ ಸಂಪನ್ಮೂಲ ಸಚಿವ ಉಮಾ ಭಾರತಿ ಇತ್ತೀಚೆಗೆ ಸರಕಾರದ ತಾಜಾ ನೀರಿನ ಉಳಿತಾಯ ಮಾಡಲು ನೀರಾವರಿ ಕ್ಷೇತ್ರಗಳಲ್ಲಿ ಮರುಬಳಕೆಗೆ ೞಚಿಕಿತ್ಸೆ ನೀರನ್ನು ಖರೀದಿಸಲು ರೈತರಿಗೆ ಉತ್ತೇಜಿಸಿ ಮಾತನಾಡಿದ್ದರು. ಈ ಉಪಾಯವೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಬಹುದು ಎನ್ನುತ್ತಾರೆ ಗ್ರಾಮೀಣ ತಜ್ಞ ಪಿ.ಸಾಯಿನಾಥ್. ಅವರು ನದಿಗಳು, ಹೊಳೆಗಳು ಹಾಗೂ ಕಾಲುವೆಗಳು ಖಾಸಗೀಕರಣ ಮಾಡುವುದರಿಂದ ಉಂಟಾಗಬಹುದಾದ ಅಪಾಯದ ಬಗ್ಗೆ ಒಂದು ದಶಕದ ಹಿಂದೆ ಎಚ್ಚರಿಕೆ ನೀಡಿದ್ದರು.
ಏನೇ ಇರಲಿ ಈ ನೀರಿನ ಬಳಕೆಯ ಕುರಿತಾಗಿ ಚಿಂತಿಸುವುದರ ಅಗತ್ಯವಿದ್ದು, ಅದು ಮೇಲ್ವರ್ಗಕ್ಕೆ ಮಾತ್ರ ಸಂಬಂಧಿಸಿರದೆ ನಿಜವಾಗಿ ನೀರಿನ ಅಗತ್ಯವಿರುವವರನ್ನು ಗಮನದಲ್ಲಿಟ್ಟುಕೊಂಡೇ ಚಿಂತಿಸುವುದು ಸೂಕ್ತ.







