‘ಮಾನವಿಕ ಶಾಸ್ತ್ರದ ಅಧ್ಯಯನ ಸ್ವಾವಲಂಬಿ ಬದುಕಿಗೆ ಪೂರಕ’

ಮಂಗಳೂರು, ಎ.9: ಮಾನವಿಕ ಶಾಸ್ತ್ರದ ಅಧ್ಯಯನದಿಂದ ಉತ್ತಮ ಸಾಧನೆಯ ಮೂಲಕ ಭವಿಷ್ಯದಲ್ಲಿ ಸಾರ್ಥಕ ಬದುಕನ್ನು ನಡೆಸಲು ಸಾಧ್ಯ. ಸಮಾಜ ವಿಜ್ಞಾನಗಳ ಅಧ್ಯಯನದಿಂದ ಖಾಸಗಿ ಹಾಗೂ ಸರಕಾರದ ವಿವಿಧ ಇಲಾಖೆಗಳಲ್ಲಿರುವ ಹಲವಾರು ಅವಕಾಶಗಳನ್ನು ಬಳಸಿಕೊಂಡು ಯುವ ಜನತೆ ಸದೃಢ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಸಂತ ಅಲೋಶಿಯಸ್ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನೋಬರ್ಟ್ ಲೋಬೊ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗಳೂರಿನ ಬಲ್ಮಠದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಮಾನವಿಕ ಸಂಘದ ವತಿಯಿಂದ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ರಮಾನಾಥ ಬಿ. ಅಧ್ಯಕ್ಷತೆ ವಹಿಸಿದ್ದರು. ಮಾನವಿಕ ಸಂಘದ ಸಂಚಾಲಕ ಡಾ. ಮೋಹಿತ್ ಸುವರ್ಣ ಸ್ವಾಗತಿಸಿದರು. ಮದೀನಾ ಸ್ವಾಹೀಬಾ ಕಾರ್ಯಕ್ರಮ ನಿರೂಪಿಸಿದರು. ಮಾನವಿಕ ಸಂಘದ ಕಾರ್ಯದರ್ಶಿ ಫಾತೀಮತ್ ಝಹುರಾ ವಂದಿಸಿದರು. ಹರ್ಷಿತಾ ಪ್ರಾರ್ಥಿಸಿದರು. ಪ್ರಾಧ್ಯಾಪಕ ಡಾ. ಜೋಶ್ನಾ ಮಹೇಶ್, ಶ್ರೀನಿವಾಸಯ್ಯ ಮತ್ತು ಶೈಲಾ ಕೆ. ಎನ್ ಉಪಸ್ಥಿತರಿದ್ದರು.





