ಸೆರ್ಕಳದಲ್ಲಿ ಸುನ್ನಿ ಆದರ್ಶ ಸಂಗಮ

ವಿಟ್ಲ, ಎ.9: ಸೆರ್ಕಳದ ನುಸ್ರತುಲ್ ಇಸ್ಲಾಮ್ ಬದ್ರ್ ಕಮಿಟಿಯ 40ನೆ ವಾರ್ಷಿಕ ಪ್ರಯುಕ್ತ ಸುನ್ನಿ ಆದರ್ಶ ಸಂಗಮ ಇಲ್ಲಿನ ತಾಜುಲ್ ಉಲಮ ವೇದಿಕೆಯಲ್ಲಿ ನಡೆಯಿತು. ಶೈಖುನಾ ಮಂಚಿ ಉಸ್ತಾದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಸಖಾಫಿ ಸುರಿಬೈಲು ಉದ್ಘಾಟಿಸಿದರು. ಸ್ವಾದಿಖ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್‌ವೈಎಸ್ ಕೇರಳ ರಾಜ್ಯಾಧ್ಯಕ್ಷ ಶೈಖುನಾ ಪೇರೋಡ್ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು.
ವೇದಿಕೆಯಲ್ಲಿ ಸೈಯದ್ ಶಿಹಾಬುದ್ದೀನ್ ತಂಙಳ್ ಪಡಾರು ಮದಕ, ಅಬ್ದುಲ್ ಹಮೀದ್ ಸಖಾಫಿ ತಲಕ್ಕಿ, ಅಬ್ದುರ್ರಹ್ಮಾನ್ ಅಮ್ಟೂರು, ಜಿಪಂ ಸದಸ್ಯ ಎಂ.ಎಸ್. ಮುಹಮ್ಮದ್, ಸುಲೈಮಾನ್ ಹಾಜಿ ಸಿಂಗಾರಿ, ಮುತ್ತಲಿಬ್ ಹಾಜಿ ಕೆ.ಪಿ.ಬೈಲು, ಸಿ.ಎಚ್ ಅಬೂಬಕರ್ ಸೆರ್ಕಳ, ಕೆ.ಬಿ ಯೂಸುಫ್ ಸೆರ್ಕಳ, ಇಸ್ಹಾಕ್ ಮದನಿ ಕಂಡಿಗ, ಅಬ್ದುರ್ರಹ್ಮಾನ್ ಮದನಿ ಬೊಳ್ಮಾರ್, ಅಬ್ದುಲ್ ಖಾದರ್ ಮದನಿ ನಾಟೆಕಲ್, ಹಮೀದ್ ಮುಸ್ಲಿಯಾರ್ ಬಾರಬೆಟ್ಟು, ಸುಲೈಮಾನ್ ಮುಸ್ಲಿಯಾರ್ ನಾರ್ಶ, ಮಜೀದ್ ಮದನಿ ಕುಡ್ತಮುಗೇರ್, ಅಬ್ದುರ್ರಹ್ಮಾನ್ ಸಖಾಫಿ ಬೋಳಂತೂರು, ಸುನ್ನಿ ಪೈಝಿ ಪೆರುವಾಯಿ, ಪುತ್ತುಬಾವ ಹಾಜಿ ಸಾಂಬಾರ್‌ತೋಟ, ಹಮೀದ್ ಮದನಿ ಅಶ್‌ಅರಿಂ್ಯು, ಮಹ್ಮೂದ್ ಸಅದಿ ಬಾರೆಬೆಟ್ಟು, ಅಬೂಬಕರ್ ಮದನಿ ಪಂಜರಕೋಡಿ, ಅಶ್ರಫ್ ನಾರ್ಶ, ಅಬ್ದುಲ್ಲ ಕೊಳಕೆ, ಶರೀಫ್ ನಂದಾವರ, ಅಬ್ಬಾಸ್ ಸಖಾಫಿ, ಅಬೂಬಕರ್ ಸಅದಿ ಸೆರ್ಕಳ, ಅಬ್ದುಲ್ ಖಾದರ್ ಮುಸ್ಲಿಯಾರ್ ಸೆರ್ಕಳ, ಉಸ್ಮಾನ್ ಮದನಿ, ಇಬ್ರಾಹೀಂ ಸಖಾಫಿ ಸೆರ್ಕಳ ಉಪಸ್ಥಿತರಿದ್ದರು.
ಖತೀಬ್ ಅಶ್ರಫ್ ಸಅದಿ ಸ್ವಾಗತಿಸಿದರು. ಅಕ್ಬರ್ ಅಲಿ ಮದನಿ ಸೆರ್ಕಳ ನಗರ ವಂದಿಸಿದರು.





