. ಬಂಟ್ವಾಳ: ಬೀಳ್ಕೊಡುಗೆ ಸಮಾರಂಭ

ಬಂಟ್ವಾಳ, ಎ.9: ಇಲ್ಲಿನ ತೌಹೀದ್ ಅರಬಿಕ್ ಮದ್ರಸದಲ್ಲಿ ಮುಖ್ಯ ಶಿಕ್ಷಕರಾಗಿದ್ದ ಬಿ.ಕೆ. ಯೂಸುಫ್ ಮುಸ್ಲಿಯಾರಿಗೆ ಸಂಸ್ಥೆಯ ವತಿಯಿಂದ ಇತ್ತೀಚೆಗೆ ಬೀಳ್ಕೊಡಲಾಯಿತು.
ಬಂಟ್ವಾಳ ಮುದರ್ರಿಸ್ ಅನ್ಸಾರುದ್ದೀನ್ ಫೈಝಿ ಬುರ್ಹಾನಿ ದುಆಗೈದರು. ಶಾಲಾ ಸಂಚಾಲಕ ಹಾಜಿ ಎ.ಆರ್ ಮುಹಮ್ಮದ್ ಅಲಿ ಅಧ್ಯಕ್ಷತೆ ವಹಿಸಿದ್ದರು. ಮುಸ್ತಫಾ ಫೈಝಿ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಹಾಜಿ ಬಿ. ಸುಲೈಮಾನ್, ಸಂಚಾಲಕ ಹಾಜಿ ಎ.ಆರ್. ಮುಹಮ್ಮದಲಿ ಸನ್ಮಾನಿಸಿದರು. ಸಂಸ್ಥೆಯ ಕಾರ್ಯದರ್ಶಿ ಹಾಜಿ ಬಿ. ಮುಹಮ್ಮದ್ ಹಾಗೂ ಸ್ಟಾಫ್ ಕೌನ್ಸಿಲ್ ಸೆಕ್ರೆಟರಿ ಎ.ಎಚ್. ಹಮೀದ್ ದಾರಿಮಿ ಅಭಿನಂದನಾ ಭಾಷಣಗೈದರು.
ಅಬ್ದುಲ್ ಮಜೀದ್ ದಾರಿಮಿ ಸ್ವಾಗತಿಸಿ, ಉಸ್ಮಾನ್ ಮುಸ್ಲಿಯಾರ್ ವಂದಿಸಿದರು.
Next Story





