ಪಣಂಬೂರು: ನೌಕಾ ದಿನಾಚರಣೆ

ಮಂಗಳೂರು, ಎ.9: ನೌಕಾ ವಿಭಾಗದಲ್ಲಿ ಸೇವೆ ಸಲ್ಲಿಸಿ ಪ್ರಾಣತ್ಯಾಗ ಮಾಡಿದವರ ಸೇವೆಯನ್ನು ಗುರುತಿಸುವಂತಹ ಕಾರ್ಯ ಇತ್ತೀಚಿನ ದಿನಗಳಲ್ಲೊ ನಡೆಯುತ್ತಿಲ್ಲ ಎಂದು ಚೆನ್ನೈಯ ಎಂ.ಎಂ.ಡಿಯ ಮಾಜಿ ಮುಖ್ಯ ಅಧಿಕಾರಿ ಪೂರ್ಣೇಂದು ಮಿಶ್ರ ಹೇಳಿದರು.
ಪಣಂಬೂರು ನವಮಂಗಳೂರು ಬಂದರು ಮಂಡಳಿ ಆಡಳಿತ ಕಚೇರಿಯ ಸಭಾಂಗಣದಲ್ಲಿ ನಡೆದ 53ನೆ ರಾಷ್ಟ್ರೀಯ ನೌಕಾ ದಿನಾಚರಣೆಯಲ್ಲಿ ಅತಿಥಿಯಾಗಿ ಅವರು ಮಾತನಾಡಿದರು.
ಎನ್‌ಎಂಪಿಟಿ ಅಧ್ಯಕ್ಷ ಪಿ.ಸಿ.ಪರೀಡಾ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಂಪಿಟಿ ಉಪಾಧ್ಯಕ್ಷ ಸುರೇಶ್ ಪಿ. ಶಿರ್ವಾಡ್‌ಕರ್ , ಎನ್‌ಎಮ್‌ಡಿಸಿ ಅಧ್ಯಕ್ಷ ಕ್ಯಾ.ಪ್ರದೀಪ್ ಮಹಾಂತಿ, ಉಪಾಧ್ಯಕ್ಷ ಪಿ.ಕೆ.ಎಸ್ ಪಿಲ್ಲೈ, ಕಾರ್ಯದರ್ಶಿ ಪೌಲ್ ವಿ.ವಿ ಉಪಸ್ಥಿತರಿದ್ದರು.
Next Story





