ಸ್ಥಳೀಯ ಕಾರ್ಯಸಾಧು ನೀರಿನ ಯೋಜನೆಗಳಿಗೆ ರಾಷ್ಟ್ರಪತಿ ಸಲಹೆ

ಹೊಸದಿಲ್ಲಿ, ಎ.9: ಹಲವು ಸಮುದಾಯಗಳಿಗೆ ಇಂದಿಗೂ ಕುಡಿಯುವ ನೀರಿನ ಸೌಲ್ಯ ಇಲ್ಲ. ಇಂಥ ಪ್ರದೇಶಗಳಲ್ಲಿ ಆರ್ಥಿಕ ಪ್ರಗತಿ ಯೋಜನೆ ಕೈಗೊಳ್ಳುವ ಬದಲು ಸ್ಥಳೀಯವಾಗಿ ಕಾರ್ಯಸಾಧು ಎನಿಸಿದ ತಂತ್ರಜ್ಞಾನದ ಯೋಜನೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೂಚಿಸಿದರು.
ಹಲವು ಸಮುದಾಯಗಳಿಗೆ ಇಂದಿಗೂ ಸಮರ್ಪಕ ಕುಡಿಯುವ ನೀರಿನವ್ಯವಸ್ಥೆ ಇಲ್ಲ. ಅಂಥ ಪ್ರದೇಶದ ಜನ ಇಂದಿಗೂ ಆರ್ಥಿಕ ಚಟುವಟಿಕೆಯ ಬದಲಾಗಿ ನೀರು ಸಂಗ್ರಹಿಸುವ ಸಲುವಾಗಿ ಸಮಯ ಹಾಗೂ ಶಕ್ತಿಯನ್ನು ವಿನಿಯೋಗಿಸುತ್ತಾರೆ ಎಂದು ಹೇಳಿದರು.
ಉತ್ತಮ ಸೌಲ್ಯವನ್ನು ಕಲ್ಪಿಸಿದರೆ ಅವರನ್ನು ಪುನರುಜ್ಜೀವನಗೊಳಿಸಬಹುದು. ಸ್ಥಳೀಯವಾಗಿ ಕಾರ್ಯಸಾಧು ಎನಿಸುವ ಯೋಜನೆಗಳು ಹಾಗೂ ಮಾರುಕಟ್ಟೆ ಮಾಡಬಹುದಾದ ಸಂಶೋಧನೆಗಳನ್ನು ಅಂಥ ಸಮುದಾಯಗಳಿಗೆ ಪರಿಚಯಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ನಾಲ್ಕನೇ ಬಾರತ ಜಲ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ಮಳೆನೀರು ಸಂಗ್ರಹದಂತಹ ಯೋಜನೆಗಳನ್ನು ಉದ್ಯೋಗ ಖಾತ್ರಿಯಂತಹ ಗ್ರಾಮೀಣಾಭಿವೃದ್ಧಿ ಯೋಜನೆಗಳ ಜತೆ ಸಂಪರ್ಕ ಕಲ್ಪಿಸುವ ಅಗತ್ಯವಿದೆ. ಇದರಿಂದ ಸ್ಥಳೀಯರನ್ನು ಜಲ ಸಂರಕ್ಷಣೆಗೆ ಪ್ರೇರೇಪಿಸಬಹುದು ಎಂದು ಅಭಿಪ್ರಾಯಪಟ್ಟರು. ಕುಸಿಯುತ್ತಿರುವ ಅಂತರ್ಜಲವನ್ನು ಸಂರಕ್ಷಿಸುವ ಅಗತ್ಯವಿದೆ ಎಂದು ಹೇಳಿದರು.
ಸಾಧ್ಯವಾದಷ್ಟೂ ಮಟ್ಟಿಗೆ ಅಂತರ್ಜಲ ಸಂರಕ್ಷಿಸಬೇಕು. ಸುಧಾರಿತ ನೀರು ಬಳಕೆ ತಂತ್ರಜ್ಞಾನಗಳನ್ನು ಬಳಸುವುದು ಹಾಗೂ ಉತ್ತಮ ನೀರಾವರಿ ನಿರ್ವಹಣೆ ತಂತ್ರಗಳನ್ನು ಬಳಸುವುದು ಸೂಕ್ತ ಎಂದು ಸೂಚಿಸಿದರು.
ದೇಶದ ಅಂತರ್ಜಲ ಸಂಪನ್ಮೂಲದ ಪ್ರಮಾಣ ಹಾಗೂ ಗುಣಮಟ್ಟದ ಲಭ್ಯತೆ ಬಗ್ಗೆ ಮಾಹಿತಿ ವ್ಯವಸ್ಥೆಯನ್ನು ಬಲಪಡಿಸಬೇಕು. ಆಗ ಮಾತ್ರ ನೀರು ಸಂರಕ್ಷಣೆ ಕುರಿತ ಪರಿಣಾಮಕಾರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಬಹುದು ಎಂದು ಅಭಿಪ್ರಾಯಪಟ್ಟರು.
ಈ ಸಂದಭರ್ ಮಾತನಾಡಿದ ಜಲ ಸಂಪನ್ಮೂಲ ಖಾತೆ ಸಚಿವೆ ಉಮಾಭಾರತಿ, ನದಿ ಜೋಡಣೆ ಯೋಜನೆಯೂ ಸೇರಿದಂತೆ ನೀರಾವರಿ ಉತ್ತಮಪಡಿಸುವ 31 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ಇದರಿಂದ 35 ದಶಲಕ್ಷ ಹೆಕ್ಟೇರ್‌ಗೆ ನೀರಾವರಿಸೌಲ್ಯ ಸಿಗಲಿದ್ದು, 34 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುವುದು ಎಂದು ವಿವರಿಸಿದರು.





