ಉಡುಪಿ: ಇಂದು ಸೈಕಲ್ ಜಾಥಾ
ಉಡುಪಿ, ಎ.9: ವಿಶ್ವ ಆರೋಗ್ಯ ದಿನಾಚರಣೆಯ ಪ್ರಯುಕ್ತ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಸಂಘ ಉಡುಪಿ ಶಾಖೆಯು ಎ.10ರಂದು ಸೈಕಲ್ ಜಾಥಾ ಹಮ್ಮಿಕೊಂಡಿದೆ. ಜಾಥಾಕ್ಕೆ ಅಂದು ಬೆಳಗ್ಗೆ 6:30ಕ್ಕೆ ಉಡುಪಿ ಎಸ್ಪಿ ಅಣ್ಣಾಮಲೈ ಚಾಲನೆ ನೀಡುವರು.ಜಾಥಾವು ಉಡುಪಿಯ ಐಎಂಎ ಭವನದಿಂದ ಆರಂಭವಾಗಿ ಉದ್ಯಾವರ -ಪಡುಕೆರೆ ಮಾರ್ಗವಾಗಿ ಮಲ್ಪೆಬೀಚ್ ಮುಖಾಂತರ ಕರಾವಳಿ ಮಾರ್ಗವಾಗಿ ಉಡುಪಿ ತಲುಪಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story





