ಮಹಾರಾಷ್ಟ್ರ: ಧಾರ್ಮಿಕ ಸ್ಥಳಗಳಲ್ಲಿ ಭಕ್ತರ ಸ್ನಾನಕ್ಕೆ ಟ್ಯಾಂಕರ್ ನೀರು

ನಾಸಿಕ್, ಎ.9: ಇಲ್ಲಿಗೆ ಸಮೀಪದ ಗೋದಾವರಿ ನದಿ ತೀರದಲ್ಲಿ ಇರುವ ಪವಿತ್ರ ರಾಮಕುಂಡ ಪ್ರದೇಶಲ್ಲಿ ನೀರಿನ ಕೊರತೆಯಿಂದಾಗಿ ಭಕ್ತರ ಸ್ನಾನಕ್ಕಾಗಿ ಟ್ಯಾಂಕರ್‌ನಲ್ಲಿ ನೀರು ತುಂಬಲಾಗುತ್ತಿದೆ.
ಟ್ಯಾಂಕರ್‌ಗಳ ಮಾಲಕರಿಗೆ ಈ ಸಂಬಂಧ ಮನವಿ ಮಾಡಿಕೊಳ್ಳಲಾಗಿದೆ ಎಂದು ಮೇಯರ್ ಅಶೋಕ್ ಮುರ್ತಾದಕ್ ಹೇಳಿದ್ದಾರೆ. ಇದಕ್ಕೆ ಟ್ಯಾಂಕರ್ ಮಾಲಕರು ಸ್ಪಂದಿಸಿ ನಿನ್ನೆ 50-60 ಟ್ಯಾಂಕರ್ ನೀರು ತಂದು ಕುಂಡಕ್ಕೆ ತುಂಬಿದ್ದಾರೆ ಎಂದು ವಿವರಿಸಿದ್ದಾರೆ.
ಮರಾಠರ ಹೊಸವರ್ಷವಾದ ಗುಡಿ ಪಾಡ್ವಾ ಸಂದರ್ಭದಲ್ಲಿ ಸ್ಥಳೀಯರು ಸೇರಿದಂತೆ ಭಕ್ತಾದಿಗಳು ಪವಿತ್ರ ಸ್ನಾನ ಮಾಡುವುದು ಸಾಧ್ಯ ವಾಯಿತು ಎಂದು ಹೇಳಿದರು.
Next Story





