ಕೇರಳದ ರಾಜಕೀಯದಲ್ಲಿ ಬದಲಾವಣೆ ಹವಾ: ಪ್ರತಾಪ್ ರೂಡಿ

ಮಂಗಳೂರು, ಎ.9: ಕೇರಳದಲ್ಲಿ ರಾಜಕೀಯ ಬದ ಲಾವಣೆಯ ವಾತಾವರಣ ಕಾಣಿಸುತ್ತಿದೆ. ಅಲ್ಲಿನ ಜನತೆ ವ್ಯವಸ್ಥೆಯಲ್ಲಿ ಪರ್ಯಾಯವನ್ನು ಬಯಸುತ್ತಿದ್ದು, ಅಲ್ಲಿನ ಪ್ರಸಕ್ತ ಸ್ಥಿತಿ ಗತಿಯನ್ನು ಅವಲೋಕಿಸಿದರೆ ಬಿಜೆಪಿ ಅಲ್ಲಿ ಅಧಿಕಾರಕ್ಕೇರಿದರೂ ಅಚ್ಚರಿ ಪಡಬೇಕಾಗಿಲ್ಲ ಎಂದು ಕೇಂದ್ರದ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮ ಶೀಲತೆ ಸಚಿವ ರಾಜೀವ್ ಪ್ರತಾಪ್ ರೂಡಿ ಹೇಳಿದ್ದಾರೆ.
ಕೇರಳ ಭೇಟಿಯ ಹಿನ್ನೆಲೆಯಲ್ಲಿ ಇಂದು ಮೇರಿಹಿಲ್‌ನ ವಿಕಾಸ ಕಾಲೇಜಿಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲೂ ಬದಲಾವ ಣೆಯ ನಿರೀಕ್ಷೆ ಮೂಡಿದೆ. ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿ.ಎಸ್.ಯಡಿಯೂರಪ್ಪರಿಗೆ ಅಭಿ ನಂದನೆ ಸಲ್ಲಿಸುತ್ತಿದ್ದೇನೆ. ಅವರೊಬ್ಬ ಪ್ರಭಾವಶಾಲಿ ನಾಯಕರಾಗಿದ್ದು, ಅವರ ಬಗ್ಗೆ ತಮಗೆ ಹೆಮ್ಮೆ ಇರುವು ದಾಗಿ ಹೇಳಿದರು.
Next Story





