ಡಾರ್ಕ್ ಸರ್ಕಲ್ಸ್ : ಮನೆಯಲ್ಲೇ ಮಾಯ ಮಾಡಿ !
ಕಣ್ಣಿನ ಸುತ್ತ ಕಪ್ಪು ವೃತ್ತದಿಂದ ಬೇಸತ್ತು ಅದರಿಂದ ಮುಕ್ತಿ ಪಡೆಯಲು ಪ್ರಯತ್ನಿಸಿ ಸುಸ್ತಾಗಿದ್ದೀರಾ? ರಾಸಾಯನಿಕ ಜೆಲ್ ಬಿಟ್ಟುಬಿಡಿ. ಈ ಕೆಳಗಿನ ವಸ್ತುಗಳಿಂದ ನಾವೇ ಮನೆಯಲ್ಲಿ ಇದಕ್ಕೆ ಮದ್ದು ತಯಾರಿಸಿಕೊಳ್ಳಬಹುದು. ಅದು ಸಹಜವಾಗಿಯೇ ಕಪ್ಪುಕಲೆ ಮಾಯ ಮಾಡುತ್ತದೆ. ಆದರೆ ಹಚ್ಚುವ ವೇಳೆ ಕಣ್ಣಿಗೆ ಹೋಗದಂತೆ ಎಚ್ಚರ ವಹಿಸಿ.
ಪನ್ನೀರು:
ಎರಡು ಹತ್ತಿ ಉಂಡೆಯನ್ನು ಪನ್ನೀರಲ್ಲಿ ಮುಳುಗಿಸಿ, ಕಣ್ಣ ಗುಡ್ಡೆಗಳ ಮೇಲಿಡಿ. 10 ನಿಮಿಷ ಬಳಿಕ ತೆಗೆಯಿರಿ.
ಮುಳ್ಳುಸೌತೆ:
ಇದರಲ್ಲಿ ಚರ್ಮ ತಿಳಿಗೊಳಿಸುವ ಪ್ರೊಟೀನ್‌ಗಳಿವೆ. ಹಸಿರು ಸೌತೆ ತೆಗೆದುಕೊಂಡು, ದಪ್ಪದಾಗಿ ಕತ್ತರಿಸಿಕೊಳ್ಳಿ. ಫ್ರಿಡ್ಜ್‌ನಲ್ಲಿ ತಣ್ಣಗಾಗಿಸಿ. ಅರ್ಧ ಗಂಟೆ ಬಳಿಕ ಹೊರತೆಗೆದು ಮುಚ್ಚಿದ ಕಣ್ಣಿನ ಮೇಲೆ 10-15 ನಿಮಿಷ ಇಡಿ. ಬಳಿಕ ನೀರಿನಿಂದ ತೊಳೆದುಕೊಳ್ಳಿ.
ಟೊಮ್ಯಾಟೊ:
ಇದು ಕೂಡಾ ಚರ್ಮ ತಿಳಿಗೊಳಿಸುವ ಗುಣ ಹೊಂದಿದೆ. ಒಂದು ಚಮಚ ಟೊಮ್ಯಾಟೊ ರಸ ತೆಗೆದುಕೊಂಡು, ಅಷ್ಟೇ ಪ್ರಮಾಣದ ನಿಂಬೆರಸ ಜತೆ ಸೇರಿಸಿ. ಈ ಮಿಶ್ರಣವನ್ನು ಕಣ್ಣುಗಳ ಸುತ್ತ ಲೇಫಿಸಿ. 10 ನಿಮಿಷ ಬಳಿಕ ತಣ್ಣೀರಿನಿಂದ ತೊಳೆಯಿರಿ.
ಆಲೂಗಡ್ಡೆ:
ಆಲೂಗಡ್ಡೆಯನ್ನು ಸ್ವಚ್ಛಗೊಳಿಸಿ ತೆಳ್ಳಗೆ ಕತ್ತರಿಸಿ, ತಕ್ಷಣ ಕಣ್ಣಿನ ಮೇಲೆ 15-20 ನಿಮಿಷ ಇಡಿ. ಸಾಮಾನ್ಯ ನೀರಿನಿಂದ ತೊಳೆದುಕೊಳ್ಳಿ.
ಬಾದಾಮಿ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ಕಣ್ಣಿನ ಸುತ್ತ ಲೇಪಿಸಿ ಮಸಾಜ್ ಮಾಡಿ. ಆರರಿಂದ ಏಳು ಪುದಿನಾ ಎಲೆಗಳನ್ನು ಜಜ್ಜಿ ಕಣ್ಣಿನ ಸುತ್ತ 10-15 ನಿಮಿಷ ಇಟ್ಟು ತಣ್ಣೀರಿನಿಂದ ತೊಳೆಯಿರಿ.